ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817
ಸುದ್ದಿಒನ್, ಚಿತ್ರದುರ್ಗ ಜೂ. 23 : ಮಕ್ಕಳಿಗೆ ಚಿಕ್ಕ ವಯಸ್ಸಿನಿಂದಲೇ ಯೋಗವನ್ನು ಅಭ್ಯಾಸ ಮಾಡಿಸುವುದರಿಂದ ಮುಂದೆ ಅವರು ವಿವಿಧ ರೋಗಗಳಿಂದ ಮುಕ್ತರಾಗಲು ಸಾಧ್ಯವಿದೆ ಎಂದು ಜಿಲ್ಲಾ ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷರು ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಎಂ.ಕೆ.ತಾಜ್‍ಪೀರ್ ಅಭೀಪ್ರಾಯಪಟ್ಟಿದ್ದಾರೆ.
ನಗರದ ಜೋಗಿಮಟ್ಟಿ ರಸ್ತೆಯಲ್ಲಿರುವ ದಾರುಕ ಬಡಾವಣೆಯ ಗಣಪತಿ ದೇವಸ್ಥಾನದ ಮುಂಭಾಗದಲ್ಲಿ ಬಡಾವಣೆಯ ಸದಸ್ಯರು ಸೇರಿಕೊಂಡು ಭಾನುವಾರ ಹಮ್ಮಿಕೊಂಡಿದ್ದ 10ನೇ ಅಂತರಾಷ್ಟ್ರೀಯ ದಿನಾಚರಣೆಯ ಅಂಗವಾಗಿ ಯೋಗ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಯೋಗವನ್ನು ಈ ಬಾಗದಲ್ಲಿ ಹೆಚ್ಚಿನ ರೀತಿಯಲ್ಲಿ ಪ್ರಚಾರಕ್ಕೆ ತಂದವರೆದರೇ ಮಲ್ಲಾಡಿಹಳ್ಳಿಯ ರಾಘವೇಂದ್ರ ಶ್ರೀಗಳು ಅವರು ದಿನ ನಿತ್ಯ ಯೋಗವನ್ನು ಮಾಡದೇ ತಮ್ಮ ದಿನಚರಿಯನ್ನು ಆರಂಭ ಮಾಡುತ್ತಿರಲಿಲ್ಲ ತಾವು ಮಾಡುವುದ್ದಲ್ಲದೆ ಇದನ್ನು ಬೇರೆಯವರಿಗೂ ಸಹಾ ಹೇಳಿ ಕೊಟ್ಟಿದ್ದಾರೆ. ಗ್ರಾಮಗಳಲ್ಲಿ ಯೋಗವನ್ನು ಪರಿಚಯ ಮಾಡಿದ ಕೀರ್ತೀ ಶ್ರೀಗಳಿಗೆ ಸಲ್ಲುತ್ತದೆ. ಇದರಲ್ಲಿ ನಮ್ಮ ತಾತನವರು ಸಹಾ ಒಬ್ಬರಾಗಿದ್ದಾರೆ ಎಂದರು.
ಇವರ ನಂತರ ಚಿನ್ಮಯಾನಂದರವರು ಚಿತ್ರದುರ್ಗದಲ್ಲಿ ಯೋಗವನ್ನು ಹೇಳಿ ಕೊಡಲು ಪ್ರಾರಂಭ ಮಾಡಿದರು. ಈಗ ಸಾವಿರಾರು ಜನ ಯೋಗವನ್ನು ದಿನ ನಿತ್ಯ ಅಭ್ಯಾಸ ಮಾಡುವುದರ ಮೂಲಕ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುತ್ತಿದ್ದಾರೆ. ಅಂದಿನ ದಿನದಲ್ಲಿನಯೇ ಮಲ್ಲಾಡಿಹಳ್ಳಿಯಲ್ಲಿ ಈ ಮುಂಚೆ ಅಂತರಾಷ್ಟ್ರೀಯ ಯೋಗ ಪಟುಗಳು ಬಂದು ಭೇಟಿಯನ್ನು ನೀಡಿದ್ದಾರೆ. ಇಂದಿನ ದಿನಗಳಲ್ಲಿ ಯೋಗವನ್ನು 50 ವರ್ಷ ಮೇಲ್ಪಟ್ಟುವರು ಮಾತ್ರ ಮಾಡುತ್ತಿದ್ದಾರೆ. ಇದರಲ್ಲಿ ಯುವಜನತೆಗೆ ಆಸಕ್ತಿ ಕಾಣುತ್ತಿಲ್ಲ, ಈ ಹಿನ್ನಲೆಯಲ್ಲಿ ಮನೆಯಲ್ಲಿ ಚಿಕ್ಕ ಮಕ್ಕಳನ್ನು ಮದುವೆ, ನಾಮಕರಣ ಸೇರಿದಂತೆ ವಿವಿಧ ಕಾರ್ಯಕ್ರಮಗಳಿಗೆ ಕರೆದುಕೊಂಡು ಹೋಗುವಂತೆ ಈ ರೀತಿಯ ಯೋಗ ಕಾರ್ಯಕ್ರಮಗಳಿಗೆ ಅವರನ್ನು ಕರೆದುಕೊಂಡು ಯೋಗವನ್ನು ಕಲಿಸಬೇಕಿದೆ ಎಂದು ಕರೆ ನೀಡಿದರು.
ಇಂದಿನ ಯುವ ಜನತೆ ದುಶ್ಚಟಗಳ ದಾಸರಾಗುತ್ತಿದ್ದಾರೆ ಪಾನಪರಾಗ, ಕುಡಿತ, ಗುಟ್ಕಾದಂತಹ ವಸ್ತುಗಳನ್ನು ಸೇವೆ ಮಾಡುವುದರಿಂದ ತಮ್ಮ ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ ಇವುಗಳಿಗೆ ಬಲಿಯಾಗಿ ನನ್ನ ಹಲವಾರು ಸ್ನೇಹಿತರನ್ನು ಕಳೆದುಕೊಂಡಿದ್ದೇನೆ. ಸಾಧ್ಯವಾದಷ್ಟು ದುಶ್ಚಟಗಳಿಂದ ಯುವ ಜನತೆ ದೂರ ಇದ್ದು ಈ ರೀತಿಯಾದ ಯೋಗವನ್ನು ಅಭ್ಯಾಸ ಮಾಡುವುದರಿಂದ ತಮ್ಮ ಆರೋಗ್ಯವನ್ನು ಕಾಪಾಡಿ ಕೊಳ್ಳಬಹುದಾಗಿದೆ ಎಂದು ತಿಳಿಸಿದ ತಾಜ್‍ಪೀರ್ ಈ ಬಡಾವಣೆಯಲ್ಲಿ ಪಾರ್ಕನ್ನು ಚನ್ನಾಗಿ ಅಭೀವೃದ್ದಿ ಮಾಡಲಾಗಿದೆ ಪ್ರಾಧಿಕಾರ ಪಾರ್ಕನ್ನು ನಿರ್ಮಾಣ ಮಾಡಿಕೊಡುತ್ತದೆ ಆದರೆ ಅದನ್ನು ಚನ್ನಾಗಿ ನೋಡಿಕೊಳ್ಳುವುದು ಅಯಾ ಬಡಾವಣೆಯ ಹೊಣೆಗಾರಿಕೆಯಾಗಿರುತ್ತದೆ. ಇಲ್ಲಿಗೆ ಬೀದಿ ದೀಪಗಳ ಬೇಕು ಎಂದೀದ್ದೀರಾ ಇದಕ್ಕೆ ಬಡಾವಣೆಯಿಂದ ಪತ್ರವನ್ನು ನೀಡಿ ಕೂಡಿಸುವ ಭರವಸೆಯನ್ನು ನೀಡಿದರು.
ವೀರಶೈವ ಸಮಾಜದ ಮುಖಂಡರು, ಕೆಡಿಪಿ ಸದಸ್ಯರಾದ ಕೆ.ಸಿ.ನಾಗರಾಜ್ ಮಾತನಾಡಿ, ಯೋಗದಿಂದ ಉತ್ತಮವಾದ ಆರೋಗ್ಯವನ್ನು ಹೊಂದಬಹುದಾಗಿದೆ, ಇದನ್ನು ದಿನ ನಿತ್ಯ ಮಾಡುವುದರಿಂದ ಉತ್ತಮವಾದ ಆರೋಗ್ಯವನ್ನು ಪಡೆಯಬಹುದಾಗಿದೆ ಋಷಿ,ಮುನಿಗಳು ಯೋಗವನ್ನು ಮಾಡುವುದರ ಮೂಲಕ ಹಲವಾರು ವರ್ಷ ಬದುಕಿದ್ದರು. ಆರೋಗ್ಯವನ್ನು ಕಾಪಾಡಿಕೊಳ್ಳಲು ದೇಹವನ್ನು ದಂಡಿಸಬೇಕಿದೆ ಆಗ ಮಾತ್ರ ಆರೋಗ್ಯವನ್ನು ಹೊಂದಬಹುದಾಗಿದೆ. ಹಣವನ್ನು ಯಾರು ಬೇಕಾದರೂ ಸಂಪಾದನೆ ಮಾಡುತ್ತಾರೆ ಆದರೆ ಆರೋಗ್ಯವನ್ನು ಸಂಪಾದನೆ ಮಾಡುವತ್ತ ಯಾರೂ ಸಹಾ ಗಮನ ನೀಡಿವುದಿಲ್ಲ ಆರೋಗ್ಯ ಕೆಟ್ಟಾಗ ವೈದ್ಯರ ಬಳಿ ಹೋಗಿ ಅವರು ನೀಡುವ ಮಾತ್ರಯನ್ನು ಸೇವನೆ ಮಾಡಬೇಕಾಗುತ್ತದೆ ಇದರ ಬದಲು ಯೋಗ,ವ್ಯಾಯಾಮ ಮಾಡುವುದರ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳುವಂತೆ ಕರೆ ನೀಡಿದರು.
ಯೋಗಚಾರ್ಯ ಎಲ್.ಎಸ್. ಚಿನ್ಮಯಾನಂದ ಮಾತನಾಡಿ ನಮಗೆ ಚಿಕ್ಕ ಚಿಕ್ಕ ಕಾಯಿಲೆಗಳು ಬಂದಾಗಿ ವ್ಯದ್ಯರ ಬಳಿ ಹೋಗಿ ಚಿಕಿತ್ಸೆಯನ್ನು ಪಡೆದು ಅವರು ನೀಡುವ ಔಷಧಿಯನ್ನು ಸೇವನೆ ಮಾಡುವ ಬದಲು ಮನೆಯಲ್ಲಿಯೇ ಇರುವ ಮನೆಮದ್ದನ್ನು ಬಳಕೆ ಮಾಡುವುದರ ಮೂಲಕ ನಮ್ಮ ಆರೋಗ್ಯವನ್ನು ನಾವೇ ಕಾಪಾಡಿಕೊಳ್ಳಬಹುದಾಗಿದೆ. ನಮಗೆ ರೋಗ ಬಂದಾಗ ಸಾಧ್ಯವಾದಷ್ಟು ಔಷಧಿಗಳ ಬಳಕೆಯನ್ನು ಮಾಡದೇ ಮನೆಯ ಮದ್ದನ್ನು ಬಳಕೆ ಮಾಡುವುದಕ್ಕೆ ಮುಂದಾಗಿ ಮನೆ ಮದ್ದಿಗೆ ನಮ್ಮ ಪುರಾತನ ಕಾಲದಿಂದಲೂ ಸಹಾ ಬೇಡಿಕೆ ಇದೆ ಎಂದರು.
ಕಾರ್ಯಕ್ರಮದಲ್ಲಿ ಮರ್ಚೆಂಟ್ಸ್ ಬ್ಯಾಂಕ್‍ನ ನಿರ್ದೇಶಕರಾದ ರಘುರಾಮರೆಡ್ಡಿ, ಬಡಾವಣೆಯ ಗುತ್ತಿಗೆದಾರರಾದ ಕುಮಾರ್, ಮಂಜುನಾಥ್, ಹೇಮಂತಕುಮಾರ್, ರಾಮಪ್ಪ, ಕೇಧರನಾಥ್, ರಂಗಸ್ವಾಮಿ, ಚಂದ್ರಶೇಖರ್, ಮ್ಯಾಕಾನಿಕ್ ರಂಗಸ್ವಾಮಿ, ಅನಸೂಯರಂಗಸ್ವಾಮಿ, ಶೋಭಾ ದೇವರಾಜ್ ಮತ್ತು ಬಡಾವಣೆಯ ವಾಕರ್ ಗ್ರೂಪ್ ಸದಸ್ಯರು ಭಾಗವಹಿಸಿದ್ದರು.