ಬೆಂಗಳೂರು: ಬಯಲು ಸೀಮೆಯ ಏಳು ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸುವ ಯೋಜನೆ ಎತ್ತಿನಹೊಳೆ ಯೋಜನೆ ಸ್ಥಗಿತಗೊಂಡಿದೆ. ಈ ಯೋಜನೆ ಬಗ್ಗೆ ಇಂದು ಬಜೆಟ್ ಅಧಿವೇಶನದಲ್ಲಿ ವಿಚಾರ ಪ್ರಸ್ತಾಪ ಮಾಡಲಾಗಿದೆ.
ಈ ವೇಳೆ ಎತ್ತಿನಹೊಳೆ ಯೋಜನೆ ಆದ್ರೆ ನಾನು ನೇಣು ಹಾಕಿಕೊಳ್ಳುತ್ತೇನೆ ಎಂದು ವಿಧಾನಪರಿಷತ್ ನಲ್ಲಿ ಜೆಡಿಎಸ್ ಸದಸ್ಯ ಬೋಜೇಗೌಡ ಸವಾಲು ಹಾಕಿದ್ದಾರೆ. 22 ಸಾವಿರ ಕೋಟಿ ಖರ್ಚಾದರೂ ಯೋಜನೆ ಮುಗಿಸಲಾಗಲ್ಲ. 50 ಸಾವಿರ ಕೋಟಿ ಖರ್ಚು ಮಾಡಿದರೂ ನೀರು ಕೋಡೋದಕ್ಕೆ ಆಗಲ್ಲ. ಚಿಕ್ಕಬಳ್ಳಾಪುರಕ್ಕೆ ನೀರು ಕೊಡೋದಕ್ಕೆ ಆಗಲ್ಲ. ಇದು ನನ್ನ ಸವಾಲು ಎಂದಿದ್ದಾರೆ.
ಎತ್ತಿನ ಹೊಳೆ ಯೋಜನೆ ಕೆಲವರ ಪಾಲಿಗೆ ಕಾಮಧೇನು ಆಗಿದೆ. ಅದು ಯಾರು ಯಾರಿಗೆ ಕಾಮಧೇನು ಅನ್ನೋದು ನಮಗೆ ಗೊತ್ತಿದೆ. 50 ಸಾವಿರ ಕೋಟಿ ಖರ್ಚು ಮಾಡಿದರು ಇದು ಪೂರ್ಣ ಆಗಲ್ಲ. ಒಂದು ವೇಳೆ ಈ ಯೋಜನೆ ಆದ್ರೆ ನಾನು ನೇಣು ಹಾಕಿಕೊಳ್ತೇನೆ ಎಂದು ಶಾಕಿಂಗ್ ಹೇಳಿಕೆ ನೀಡಿದ್ದಾರೆ.