ಬೆಂಗಳೂರು : ಈ ಬಾರಿಯ T20 ವಿಶ್ವಕಪ್ ನಲ್ಲಿ ನಮ್ಮ ಭಾರತ ಗೆಲ್ಲಬೇಕೆಂಬುದು ಎಲ್ಲರ ಮಹದಾಸೆಯಾಗಿತ್ತು. ಆದ್ರೆ ಆ ಕನಸು ನನಸಾಗಲೇ ಇಲ್ಲ. ವಿಶ್ವಕಪ್ ಟೂರ್ನಿಯಿಂದ ಭಾರತ ಹೊರ ನಡೆದಿದೆ. ಇದು ಕೋಟ್ಯಾಂತರ ಭಾರತೀಯರಿಗೆ ಬೇಸರ ತರಿಸಿದ್ದಲ್ಲದೆ, ಕೊಹ್ಲಿಗೂ ಸಹಜವಾಗಿಯೇ ನೋವುಂಟಾಗಿದೆ.
Together as one we set out to achieve our goal.Unfortunately we fell short and no one is more disappointed than us as a side.The support from all of you has been fantastic and we are grateful for it all.We will aim to come back stronger and put our best foot forward. Jai Hind🇮🇳🙏 pic.twitter.com/UMUQgInHrV
— Virat Kohli (@imVkohli) November 8, 2021
ಟೀಂ ಇಂಡಿಯಾ ಸೆಮಿಫೈನಲ್ ಅನ್ನು ಪ್ರವೇಶಿಸದೆ ಹೊರಬಿದ್ದಿದೆ. ಈ ನೋವನ್ನ ಕೊಹ್ಲಿ ಬರಹದ ಮೂಲಕ ಹೊರ ಹಾಕಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಕೊಹ್ಲಿ, ನಾವೂ ಒಟ್ಟಾಗಿಯೇ ನಿಂತು ಗುರಿಯನ್ನು ಸಾಧಿಸಲು ಪ್ರಯತ್ನಿಸುತ್ತೇವೆ. ದುರಾದೃಷ್ಟವಶಾತ್ ನಮಗೆ ಆ ಗುರಿಯನ್ನ ಸಾಧಿಸಲು ಆಗಲಿಲ್ಲ. ಇದು ಒಂದು ತಂಢಕ್ಕಿ.ಮತ ಹೆಚ್ಚು ನಿರಾಸೆ ಬೇರೆ ಯಾರಿಗೂ ಆಗಲ್ಲ.
ನೀವೆಲ್ಲರೂ ನಮಗೆ ಸಾಕಷ್ಟು ಬೆಂಬಲ ಕೊಟ್ಟಿದ್ದೀರಿ. ಅದಕ್ಕೆ ನಾವೂ ಕೃತಜ್ಞರಾಗಿರುತ್ತೇವೆ. ಮತ್ತೆ ಗೆಲುವಿನೆಡೆಗೆ ಹೆಜ್ಜೆ ಇಡುವುದು ನಮ್ಮ ಧ್ಯೇಯವಾಗಿದೆ. ಟೂರ್ನಿಯಿಂದ ಈ ರೀತಿ ಹೊರ ಬಂದಿದ್ದು ತಂಡಕ್ಕೂ ಅತಿ ಹೆಚ್ಚು ನಿರಾಸೆಯಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.
ಇನ್ನು ವಿರಾಟ್ ಕೊಹ್ಲಿಗೆ ಟಿ20 ನಾಯಕರಾಗಿ ಇದು ಕೊನೆಯ ಪಂದ್ಯವಾಗಿತ್ತು. ಹೀಗಾಗಿ ಈ ಟೂರ್ನಿಯಲ್ಲಿ ಗೆಲುವು ತುಂಬಾನೇ ಪ್ರಾಮುಖ್ಯತೆ ವಹಿಸಿತ್ತು. ಆದ್ರೆ ಟೀಂ ಇಂಡಿಯಾ ತಂಡ ಸೆಮಿಫೈನಲ್ ಗೂ ತಲುಪದೆ ವಾಪಾಸ್ ಆಗಿದೆ. ಇದು ಕೋಟ್ಯಾಂತರ ಭಾರತೀಯರ ಬೇಸರಕ್ಕೆ ಕಾರಣವಾಗಿದೆ.