in ,

ಪ್ರಶಿಕ್ಷಣಾರ್ಥಿಗಳು ನಟನಾ ಕೌಶಲ್ಯ ಅರಿತಿರಬೇಕು : ಮೈಸೂರು ರಮಾನಂದ

suddione whatsapp group join

ಚಿತ್ರದುರ್ಗ: (ಜ.25) : ವಿದ್ಯಾರ್ಥಿಗಳು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಮಸ್ತಕದಲ್ಲಿ ಸಂಗ್ರಹಿಸಿದ ವಿಷಯಗಳು ಪಾಠ ಬೋಧನೆಗೆ ಸಹಕಾರಿಯಾಗುತ್ತವೆ. ಪಠ್ಯಾಧಾರಿತ ವಸ್ತುಗಳಿಗೆ ಪಠ್ಯೇತರ ಚಟುವಟಿಕೆಗಳು ಪೂರಕವಾಗಿರಬೇಕು ಎಂದು ಚಲನಚಿತ್ರ ಹಾಸ್ಯನಟ ಹಾಗೂ ನಾಟಕಕಾರ ಮೈಸೂರು ರಮಾನಂದ ಅಭಿಪ್ರಾಯಪಟ್ಟರು.

ನಗರದ ಶ್ರೀರಾಘವೇಂದ್ರ ಶಿಕ್ಷಣ ಮಹಾವಿದ್ಯಾಲಯದ ಸಭಾಂಗಣದಲ್ಲಿ ರಂಗಸೌರಭ ಕಲಾ ಸಂಘ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಹಾಗೂ ಗೆಜ್ಜೆಹೆಜ್ಜೆ ರಂಗತಂಡ ಸಂಯುಕ್ತ ಆಶ್ರಯದಲ್ಲಿ ರಂಗಸೌರಭ ರಂಗೋತ್ಸವ-23 ಅಂಗವಾಗಿ ರಂಗ ಉಪನ್ಯಾಸ, ಗೀತಗಾಯನ ಮತ್ತು ನಾಟಕ ಪ್ರದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮಕ್ಕಳಿಗೆ ಪಾಠ ಮಾಡುವ ಪ್ರಶಿಕ್ಷಣಾರ್ಥಿಗಳು ಆಂಗಿಕ ಮತ್ತು ವಾಚಿಕ ಅಭಿನಯಗಳನ್ನು ತಿಳಿದಿರಬೇಕು. ಉತ್ತಮ ದೇಹದ ನಿಲುವು, ಸ್ಪಷ್ಟಮಾತು ನಿರರ್ಗಳವಾಗಿರಬೇಕು. ರಂಗಭೂಮಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಲ್ಲಿ ಉತ್ತಮ ಶಿಕ್ಷಕರಾಬಹುದು ಎಂದರು.

ರಾಜ್ಯ ಶಿಕ್ಷಣ ಪರಿಷತ್ತಿನ ಜಿಲ್ಲಾಧ್ಯಕ್ಷ ಮಾಲತೇಶ್ ಅರಸ್ ಹರ್ತಿಕೋಟೆ ಇವರು ಶಿಕ್ಷಣದಲ್ಲಿ ಸಾಂಸ್ಕೃತಿಕ ವಿಷಯವಾಗಿ ಉಪನ್ಯಾಸ ನೀಡಿ ಮಾತನಾಡುತ್ತ ಯಾವುದೇ ಜಾತಿ, ಧರ್ಮದ ಸೋಂಕಿಲ್ಲದ ರಂಗಭೂಮಿಗೆ ಎಲ್ಲರನ್ನೂ ಒಟ್ಟುಗೂಡಿಸುವ ಶಕ್ತಿಯಿದೆ.

ಸಾಂಸ್ಕೃತಿಕ ಶಿಕ್ಷಣ ಪ್ರಶಿಕ್ಷಣಾರ್ಥಿಗಳ ಸೊತ್ತಾಗಬೇಕು. ಗ್ರಾಮೀಣ ಕ್ರೀಡೆಗಳು ಮಕ್ಕಳ ಕಲಿಕೆಗೆ ಆಸಕ್ತಿ ಮೂಡಿಸುತ್ತವೆ. ಮರೆಯಾಗುತ್ತಿರುವ ಗ್ರಾಮೀಣ ಕಲೆಗಳಿಗೆ ಪ್ರೋತ್ಸಾಹ ನೀಡಬೇಕಿದೆ. ದೇಸೀತನದ ಸಂಸ್ಕೃತಿಯನ್ನು ಮೈಗೂಡಿಸಿಕೊಂಡರೆ ಕಲಿಕೆಯ ಸಾಮಥ್ರ್ಯ ಗುಣಾತ್ಮಕವಾಗಿರುತ್ತದೆ ಎಂದರು.

ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಎಸ್.ಕೆ.ಮಲ್ಲಿಕಾರ್ಜುನ ಮಾತನಾಡಿ ನಾಡಿನ ಕಲೆ ಮತ್ತು ಸಂಸ್ಕøತಿಗಾಗಿ ಇಲಾಖೆ ಅನೇಕ ಕಾರ್ಯಕ್ರಮಗಳನ್ನು  ಉಪಪ್ರಾಚಾರ್ಯ ಡಾ.ಮೋಹನ್‍ಕುಮಾರ್ ಅಧ್ಯಕ್ಷತೆ ವಹಿಸಿದ್ದರು.

ರಂಗನಿರ್ದೇಶಕ ಕೆಪಿಎಂ.ಗಣೇಶಯ್ಯ, ಉಪನ್ಯಾಸಕರಾದ ಬಿ.ಎಸ್.ನಟರಾಜ, ಮಹಾಂತೇಶ್.ಈ, ಹೇಮಲತ.ಬಿ, ಸ್ವಾತಿ.ಎಂ, ಹಿರಿಯ ಕಲಾವಿದ ಎಂ.ಕೆ.ಹರೀಶ್, ಬಾದರದಿನ್ನಿ ಆಟ್ರ್ಸ್ ಅಕಾಡೆಮಿ  ಪ್ರಕಾಶ್‍ಬಾದರದಿನ್ನಿ ಮುಂತಾದವರು ಮುಖ್ಯಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿದರು.

ಬೆಂಗಳೂರಿನ ಗೆಜ್ಜೆಹೆಜ್ಜೆ ರಂಗತಂಡದವರಿಂದ ಕಂಡಕ್ಟರ್ ಗಂಗರಾಜು ವಿರಚಿತ ರಂಗಯ್ಯನ ರಾದ್ಧಾಂತ ನಾಟಕ ಪ್ರದರ್ಶನ ನೀಡಿದರು. ರಂಗಸೌರಭ ಕಲಾವಿದರು ಗೀತಗಾಯನ ಕಾರ್ಯಕ್ರಮದಲ್ಲಿ ಗೀಗೀ ಪದ, ಲಾವಣಿ, ಕೋಲಾಟದ ಪದ ಹಾಗೂ ಜನಪದಗಳನ್ನು ಹಾಡಿ ಪ್ರಶಿಕ್ಷಣಾರ್ಥಿಗಳನ್ನು ರಂಜಿಸಿದರು.

What do you think?

Written by suddionenews

Leave a Reply

Your email address will not be published.

GIPHY App Key not set. Please check settings

ಗಣರಾಜ್ಯೋತ್ಸವ ದಿನಾಚರಣೆ : ಚಿತ್ರದುರ್ಗ ಜಿಲ್ಲೆಯ 14 ಜನ ಸಾಧಕರಿಗೆ ಸನ್ಮಾನ

ಜನರು ನನ್ನ ಮೇಲೆ ತೋರುವ ಪ್ರೀತಿಗೆ ಚಿರ ಋಣಿ : ಜಿ. ಎನ್.ಬೆಟ್ಟಸ್ವಾಮಿ