ಮಾಹಿತಿ ಕೃಪೆ :
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿತ್ರದುರ್ಗ

ಚಿತ್ರದುರ್ಗ,(ಫೆ.27): ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ವತಿಯಿಂದ ಭಾರತ ಸರ್ಕಾರದ ಮಾರ್ಗ ಸೂಚನೆಗಳಂತೆ ಒಂದು ದಿನ ಕಾರ್ಯಾಗಾರವನ್ನು ಎಲ್ಲಾ ತಾಲ್ಲೂಕುಗಳಲ್ಲಿ ಬರುವ ಪೆಟ್ ಶಾಪ್ ಮಾಲೀಕರಿಗೆ Prevention of Cruelty to Animals (Pet Shop) Rules 2018 ಕುರಿತಂತೆ ಅರಿವು ಮೂಡಿಸಲು ಹಾಗೂ ಪೆಟ್ ಶಾಪ್ ನಡೆಸಲು ಪಾಲಿಸಬೇಕಾದ ಕ್ರಮಗಳು ಮತ್ತು ನಿಯಮಗಳ ತಿಳಿಸಲು ತರಬೇತಿ ಕಾರ್ಯಾಗಾರವನ್ನು ಮಾರ್ಚ್ 4 ರಂದು ಬೆಳಿಗ್ಗೆ 11ಕ್ಕೆ ಚಿತ್ರದುರ್ಗದ ಪಾಲಿಕ್ಲಿನಿಕ್ ಪಶು ಆಸ್ಪತ್ರೆ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.

ಆದ್ದರಿಂದ ಎಲ್ಲಾ ಪೆಟ್ ಶಾಪ್ ಮಾಲೀಕರು ಭಾಗವಹಿಸಬೇಕು ಎಂದು ಪಶುಪಾಲನಾ ಮತ್ತು ಪಶು ವೈದ್ಯಸೇವಾ ಇಲಾಖೆಯ ಉಪನಿರ್ದೇಶಕರು ಕೋರಿದ್ದಾರೆ.

