ಚಿತ್ರದುರ್ಗ, (ಫೆ.06) : ಬೋನ್ಸಾಯ್ ಗಿಡಗಳು ಅಂದರೆ ಕುಬ್ಜ ಮರಗಳು,ಇವುಗಳ ಮೂಲ ಭಾರತದ ಕಿಷ್ಕಿಂದವನ ನಂತರ ಜಪಾನಿನಲ್ಲಿ ಈ ಗಿಡಗಳು ಹೆಚ್ಚಾಗಿ ಕಂಡುಬಂದು ಪ್ರಸಿದ್ದಿಯಾಯಿತು. ಬೋನ್ಸಾಯ್ ಮಾಡಲು ಗಿಡಗಳ ಆಯ್ಕೆ, ಗಿಡವನ್ನು ಕಟಿಂಗ್ ಮತ್ತು ರೀಪಾಟಿಂಗ್ ಹೇಗೆ ಮಾಡಬೇಕು ಎಂಬುದನ್ನು ಮಂಜುಯಾದವ್ ಅವರು ತಿಳಿಸಿದರು.
ಬೋನ್ಸಾಯ್ ಬೆಳೆಸಲು ಮುಖ್ಯವಾಗಿ ಬಹಳಷ್ಟು ತಾಳ್ಮೆ ಅತ್ಯಗತ್ಯ. ಹದಿನೈದು ದಿನಗಳಿಗೊಮ್ಮೆ ಗೊಬ್ಬರದ ನೀರು ಹಾಕುವುದು, ವರ್ಷಕ್ಕೊಮ್ಮೆ ರೀಪಾಟಿಂಗ್ ಮತ್ತಿತರ ಸಲಹೆಗಳನ್ನು ಮಂಜುಯಾದವ್ ನೀಡಿದರು.
ನಗರದ ತೋಟಗಾರಿಕೆ ಇಲಾಖೆಯ ಕಚೇರಿಯ ಸಭಾಂಗಣದಲ್ಲಿ ಸೋಮವಾರ (ಫೆ.06) 30ನೇ ಫಲಪುಷ್ಪ ಪ್ರದರ್ಶನದ ಅಂಗವಾಗಿ ಫೆಬ್ರವರಿ 10 ರಿಂದ ನಡೆಯುವ 30 ನೇ ಫಲಪುಷ್ಪ ಪ್ರದರ್ಶನದ ಅಂಗವಾಗಿ ಬೋನ್ಸಾಯ್ ಪರಿಣಿತ ಮಂಜುಯಾದವ್ ಅವರಿಂದ ಫಲಪುಷ್ಪ ಸಂಘದ ಸದಸ್ಯರಿಗೆ ತರಬೇತಿಯನ್ನು ಆಯೋಜಿಸಲಾಗಿತ್ತು.
ಮತ್ತು ಮಂಜುಯಾದವ್ ಅವರ ಬೋನ್ಸಾಯ್ ಗಿಡಗಳನ್ನು 3 ದಿನಗಳ ಕಾಲ ನಡೆಯುವ ಫಲಪುಷ್ಪ ಪ್ರದರ್ಶನದಲ್ಲಿ ನೋಡಬಹುದು.
ಈ ಕಾರ್ಯಕ್ರಮದಲ್ಲಿ ಅಧಿಕಾರಿ ರೂಪ ಸಂಘದ ಪದಾಧಿಕಾರಿಗಳಾದ ಸುಜಯಾ ಪ್ರಕಾಶ್,ಗಿರೀಶ್ ಯಾದವ್,ರೀನಾ ವೀರಭದ್ರಪ್ಪ, ನಾಗರಾಜ್ ಬೇಂದ್ರೆ, ಸುಜಾತ ಜೀವಿತೇಶ್, ಸುಮಾ ತಿಮ್ಮಾರೆಡ್ಡಿ, ಅನ್ನಪೂರ್ಣ ಸಜ್ಜನ್, ಮೀನಾ ರಮೇಶ್, ಅರುಣ ಮುಂತಾದ ಸದಸ್ಯರು ಭಾಗವಹಿಸಿದ್ದರು.