ಕೊನೆಯ ಹೋರಾಟದಲ್ಲಿ ಹಳ್ಳಿಗಳತ್ತ ಹೋಗ್ತೇನೆ : ಎಚ್ ಡಿ ಕುಮಾರಸ್ವಾಮಿ

suddionenews
1 Min Read

ಬೆಂಗಳೂರು: ಹಾನಗಲ್ ಹಾಗೂ ಸಿಂದಗಿ ಉಪಚುನಾವಣೆಯ ಫಲಿತಾಂಶದಲ್ಲಿ ಜೆಡಿಎಸ್ ಸೋಲನ್ನ ಅನುಭವಿಸಿದೆ. ಈ ಹಿನ್ನೆಲೆ ಕುಮಾರಸ್ವಾಮಿ ಮಾತನಾಡಿದ್ದು, ಕೊನೆಯ ಹೋರಾಟದಲ್ಲಿ ಹಳ್ಳಿಗಳತ್ತ ಹೋಗ್ತೇನೆ. ನನಗೆ ಅಧಿಕಾರ ಕೊಡಿ ಅಂತ ಕೇಳ್ತೇನೆ. ಇದು ನನ್ನ ಕೊನೆಯ ಹೋರಾಟ ಎಂದಿದ್ದಾರೆ.

ಸಿಂದಗಿ ಫಲೊತಾಂಶದ ಬಳಿಕ ಒಂದು ತೀರ್ಮಾನಕ್ಕೆ ಬಂದಿದ್ದೇನೆ. ಯಾವ ನಾಯಕರ ಬಗ್ಗೆಯೂ ನಾನು ಮಾತನಾಡಲ್ಲ. ರಾಜ್ಯದ ಅಭಿವೃದ್ಧಿ ಬಗ್ಗೆ ಮಾತ್ರ ಚರ್ಚೆ ಮಾಡ್ತೇನೆ. ಸೂಟ್ ಕೇಸ್ ಗಾಗಿ ಕೊಟ್ಟಿದ್ದಕ್ಕೆ ಕುಮಾರಸ್ವಾಮಿ ಪ್ರಚಾರಕ್ಕೆ ಬಂದಿದ್ದರು ಎಂದಿದ್ದರು. ಯಾರು ಅಪಪ್ರಚಾರಕ್ಕೆ ಕಿವಿಗೊಡಬೇಡಿ. ಅಂಥ ನೋವನ್ನೆಲ್ಲಾ ನಾನು ನುಂಗಿಕೊಂಡಿದ್ದೇನೆ.

25 ಸಾವಿರ ಕೋಟಿ ರೈತರ ಸಾಲ ಮನ್ನಾ ಮಾಡಿದ್ದೆ. ರಾಜ್ಯದಲ್ಲಿ ಇಲ್ಲಿವರೆಗೂ ಯಾರೂ ಸಹ ಸಾಲ‌ಮನ್ನಾ ಮಾಡಿರಲಿಲ್ಲ. ಆದ್ರೆ ಅಷ್ಟು ಸಾಲ‌ ಮನ್ನಾ ಮಾಡಿದ್ರು ಯಾವ ಪ್ರಯೋಜನಕ್ಕೂ ಬಾರಲ್ಲ. ನನಗೆ ಐದು ವರ್ಷ ಸಂಪೂರ್ಣ ಅಧಿಕಾರ ಕೊಟ್ಟರೆ ರೈತರು ಒಂದು ರೂಪಾಯಿ ಸಾಲ ಮಾಡದ ಹಾಗೆ ನೋಡಿಕೊಳ್ಳುತ್ತೇನೆ ಎಂಬ ಭರವಸೆ ನೀಡಿದ್ದಾರೆ.

ಜಾಹೀರಾತಿನಿಂದ ಜನರನ್ನ ಮರಳು ಮಾಡಲು ಹೊರಟಿದ್ದಾರೆ. 100 ದಿನಗಳ ಸಾಧನೆಯ ಬಗ್ಗೆ ಜಾಹೀರಾತಿಗಾಗಿ 10 ರಿಂದ 20 ಕೋಟಿ ಹಣ ಖರ್ಚು ಮಾಡಿದ್ದಾರೆ. ಇನ್ನು ಸಿದ್ದರಾಮಯ್ಯ ಎತ್ತಿನಹೊಳೆ ಯೋಜನೆಗೆ 16 ಸಾವಿರ ಕೋಟಿ ಕೊಟ್ರು. ಆದ್ರೆ ಆ ಯೋಜನೆ ಇನ್ನು ಸಕಲೇಶಪುರವನ್ನೇ ದಾಟಿಲ್ಲ. ಸಿಎಂ ಆದ್ಮೇಲೆ ಯೋಜನೆ ಮಾಡ್ತೀವಿ ಅಂದ್ರು ಅಲ್ಲಿಂದ ಇಲ್ಲಿವರೆಗೂ ಯಡೊಯೂರಪ್ಪ, ಜಗದೀಶ್ ಶೆಟ್ಟರ್ ಈಗ ಬಸವರಾಜ್ ಬೊಮ್ಮಾಯಿ ಸಿಎಂ ಆಗಿದ್ದಾರೆ. 8 ಸಾವಿರದಿಂದ ಶುರುವಾಗಿದ್ದ ಯೋಜನೆ ಈಗ ಕೋಟಿ ಯೋಜನೆಯಾಗಿದೆ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *