ಬೆಳಗಾವಿ: ಮರಾಠಿಗರು ಮತ್ತೆ ತಮ್ಮ ಪುಂಡಾಡಿಕೆ ಮುಂದುವರೆಸಿದ್ದಾರೆ. ಕನ್ನಡಿಗರ ಮೇಲೆ ಕ್ಯಾತೆ ತೆಗೆದಿದ್ದಾರೆ. ಮಹಾರಾಷ್ಟ್ರದಲ್ಲಿ ಕರ್ನಾಟಕಕ್ಕೆ ಸಂಬಂಧಿಸಿದ ಸಾರಿಗೆ ಬಸ್ ಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ನಿನ್ನೆಯಷ್ಟೇ ಗಲಾಟೆಯಾದ ಹಿನ್ನೆಲೆ ಮಹಾರಾಷ್ಟ್ರದಿಂದ ಬರುತ್ತಿದ್ದ ಬಸ್ ಗಳನ್ನು ಸ್ಥಗಿತಗೊಳಿಸಲಾಗಿತ್ತು. ಇವತ್ತು ಕೂಡ ಮರಾಠಿಗರು ಕ್ಯಾತೆ ತೆಗೆದಿದ್ದಾರೆ.
ಮೀರಜ್ ಕಾಗವಾಡದ ಮಾರ್ಗ ಮಧ್ಯೆ ಕರ್ನಾಟಕದ ಕೆ ಎಸ್ ಆರ್ ಟಿ ಸಿ ಬಸ್ ಗಳಿಗೆ ಕಲ್ಲು ತೂರಾಟ ನಡೆಸಿದ್ದು, ಗಾಜುಗಳನ್ನು ಪುಡಿ ಪುಡಿ ಮಾಡಿದ್ದಾರೆ. ರಾತ್ರಿ 10.30ರ ಸುಮಾರಿಗೆ ಈ ಘಟನೆ ನಡೆದಿದೆ. ಪುಣೆಯಿಂದ ಅಥಣಿಗೆ ಬರುತ್ತಿದ್ದ ಬಸ್ ಮೇಲೆ ಕಲ್ಲು ತೂರಾಟ ನಡೆದಿದೆ. ಈ ಸಂಬಂಧ ಬಸ್ ನ ಮುಂಭಾಗದ ಗ್ಲಾಸ್ ಹೊಡೆದು ಹೋಗಿದೆ. ಬೆಳಗಾವಿ ಜಿಲ್ಲಾ ಪೊಲೀಸರ ಸೂಚನೆ ಮೇರೆಗೆ ಬಸ್ ಗಳ ಸಂಚಾರ ಸ್ಥಗಿತಗೊಂಡಿದೆ.