ಸೋಮವಾರ ಮುಂಜಾನೆ ಟರ್ಕಿಯಲ್ಲಿ ಪ್ರಬಲ ಭೂಕಂಪ ಸಂಭವಿಸಿದೆ. ಸಿರಿಯಾದ ಗಡಿಯಲ್ಲಿರುವ ದಕ್ಷಿಣ ಟರ್ಕಿಯಲ್ಲಿ ಸಂಭವಿಸಿದ ಭೂಕಂಪನವು ರಿಕ್ಟರ್ ಮಾಪಕದಲ್ಲಿ 7.8 ರಷ್ಟು ದಾಖಲಾಗಿದೆ. ಇದಾದ ಬಳಿಕ 6.7ರಷ್ಟು ತೀವ್ರತೆಯೊಂದಿಗೆ ಭೂಮಿ ಮತ್ತೆ ಕಂಪಿಸಿದೆ ಎಂದು ಅಮೆರಿಕದ ಭೂವೈಜ್ಞಾನಿಕ ಸಮೀಕ್ಷೆ ತಿಳಿಸಿದೆ.
ಗಜಿಯಾಂಟೆಪ್ ಪ್ರಾಂತ್ಯದ ನೂರ್ಡಗಿ ನಗರದ ಪೂರ್ವಕ್ಕೆ 26 ಕಿಲೋಮೀಟರ್ ದೂರದಲ್ಲಿ ಭೂಕಂಪ ಸಂಭವಿಸಿದೆ ಎಂದು ವರದಿಯಾಗಿದೆ. 17.9 ಕಿ.ಮೀ. ಭೂಕಂಪದ ಕೇಂದ್ರಬಿಂದುವಿದೆ ಎಂದು ಹೇಳಲಾಗಿದೆ. ಅಲ್ಲದೆ, ಕೆಲವೇ ನಿಮಿಷಗಳಲ್ಲಿ, ಮಧ್ಯ ಟರ್ಕಿಯಲ್ಲಿ 9.9 ಕಿಲೋಮೀಟರ್ ಆಳದಲ್ಲಿ ಎರಡನೇ ಭೂಕಂಪ ಸಂಭವಿಸಿದೆ ಎಂದು ಯುಎಸ್ ಜಿಯೋಲಾಜಿಕಲ್ ಸರ್ವೆ ತಿಳಿಸಿದೆ.
A Massive 7.8 Magnitude Earthquake has struck Central Turkey within the last hour, Severe Damage and multiple Casualties are being reported across the Region. pic.twitter.com/qILgKNAHMK
— OSINTdefender (@sentdefender) February 6, 2023
ಭೂಕಂಪದಿಂದಾಗಿ ಹಲವು ಕಟ್ಟಡಗಳು ಕುಸಿದಿವೆ. ಆದರೆ, ಪ್ರಾಣ ಅಥವಾ ಆಸ್ತಿ ನಷ್ಟದ ಬಗ್ಗೆ ಅಧಿಕೃತ ಹೇಳಿಕೆ ಬಂದಿಲ್ಲ.
ಆದರೆ, ಭಾರೀ ಪ್ರಾಣಹಾನಿ ಸಂಭವಿಸಿದೆ.
ಭೂಕಂಪದ ನಂತರ ಕಟ್ಟಡಗಳ ಅವಶೇಷಗಳಡಿಯಲ್ಲಿ ಹಲವರು ಸಿಲುಕಿಕೊಂಡಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋಗಳು ಮತ್ತು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಈ ವಿಡಿಯೋಗಳಲ್ಲಿ ಗಾಯಾಳುಗಳು ಭಯದಿಂದ ಕಿರುಚಿಕೊಂಡು ಓಡುತ್ತಿರುವ ದೃಶ್ಯ ಕಂಡು ಬಂದಿದೆ.
ಇದುವರೆಗೆ ಕನಿಷ್ಠ 53 ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಂಖ್ಯೆ ಹೆಚ್ಚಾಗುವ ನಿರೀಕ್ಷೆಯಿದ್ದು, ಅವಶೇಷಗಳಡಿ ಹಲವರು ಸಿಲುಕಿಕೊಂಡಿದ್ದಾರೆ ಎನ್ನಲಾಗಿದೆ. ಅವರನ್ನು ರಕ್ಷಿಸಲು ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದಾರೆ. ಗಾಯಾಳುಗಳನ್ನು ಹೊರತೆಗೆದು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
Multiple apartment buildings have collapsed after a powerful earthquake in southern Turkey https://t.co/wydrBj94RL
— BNO News (@BNONews) February 6, 2023
ಅಲ್ಲದೆ, ಹೆಚ್ಚಿನ ಸಂಖ್ಯೆಯ ಕಟ್ಟಡಗಳು ಮತ್ತು ಮನೆಗಳು ಸಹ ಕುಸಿದಿವೆ. ಭೂಕಂಪನದ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದುಬರಬೇಕಿದೆ.
ಏತನ್ಮಧ್ಯೆ, ಭೂಕಂಪನದ ಕೇಂದ್ರಬಿಂದುವು ದಕ್ಷಿಣ ಟರ್ಕಿಶ್ ನಗರವಾದ ಕಖ್ರಮನ್ಮರಸ್ ಬಳಿ 10 ಕಿಲೋಮೀಟರ್ ಆಳದಲ್ಲಿ ಪತ್ತೆಯಾಗಿದೆ ಎಂದು ಜರ್ಮನ್ ರಿಸರ್ಚ್ ಫಾರ್ ಜಿಯೋಸೈನ್ಸ್ ಹೇಳಿದೆ. ಸುನಾಮಿ ಅಪಾಯದ ಬಗ್ಗೆ ಪರಿಶೀಲಿಸಲಾಗುತ್ತಿದೆ ಎಂದು ಅದು ಹೇಳಿದೆ. ಗಾಜಿಯಾಂಟೆಪ್ ಜೊತೆಗೆ, ಸುತ್ತಮುತ್ತಲಿನ ಪ್ರಾಂತ್ಯಗಳಾದ ಅನ್ ಮಾಲ್ಟ್ಯಾ ಮತ್ತು ದಿಯಾರ್‌ಬಕಿರ್‌ಗಳಲ್ಲಿನ ಕಟ್ಟಡಗಳು ಸಹ ನಾಶವಾದವು. ಅಲ್ಲದೆ, ಗಡಿಯಲ್ಲಿ ಲೆಬನಾನ್ ಮತ್ತು ಸಿರಿಯಾದಲ್ಲಿ ಭೂಕಂಪದಿಂದಾಗಿ ಅನೇಕ ಜನರು ಸಾವನ್ನಪ್ಪಿದ್ದಾರೆ.
ಸಿರಿಯಾದಲ್ಲಿ 40ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.