ಬೆಳಗಾವಿ : ಬೀದಿ ನಾಯಿಗಳ ದಾಳಿಗೆ ಮಗುವೊಂದು ಬಲಿಯಾಗಿದೆ. ನಾಲ್ಕು ವರ್ಷದ ಮಗುವನ್ನೇ ಬೀದಿ ನಾಯಿಗಳು ಬಲಿ ಪಡೆದಿದೆ. ಸೌಜನ್ಯ ಮಲ್ಲಪ್ಪ ಮುತ್ತೂರ ಬಲಿಯಾದ ಮಗು.
ಅಥಣಿ ತಾಲೂಕಿನ ಬಳವಾಡ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮೃತ ಬಾಲಕಿ ಸೌಜನ್ಯ ಆಟವಾಡುತ್ತಿದ್ದಾಗ ನಾಯಿಗಳು ದಾಳಿ ಮಾಡಿವೆ. ಮಗುವಿನ ಮೇಲೆ ದಾಳಿ ಮಾಡಿದ ಪರಿಣಾಮ ಮಗುವಿಗೆ ಹೆಚ್ಚು ಗಾಯವಾಗಿತ್ತು. ಮಗುವಿನ ಚೀರಾಟ ನೋಡಿ ರಕ್ಷಿಸಲು ಯತ್ನಿಸಿದ್ದಾರೆ.
ನಾಯಿಗಳಿಂದ ಮಗು ರಕ್ಷಿಸಿ, ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದ್ರೆ ನತಾದೃಷ್ಟವೆಂಬಂತೆ ಮಗು ಬದುಕುಳಿದಿಲ್ಲ. ದಾರಿ ಮಧ್ಯೆಯೇ ಮಗು ಕೊನೆಯುಸಿರೆಳೆದಿದೆ.