ಲಕ್ನೋ: ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಭರ್ಜರಿ ಪ್ರಚಾರ ಕಾರ್ಯ ನಡೆಯುತ್ತಿದೆ. ಯುಪಿ ಚುನಾವಣೆ ಗೆಲ್ಲಲೇಬೇಕೆಂಬ ಹಠದಿಂದ ಕಾಂಗ್ರೆಸ್ ಹೊಸ ಹೊಸ ಯೋಜನೆಗಳನ್ನ ಜನರ ಮುಂದಿಟ್ಟಿದೆ. ಈ ಬಾರಿ ಚುನಾವಣೆಗೆ ಮಹಿಳೆಯರನ್ನೇ ಟಾರ್ಗೆಟ್ ಮಾಡಿದೆ.
150 ಅಭ್ಯರ್ಥಿಗಳ ಪಟ್ಟಿ ತಯಾರಿಸಿದ್ದು, ಅದರಲ್ಲಿ 50 ಸೀಟು ಮಹಿಳೆಯರಿಗೆ ನೀಡಿದೆ. ಅಭ್ಯರ್ಥಿಗಳ ಮೊದಲ ಪಟ್ಟಿಯನ್ನ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಬಿಡುಗಡೆ ಮಾಡಿದ್ದಾರೆ. ಅದರಲ್ಲಿ ಅತ್ಯಾಚಾರಾ ಸಂತ್ರಸ್ತ ತಾಯಿಯನ್ನು ಕಣಕ್ಕಿಳಿಸಿದ್ದಾರೆ.
ಆಶಾ ಸಿಂಗ್ ಅವರನ್ನ ಉನ್ನಾವ್ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಗಳಲ್ಲಿ ಶೇ.40 ಮಹಿಳೆಯರು ಮತ್ತು ಶೇ.40 ಯುವಜನರಿದ್ದಾರೆ. ಈ ಮೂಲಕ ಪಕ್ಷವು ಹೊಸ ಮತ್ತು ಐತಿಹಾಸಿಕ ಆರಂಭಕ್ಕೆ ಸಾಕ್ಷಿಯಾಗಿದೆ. ಉತ್ತರ ಪ್ರದೇಶದಲ್ಲಿ ನ್ಯಾಯಕ್ಕಾಗಿ ಹೋರಾಡಿದವರನ್ನು ಅಭ್ಯರ್ಥಿಗಳಾಗಿ ಪಕ್ಷವು ಕಣಕ್ಕಿಳಿಸಿದೆ. ಅವರು ಮುಂಚೂಣಿಗೆ ಬಂದು ರಾಜ್ಯದಲ್ಲಿ ಅಧಿಕಾರದ ಭಾಗವಾಗಬೇಕೆಂದು ಪಕ್ಷವು ಬಯಸುತ್ತದೆ ಎಂದು ಪ್ರಿಯಾಂಕಾ ಗಾಂಧಿ ವಾದ್ರಾ ತಿಳಿಸಿದ್ದಾರೆ.