ತುಮಕೂರು: ಮಗನಿಗೆ ಕೇವಲ 13 ವರ್ಷ.. ಸಾವು ಎಂದರೆ ಗೊತ್ತಿಲ್ಲ.. ಆತ್ಮಹತ್ಯೆ ಎಂಬುದರ ಅರಿವಿಲ್ಲ.. ಆದರೆ ಬಿಜೆಪಿ ಕಾರ್ಯಕರ್ತೆಯ ಮಗನ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಈ ದೃಶ್ಯ ಕಂಡ ಆ ತಾಯಿ ಮನಸ್ಸು ಛಿದ್ರ ಛಿದ್ರವಾಗಿದೆ, ದುಃಖ ಮುಗಿಲು ಮುಟ್ಟಿದೆ. ಇದು ನಡೆದಿರೋದು ತುಮಕೂರಿನ ವಿಜಯನಗರದಲ್ಲಿ.
ಶಕುಂತಲಾ ನಟರಾಜ್ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದಾರೆ. ಶಕುಂತಲಾ ಕುಟುಂಬ ವಿಜಯನಗರದ 2ನೇ ಮುಖ್ಯ ರಸ್ತೆಯಲ್ಲಿ ವಾಸವಿದ್ದರು. ಶಕುಂತಲಾ ಮಗ ತ್ರಿಶೂಲ್ 7ನೇ ತರಗತಿಯಲ್ಲಿ ಓದುತ್ತಿದ್ದ. ಸರ್ವೋದಯ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ. ಆದರೆ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ವಿಜಯನಗರದ ಮನೆಯಲ್ಲಿಯೇ ನೇಣು ಬಿಗಿದ ಸ್ಥಿತಿಯಲ್ಲಿ ಬಾಲಕನ ಶವ ಪತ್ತೆಯಾಗಿದೆ. ಡೆತ್ ನೋಟ್ ಕೂಡ ಬರೆದಿಟ್ಟಿದ್ದಾನೆ ಎನ್ನಲಾಗಿದೆ.
ಪಾರಿವಾಳದ ಬೆಟ್ಟಿಂಗ್ ವಿಚಾರಕ್ಕೆ ಸ್ನೇಹಿತರ ಜೊತೆಗೆ ಜಗಳ ನಡೆದಿತ್ತು ಎನ್ನಲಾಗಿದೆ. ಇದೇ ವಿಚಾರಕ್ಕೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಶಾಲಾ ಯೂನಿಫಾರ್ಮ್ ನಲ್ಲಿಯೇ ತ್ರಿಶೂಲ್ ಶವ ಪತ್ತೆಯಾಗಿದೆ. ಮನೆಯಲಗಲಿ ಯಾರೂ ಇಲ್ಲದ ವೇಳೆ ಈ ಘಟನೆ ನಡೆದಿದೆ ಎನ್ನಲಾಗಿದೆ. ಮನೆಯಲ್ಲಿ ಶಕುಂತಲಾ ಹಾಗೂ ತ್ರಿಶೂಲ್ ಇಬ್ಬರೇ ವಾಸವಾಗಿದ್ದರು ಎನ್ನಲಾಗಿದೆ. ಆದರೂ ಆ ತಾಯಿ ಸಾವಿರಾರು ಕನಸ್ಸನ್ನ ಕಟ್ಟಿಕೊಂಡಿದ್ದರು. ಮಗನ ಭವಿಷ್ಯಕ್ಕಾಗಿ ಜೀವನ ಮುಡುಪಾಗಿಟ್ಟಿದ್ದರು.ಇದ್ದ ಒಬ್ಬನೇ ಮಗ ಹೀಗೆ ಆತ್ಮಹತ್ಯೆ ಮಾಡಿಕೊಂಡಿರುವುದು ಆ ತಾಯಿ ಜೀವಕ್ಕೆ ಎಲ್ಲಿಂದ ಸಮಾಧಾನ ಸಿಗಲಿದೆ. ಇಷ್ಟು ಚಿಕ್ಕ ವಯಸ್ಸಿಗೆ ಆ ಮಗುಗೆ ಆತ್ಮಹತ್ಯೆಯ ಮನಸ್ಸು ಬರುತ್ತೆ ಅಂದ್ರೆ ಈಗಿನ ಮಕ್ಕಳ ಯೋಚನೆ ಬಗ್ಗೆ ಚಿಂತೆಯಾಗದೆ ಇರಲಾರದು.