Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಪ್ರವಾಹದ ಸುಳಿಯಲ್ಲಿ ಸಿಲುಕಿದ ಆನೆ ; ವಿಡಿಯೋ ವೈರಲ್ !

Facebook
Twitter
Telegram
WhatsApp

ಡೆಹ್ರಾಡೂನ್: ಉತ್ತರಾಖಂಡದಲ್ಲಿ ಸುರಿಯುತ್ತಿರುವ ಕುಂಭ ದ್ರೋಣ ಮಳೆಗೆ ಅಲ್ಲಿನ ಜನರು ತತ್ತರಿಸಿ ಹೋಗಿದ್ದಾರೆ. ಸತತ ಮೂರನೇ ದಿನವೂ ಮಳೆ ಅವಾಂತರ ಸೃಷ್ಟಿಸುತ್ತಿದೆ. ರಾಜ್ಯದ ಎಲ್ಲ ನದಿಗಳು ಈಗಾಗಲೇ ತುಂಬಿ ಹರಿಯುತ್ತಿವೆ. ಹಲವೆಡೆ ಭೂಕುಸಿತಗಳು ಸಂಭವಿಸಿದೆ.  ಅಲ್ಲಿನ ಗೌಲಾ ನದಿ ಪ್ರವಾಹ ಅಪಾಯದ ಮಟ್ಟ ಮೀರಿ  ಹರಿಯುತ್ತಿದೆ. ಹಲ್ದುಚೂರ್ ಮತ್ತು ಲಾಲ್ಕುನ್ ನದಿಗಳ ನಡುವೆ ಪಚ್ಲ್ಯಾಂಗ್ ಎಂಬ ದ್ವೀಪವಿದೆ. ಅಲ್ಲಿ ಆನೆ ಹಿಂಡಿನಿಂದ ಕಳೆದು ಹೋದ ಆನೆ ಹೊಳೆಯ ಮಧ್ಯದಲ್ಲಿ ಸಿಲುಕಿಕೊಂಡಿದೆ.

https://twitter.com/realabhipandey1/status/1450394764042391553?t=pgVsD0LGwmUVrwtkfq54vg&s=19

ಆನೆ ಮುಂದೆ ಸಾಗಲು ಸಾಧ್ಯವಾಗದೆ ಅಲ್ಲೇ ನೀರಿನಲ್ಲಿ ನಿಂತಿದೆ. ಈ ದೃಶ್ಯವನ್ನು ಸಾಮಾಜಿಕ ಮಾಧ್ಯಮದಲ್ಲಿ ಟ್ವಿಟರ್ ಬಳಕೆದಾರ ಅಭಿಷೇಕ್ ಪಾಂಡೆ ಪೋಸ್ಟ್ ಮಾಡಿದ್ದಾರೆ. ಇದೀಗ ವೈರಲ್ ಆಗಿದೆ.  ಇದಕ್ಕೆ ಪ್ರತಿಕ್ರಿಯಿಸಿದ ಸ್ಥಳೀಯ ಅರಣ್ಯ ವಿಭಾಗೀಯ ಅಧಿಕಾರಿ ಸಂದೀಪ್ ಕುಮಾರ್ ತಮ್ಮ ಸಿಬ್ಬಂದಿಯನ್ನು ಸ್ಥಳಕ್ಕೆ ಕಳುಹಿಸಿ ಆನೆಯನ್ನು ರಕ್ಷಿಸಿ ಕಾಡಿಗೆ ಕಳುಹಿಸಿದ್ದಾರೆ.

ಪ್ರಸ್ತುತ ಆನೆ ಅಪಾಯದಿಂದ ಪಾರಾಗಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದನ್ನು ನೋಡಿದ ನೆಟ್ಟಿಗರು ಆನೆಯ ಜೀವ ಉಳಿಸಿದ ಸಿಬ್ಬಂದಿಗೆ ಧನ್ಯವಾದಗಳನ್ನು ಅರ್ಪಿಸುತ್ತಿದ್ದಾರೆ. ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ ಪ್ರವಾಹದಿಂದಾಗಿ ಈಗಾಗಲೇ ರಾಜ್ಯದಲ್ಲಿ ರೆಡ್ ಅಲರ್ಟ್ ಘೋಷಿಸಿದ್ದಾರೆ ಎಂದು ತಿಳಿದುಬಂದಿದೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಬಿಗ್ ಬಾಸ್ ಮನೆಯಲ್ಲಿ ನಂಬಿಕೆ ದ್ರೋಹವೇ ಹೆಚ್ಚು : ಕಿವಿಯಲ್ಲಿ ಹೇಳಿದ ಗುಟ್ಟು ಬಟಾ ಬಯಲು..!

ಬಿಗ್ ಬಾಸ್ ಕನ್ನಡ ಸೀಸನ್ 11 ಈಗ ಮುಕ್ಕಾಲು ಭಾಗ ಜರ್ನಿ ಮುಗಿಸಿದೆ. ಆದರೆ ಒಬ್ಬರಿಗೊಬ್ಬರ ನಡುವೆ ಬಾಂಧವ್ಯ, ಪ್ರೀತಿ, ನಿಸ್ಚಾರ್ಥ ಸ್ನೇಹ ಬೆಳೆಯುವುದಕ್ಕಿಂತ ಹೆಚ್ಚಾಗಿ ಬೇಳೆ ಬೇಯಿಸಿಕೊಳ್ಳಲು ಕ್ಲೋಸ್ ಆಗಿದ್ದೇ ಹೆಚ್ಚಾಗಿದೆ. ಇಂದು

ಮಹಾರಾಷ್ಟ್ರದ ನೂತನ ಸಿಎಂ ದೇವೇಂದ್ರ ಫಡ್ನವೀಸ್ : ಏಕನಾಥ್ ಶಿಂಧೆ, ಅಜಿತ್ ಪವಾರ್ ಗೆ ಪ್ರಮುಖ ಸ್ಥಾನ..?

    ಸುದ್ದಿಒನ್ ಮಹಾರಾಷ್ಟ್ರದ ನೂತನ ಸಿಎಂ ಹಾದಿ ಸುಗಮವಾಗಿದೆ. ದೇವೇಂದ್ರ ಫಡ್ನವಿಸ್ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಅವರ ಹೆಸರನ್ನು ಭಾರತೀಯ ಜನತಾ ಪಕ್ಷದ ಕೋರ್ ಕಮಿಟಿ ಸಭೆ ಅನುಮೋದಿಸಿತು. ಅವರು ಗುರುವಾರ

error: Content is protected !!