ಶಿವಮೊಗ್ಗ : ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ಬಿ ಎಂ ಲಕ್ಷ್ಮೀಪ್ರಸಾದ್ ಅವರನ್ನು ವರ್ಗಾವಣೆ ಮಾಡಿ ಸರ್ಕಾರದ ಅಧೀನ ಕಾರ್ಯದರ್ಶಿ ಹೆಚ್.ಆರ್. ಅನುರಾಧ ಅವರು ಆದೇಶ ಹೊರಡಿಸಿದ್ದಾರೆ. ಇದರ ಜೊತೆಗೆ ಇನ್ನು ಮೂವರು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ. ಬಿ ಎಂ ಲಕ್ಷ್ಮೀ ಪ್ರಸಾದ್ ಅವರು ಸುಮಾರು ಒಂದೂವರೆ ವರ್ಷದಿಂದ ಶಿವಮೊಗ್ಗದಲ್ಲಿ ಎಸ್ಪಿಯಾಗಿ ಕೆಲಸ ಮಾಡುತ್ತಿದ್ದರು.
ಇದೀಗ ಲಕ್ಷ್ಮೀ ಪ್ರಸಾದ್ ಅವರ ಜಾಗಕ್ಕೆ ನೂತನ ಎಸ್ಪಿಯಾಗಿ ಈ ಹಿಂದೆ ಸಿಐಡಿ ವಿಭಾಗದಲ್ಲಿದ್ದ ಜಿ ಕೆ ಮಿಥುನ್ ಕುಮಾರ್ ನೇಮಕಗೊಂಡಿದ್ದಾರೆ. ಹರ್ಷನ ಕೊಲೆ ಸೇರಿದಂತೆ ಹಲವು ಕೇಸ್ ಗಳನ್ನು ಮಿಥುನ್ ಕುಮಾರ್ ಯಶಸ್ವಿಯಾಗಿ ನಿಭಾಯಿಸಿದ್ದರು. ಗಾಂಜಾ ಮಾರಾಟದ ಜಾಲವನ್ನು ಭೇದಿಸಿದ್ದರು.