ಚಿತ್ರದುರ್ಗ, ಅ.18: ಚಿತ್ರದುರ್ಗ ನಗರದ ವಿವಿಧ ಹೋಟೆಲ್, ಬೇಕರಿಗಳಿಗೆ ಆಹಾರ ಸುರಕ್ಷತೆ & ಗುಣಮಟ್ಟ ಇಲಾಖೆಯ ವತಿಯಿಂದ ಮಂಗಳವಾರ ಭೇಟಿ ನೀಡಿ ಸ್ವಚ್ಛತೆಯ ಮಾಪನ (Hygiene Rating Audit) ನಡೆಸಲಾಯಿತು.
ಬೆಂಗಳೂರಿನಿಂದ ಆಗಮಿಸಿದ ಅಪರ್ಣಭಟ್ ಅವರು Fostac ಮತ್ತು FSSAI License ಪಡೆದಿರುವ ಕೆಲವು ಆಯ್ದ ಹೋಟೆಲ್ಗಳು ಮತ್ತು ಬೇಕರಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಅಂಕಿತಾಧಿಕಾರಿ ಡಾ.ಸಿ.ಎಲ್.ಪಾಲಾಕ್ಷ, ಆಹಾರ ಸುರಕ್ಷತಾಧಿಕಾರಿಗಳಾದ ತಿರುಮಲೇಶ್, ನಂದಿನಿ ಕಡಿ ಹಾಗೂ ಮಂಜುನಾಥ್ ಇದ್ದರು.