ಬೆಂಗಳೂರು : ದೂರದರ್ಶನ ಹಾಗೂ ಆಕಾಶವಾಣಿಯ ಸುದ್ದಿ ವಿಭಾಗದಲ್ಲಿ ಸಲಹಾ ಸಂಪಾದಕರು, ಬಹುಮಾಧ್ಯಮ ಪರ್ತಕರ್ತರು (Multi Media Journalist) ಹುದ್ದೆಗಳಲ್ಲಿ ಕಾರ್ಯನಿರ್ವಹಿಸಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಈ ಹುದ್ದೆಗಳು ಸಂಪೂರ್ಣವಾಗಿ ಗುತ್ತಿಗೆ ಆಧಾರವಾಗಿದ್ದು, ಪೂರ್ಣ ಅವಧಿಯಲ್ಲಿ ಕಾರ್ಯ ನಿರ್ವಹಿಸಬೇಕಿದೆ.
ಹುದ್ದೆಗಳ ವಿವರ ಇಂತಿವೆ:-
ಸಲಹಾ ಸಂಪಾದಕರು
ವಿದ್ಯಾರ್ಹತೆ- ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಅಥವಾ ಡಿಪ್ಲೋಮಾ
ಅನುಭವ – ಮಾಧ್ಯಮ ಕ್ಷೇತ್ರದಲ್ಲಿ ಕನಿಷ್ಠ 15 ವರ್ಷ
ಕಡ್ಡಾಯವಾಗಿ ಕನ್ನಡ ಭಾಷೆಯಲ್ಲಿ ಪರಿಣಿತಿ ಹಾಗೂ ಜ್ಞಾನ ಅವಶ್ಯ
ವಯೋಮಿತಿ- 55 ವರ್ಷ
ಗುತ್ತಿಗೆ ಅವಧಿ- 2 ವರ್ಷ
ಸಂಭಾವನೆ – ಪ್ರತಿ ತಿಂಗಳಿಗೆ ರೂ. 1,25,000/-
ಬಹು ಮಾಧ್ಯಮ ಪತ್ರಕರ್ತರು – ( Multi Media Journalist)
ಬಹು ಮಾಧ್ಯಮ ಪತ್ರಕರ್ತರಾಗಿ ಬೆಂಗಳೂರು, ರಾಯಚೂರು, ರಾಮನಗರ, ಮೈಸೂರು, ಕಲಬುರಗಿ, ಧಾರವಾಡ, ದಕ್ಷಿಣ ಕನ್ನಡ, ಚಿಕ್ಕಬಳ್ಳಾಪುರ, ಬೆಳಗಾವಿಯಲ್ಲಿ ಸಂಪೂರ್ಣವಾಗಿ ಗುತ್ತಿಗೆ ಆಧಾರದ ಮೇಲೆ ಪೂರ್ಣ ಅವಧಿಯಲ್ಲಿ ಕಾರ್ಯನಿರ್ವಹಿಸಬೇಕು.
ವಿದ್ಯಾರ್ಹತೆ- ಪತ್ರಿಕೋದ್ಯಮದಲ್ಲಿ ಪದವಿ ಅಥವಾ ಡಿಪ್ಲೋಮಾ,
ಕಡ್ಡಾಯವಾಗಿ ಕನ್ನಡ ಭಾಷೆಯಲ್ಲಿ ಪರಿಣಿತಿ ಹಾಗೂ ಜ್ಞಾನ
ಅನುಭವ- ವರದಿಗಾರಿಕೆಯಲ್ಲಿ 3 ವರ್ಷ
ವಯೋಮತಿ – 24-40 ವರ್ಷ
ಗುತ್ತಿಗೆ ಅವಧಿ- 2 ವರ್ಷ
ಸಂಭಾವನೆ- ಪ್ರತಿ ತಿಂಗಳಿಗೆ ರೂ. 30,000/-
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 23-11-2022
ಆಕಾಂಕ್ಷಿಗಳು
https://applications.prasarbharati.org ನಲ್ಲಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಹೆಚ್ಚಿನ ವಿವರಕ್ಕಾಗಿ
https://prasarbharati.gov.in/pbvacancies/