ಮೈಸೂರು: ಸಮವಸ್ತ್ರದ ಜೊತೆಗೆ ದುಪ್ಪಟ್ಡ ಹಾಕಲು ಮುಸ್ಲಿಂ ಹೆಣ್ಣು ಮಕ್ಕಳಿಗೆ ಅವಕಾಶ ಕೊಡಿ ಎಂದು ಹೇಳುವಾಗ ಸ್ವಾಮಿಜಿಗಳ ಶಿರವಸ್ತ್ರವನ್ನ ಉದಾಹರಣೆಯನ್ನಾಗಿ ನೀಡಿದ್ದರು. ಈ ಹೇಳಿಕೆ ವಿವಾದಕ್ಕೀಡಾಗಿತ್ತು, ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತಯ. ಈ ಸಂಬಂಧ ಶಾಸಕ ಡಾ.ಯತೀಂದ್ರ ತಂದೆಯ ಹೇಳಿಕೆಯನ್ನ ಸಮರ್ಥಿಸಿಕೊಂಡಿದ್ದಾರೆ.
ಈ ಸಂಬಂಧ ಮೈಸೂರಿನಲ್ಲಿ ಮಾತನಾಡಿದ ಅವರು, ತಲೆ ಮೇಲೆ ಬಟ್ಟೆ ಹಾಕುವುದು ತಪ್ಪಲ್ಲ. ಆದರೆ, ದುಪ್ಪಟ್ಟಾವನ್ನ ಸ್ವಾಮೀಜಿಯ ಶಿರವಸ್ತ್ರಕ್ಕೆ ಹೋಲಿಕೆ ಮಾಡಿಲ್ಲ. ಸ್ವಾಮೀಜಿಗೆ ಅವಮಾನ ಮಾಡುವ ರೀತಿ ಅವರು ಹೇಳಿಕೆ ನೀಡಿಲ್ಲ. ಜನಸಾಮಾನ್ಯರಿಗೆ ಅರ್ಥವಾಗಲಿ ಎಂದು ಆ ರೀತಿ ಹೇಳಿದ್ದಾರೆ.
ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಹೇಳಿಕೆ ನೀಡಿದ್ದರು. ಈ ಹೇಳಿಕೆ ವಿವಾದಾತ್ಮಕವಾಗಿರಲಿಲ್ಲ. ಮಾಧ್ಯಮದವರಿಂದ, ಪ್ರತಿಪಕ್ಷ ಮತ್ತವರ ಐಟಿ ಸೆಲ್ ಗಳುವಿವಾದ ಮಾಡಿದ್ದಾರೆ. ಇದು ಪರೀಕ್ಷಾ ಸಮಯ. ಮುಸ್ಲಿಂ ವಿದ್ಯಾರ್ಥಿಗಳು ಕೂಡ ಪರೀಕ್ಷೆ ಬರೆಯಬೇಕಿದೆ. ಹಿಜಾಬ್ ಅಲ್ಲದೆ ಇದ್ರು ದುಪ್ಪಟ್ಟ ಹಾಕಿಕೊಳ್ಳೋದಕ್ಕೆ ಅವಕಾಶ ಕೊಡಿ ಅಂದಿದ್ದರು ಅಷ್ಟೇ. ಎಲ್ಲಾ ಸಂಸ್ಕೃತಿಯಲ್ಲೂ ಬಟ್ಟೆ ಹಾಕಿಕೊಳ್ಳುವುದು ಇದೆ. ಇದನ್ನ ಉದಾಹರಣೆಯಾಗಿ ಹೇಳಿದ್ದಾರೆ. ಅದರಲ್ಲಿ ತಪ್ಪೇನಿದೆ ಎಂದಿದ್ದಾರೆ.