Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಕ್ಷೇತ್ರದ ಮತದಾರರಿಗಾಗಿ ಹಗಲು-ರಾತ್ರಿ ಕೆಲಸ ಮಾಡುತ್ತಿದ್ದೇನೆ : ಶಾಸಕ ಎಂ.ಚಂದ್ರಪ್ಪ

Facebook
Twitter
Telegram
WhatsApp

 

ವರದಿ ಮತ್ತು ಫೋಟೋ : ಕೆ.ಎಂ.ಮುತ್ತುಸ್ವಾಮಿ ಕಣ್ಣನ್             ಮೊ : 78998 64552

ಚಿತ್ರದುರ್ಗ: ನನಗೆ ಉಪಕಾರ ಮಾಡಿರುವ ಕ್ಷೇತ್ರದ ಮತದಾರರು ನೋವು ಪಟ್ಟುಕೊಳ್ಳಬಾರದೆಂಬ ಅರಿವಿಟ್ಟುಕೊಂಡು ಹಗಲು-ರಾತ್ರಿ ಕೆಲಸ ಮಾಡುತ್ತಿದ್ದೇನೆಂದು ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ ಹೇಳಿದರು.

ಹೊಳಲ್ಕೆರೆ ತಾಲ್ಲೂಕಿನ ತಾಳ್ಯ ಗ್ರಾಮದಲ್ಲಿ ಸರ್ಕಾರಿ ಆಸ್ಪತ್ರೆ ಮತ್ತು ನೂತನ ಸಿ.ಸಿ.ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

ಕಳೆದ ಬಾರಿ ನಾನು ಶಾಸಕನಾಗಿದ್ದಾಗ ಇಲ್ಲಿ ಸಣ್ಣ ಆಸ್ಪತ್ರೆಯಿತ್ತು. ಯಾರು ನನಗೆ ಅರ್ಜಿ ಕೊಟ್ಟು ಆಸ್ಪತ್ರೆ ಕಟ್ಟಿಸಿಕೊಡಿ ಎಂದು ಕೇಳಲಿಲ್ಲ. ಆದರೆ ಕ್ಷೇತ್ರದ ಜನರ ಹಿತವನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡುತ್ತಿದ್ದೇನೆ. ತಾಳ್ಯದಿಂದ ಮತಿಗಟ್ಟದವರೆಗೆ ಟಾರ್ ರೋಡ್ ಮಾಡಿಸಿದ್ದೇನೆ. ಹಿಂದೆ ಈ ರಸ್ತೆಗೆ ಐದು ಕೋಟಿ ರೂ.ಹಾಕಿದ್ದೆ ಗುತ್ತಿಗೆದಾರ ಅರ್ಧಂಬರ್ಧ ಕೆಲಸ ಮಾಡಿ ಪರಾರಿಯಾದ. ಮತ್ತೆ ಡಬ್ಬಲ್ ರಸ್ತೆಗೆ ಎರಡು ಕೋಟಿ ರೂ.ನೀಡಿದ್ದೇನೆ. ಹತ್ತು ಕೋಟಿ ಎಂಬತ್ತು ಲಕ್ಷ ರೂ.ರಸ್ತೆಗೆ ಮಂಜೂರು ಮಾಡಿಸಿದ್ದೇನೆ. ಪಂಡರಹಳ್ಳಿ, ಬೆಂಕಿಕೆರೆಯಿಂದ ದೊಡ್ಡಲೈನ್ ಬರುತ್ತಿದೆ. ಮೂವತ್ತು ಮೆ.ವಾ.ಇದ್ದದ್ದನ್ನು ಈಗ ಎಪ್ಪತ್ತು ಮೆ.ವಾ.ಗೆ ಜೋಡಿಸಿದ್ದೇನೆ. ಇನ್ನು 25 ವರ್ಷಗಳ ಕಾಲ ಪ್ರತಿದಿನ ಏಳು ಗಂಟೆ ವಿದ್ಯುತ್ ನೀಡುವುದಾಗಿ ಭರವಸೆ ನೀಡಿದರು.

250 ಕೋಟಿ ರೂ.ವೆಚ್ಚದಲ್ಲಿ ನೇರವಾಗಿ ಜೋಗ್‍ಫಾಲ್ಸ್‍ನಿಂದ ವಿದ್ಯುತ್ ತರುವ ಯೋಜನೆ ಆರಂಭಗೊಂಡಿದೆ. ಇದರಿಂದ 220 ಮೆ.ವಾ. ಕರೆಂಟ್ ಸಿಗುತ್ತದೆ. ತಾಳ್ಯ ಹೋಬಳಿಗೆ ತೊಂದರೆಯಾಗಬಾರದೆಂದು ಹೊಳಲ್ಕೆರೆ ಚಿಕ್ಕಕೆರೆಯಲ್ಲಿ ಮೂರು ಪಂಪ್ ಅಳವಡಿಸಿದ್ದು, ನೂರ ಆರು ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗಿದೆ. ಜನ ನನ್ನ ಮೇಲೆ ಪ್ರೀತಿ ವಿಶ್ವಾಸ ಅಭಿಮಾನವಿಟ್ಟಿರುವುದರಿಂದ ಕ್ಷೇತ್ರದ ಅಭಿವೃದ್ದಿಗೆ ಸದಾ ಸಿದ್ದನಿದ್ದೇನೆಂದು ಹೇಳಿದರು.

ಮಲಸಿಂಗನಹಳ್ಳಿಯಿಂದ ನೇರವಾಗಿ ನಂದನಹೊಸೂರು, ತಾಳ್ಯ, ಹೆಚ್.ಡಿ.ಪುರಕ್ಕೆ ನೀರು ಒದಗಿಸುವ ಯೋಜನೆ ಶುರುವಾಗಿದೆ. ಹಿರಿಯೂರಿನ ವಾಣಿವಿಲಾಸ ಸಾಗರದಿಂದ ಹೊಳಲ್ಕೆರೆ ಕ್ಷೇತ್ರದ ಎಲ್ಲಾ ಊರುಗಳಿಗೂ ದಿನದ 24 ಗಂಟೆ ನೀರು ಪೂರೈಸುವುದಕ್ಕಾಗಿ 367 ಕೋಟಿ ರೂ.ಗಳನ್ನು ಮಂಜೂರು ಮಾಡಿಸಿದ್ದೇನೆ. ಗಟ್ಟಿಹೊಸಹಳ್ಳಿ ಗುಡ್ಡದ ಮೇಲೆ ಎಪ್ಪತ್ತು ಲಕ್ಷ ರೂ.ಗಳ ಫಿಲ್ಟರ್ ಅಳವಡಿಸಲಾಗಿದೆ. ಇದರಿಂದ ಎಲ್ಲರೂ ಶುದ್ದ ನೀರು ಕುಡಿಯುವಂತಾಗುತ್ತದೆ. 2051 ರವರೆಗೆ ಶುದ್ದ ಕುಡಿಯುವ ನೀರು ಪೂರೈಸುವುದಕ್ಕಾಗಿ ನೂರ ಎರಡುವರೆ ಕೋಟಿ ರೂ.ಗಳನ್ನು ಹೆಚ್ಚಿಗೆ ನೀಡಿದ್ದೇನೆಂದರು.

ಮಾಜಿ ಶಾಸಕ ಮಂಜುನಾಥ್, ತಾಳ್ಯ ಗ್ರಾಮ ಪಂಚಾಯಿತಿ ಅಧ್ಯಕ್ಷ ವೀರೇಶ್, ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಶ್ರೀಮತಿ ಗೌರಮ್ಮ, ಬಸಣ್ಣ, ಪ್ರಕಾಶ್, ಶಿಕ್ಷಕರುಗಳಾದ ಹನುಮಂತಪ್ಪ, ಮಾರುತೇಶ್, ನಿತಿನ್, ಗುತ್ತಿಗೆದಾರ ರಾಜಶೇಖರ್ ಹಾಗೂ ಗ್ರಾಮದ ಹಿರಿಯರು ಈ ಸಂದರ್ಭದಲ್ಲಿ ಹಾಜರಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಸಿಇಎನ್ ಪೊಲೀಸರ ದಾಳಿ : ಅಂತರ್ ರಾಜ್ಯ ಗಾಂಜಾ ಪೆಡ್ಲರ್ ಬಂಧನ

ಸುದ್ದಿಒನ್, ಚಿತ್ರದುರ್ಗ, ನವೆಂಬರ್. 22 : ಆಂದ್ರಪ್ರದೇಶದ ವಿಶಾಖಪಟ್ಟಣಂ ನಿಂದ ಗಾಂಜಾವನ್ನು ತಂದು ಚಿತ್ರದುರ್ಗ ನಗರಕ್ಕೆ ಬಂದು ಗಾಂಜಾ ಮಾರಾಟ ಮಾಡುತ್ತಿದ್ದ ಡ್ರಗ್ಸ್‌ ಪೆಡ್ಲರ್‌ನನ್ನು ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಿಹಾರದ ಹರಿ ಓಂಕುಮಾರ್(24

ಪೆಟ್ರೋಲ್ ಬಂಕಿನಲ್ಲಿ ವಂಚನೆ ಆರೋಪ : ಗ್ರಾಹಕರು ಹಾಗೂ ಸಿಬ್ಬಂದಿಗಳ ನಡುವೆ ಮಾತಿನ ಚಕಮಕಿ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಬೆಳಗೆರೆ ಮೊ : 97398 75729 ಸುದ್ದಿಒನ್, ಚಳ್ಳಕೆರೆ, ನವೆಂಬರ್. 22 : ಬೈಕ್ ಗಳಿಗೆ ಪೆಟ್ರೋಲ್ ಹಾಕುವ ವೇಳೆ ಗ್ರಾಹಕರಿಗೆ ಇಲ್ಲಿನ ಸಿಬ್ಬಂದಿ ವಂಚನೆ

ಅಕ್ರಮ ಕಸಾಯಿ ಖಾನೆ ಬಂದ್ ಮಾಡಿ : ದಾದಾ ಪೀರ್ ಆಗ್ರಹ : ವಿಡಿಯೋ ವೈರಲ್..!

ಸುದ್ದಿಒನ್, ಹಿರಿಯೂರು : ಅಕ್ರಮವಾಗಿ ಕಸಾಯಿ ಖಾನೆ ನಡೆಸುತ್ತಿರುವವರ ವಿರುದ್ಧ ದಾದಾ ಪೀರ್ ಎಂಬುವವರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದಾದಾ ಪೀರ್ 6ನೇ ವಾರ್ಡ್ ನಲ್ಲಿ ವಾಸಿಸುವವ ವ್ಯಕ್ತಿಯಾಗಿದ್ದಾರೆ. ಕಸಾಯಿ ಖಾನೆಯಿಂದ ಮಕ್ಕಳು ಅನಾರೋಗ್ಯಕ್ಕೆ

error: Content is protected !!