ಲಕ್ನೋ: ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ಘೊಇಷಣೆಯಾಗಿದೆ. ಇತ್ತ ಪಕ್ಷಗಳು ಆ್ಯಕ್ಟೀವ್ ಆಗಿದ್ದು, ಜನರ ಬಳಿಗೆ ತೆರಳಿ ಸಮಸ್ಯೆ ಕೇಳೋದಕ್ಕೆ ಶುರು ಮಾಡಿವೆ. ಇದೀಗ ಯುಪಿ ಸಿಎಂ ಯೋಗಿ ಆದಿತ್ಯಾನಾಥ್ ದಲಿತರ ಮನೆಗೆ ಹೋಗಿ ಊಟ ಮಾಡಿ, ಸುದ್ದಿಯಾಗಿದ್ದಾರೆ.
ಯೋಗಿ ಆದಿತ್ಯಾನಾಥ್ ಅವರು ಗೋರಖ್ ಪುರದಲ್ಲಿ ದಲಿತರ ಮನೆಯಲ್ಲಿ ಊಟ ಮಾಡಿದ್ದಾರೆ. ಈ ಬೆಳವಣಿಗೆ ಸದ್ಯಕ್ಕೆ ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಸಾಮಾಜಿಕ ಸೌಹಾರ್ದತೆಯ ಗುರಿಯು ಬೆಳೆಯುತ್ತಲೇ ಇದೆ. ಇಂದು ಗೋರಖ್ಪುರದ ಜುಂಗಿಯಾದಲ್ಲಿರುವ ಅಮೃತ್ ಲಾಲ್ ಭಾರತೀಜಿಯವರ ಮನೆಯಲ್ಲಿ ಕಿಚಡಿ ಮತ್ತು ಪ್ರಸಾದ ಸ್ವೀಕರಿಸುವ ಸೌಭಾಗ್ಯ ನನಗೆ ಸಿಕ್ಕಿತು. ತುಂಬಾ ಧನ್ಯವಾದಗಳು ಭಾರತೀಜಿ ಎಂದು ಸಿಎಂ ಯೋಗಿ ಆದಿತ್ಯಾನಾಥ್ ಟ್ವೀಟ್ ಮೂಲಕ ತಿಳಿಸಿದ್ದಾರೆ.
ಇತ್ತೀಚೆಗೆ ಯೋಗಿ ಆದಿತ್ಯಾನಾಥ್ ಸಂಪುಟದಿಂದ ಇಬ್ಬರು ಸಚಿವರು ರಾಜೀನಾಮೆ ನೀಡಿ ಅಖಿಲೇಶ್ ಯಾದವ್ ಅವರ ಸಮಾಜವಾದಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಈ ಬೆನ್ನಲ್ಲೇ ಓಬಿಸಿ ಸಮುದಾಯದ ಮತಗಳು ಕೈತಪ್ಪುವ ಭಯ ಬಿಜೆಪಿಯಲ್ಲಿ ಕಾಡುತ್ತಿದೆ. ಈ ಹಿನ್ನೆಲೆ ಸಿಎಂ ಯೋಗಿ ಆದಿತ್ಯಾನಾಥ್ ದಲಿತರ ಮನೆಗಳಿಗೆ ಭೇಟಿ ನೀಡಿ, ಜನರನ್ನ ಸೆಳೆಯಲು ಶುರು ಮಾಡಿದ್ದಾರೆ ಎಂಬ ಮಾತುಗಳು ಕೇಳಿ ಬರ್ತೀವೆ.