- ಚಿತ್ರದುರ್ಗ ಜಿಲ್ಲಾ ನೀರಾವರಿ ಅನುಷ್ಟಾನ ಹೋರಾಟ ಸಮಿತಿಯಿಂದ ಸಂಗೇನಹಳ್ಳಿ ಕೆರೆಗೆ ಬಾಗಿನ ಸಮರ್ಪಣೆ
ಚಿತ್ರದುರ್ಗ, (ಡಿ.16) : ಭದ್ರಾ ಮೇಲ್ದಂಡೆ ಯೋಜನೆಯಡಿ ಜಗಳೂರು ತಾಲೂಕಿನ ಕೆರೆಗಳಿಗೆ ನೀರು ತುಂಬಿಸುವ ಪೂರಕ ಶಾಖಾ ಕಾಲುವೆ ಕಾಮಗಾರಿ ಶೀಘ್ರ ಆರಂಭಿಸುವಂತೆ ಮಾಜಿ ಶಾಸಕ ಹೆಚ್.ಪಿ.ರಾಜೇಶ್ ಆಗ್ರಹಿಸಿದರು.
ಜಿಲ್ಲಾ ನೀರಾವರಿ ಅನುಷ್ಠಾನ ಹೋರಾಟ ಸಮಿತಿ ವತಿಯಿಂದ ಶುಕ್ರವಾರ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಚಿತ್ರದುರ್ಗ ತಾಲೂಕಿನ ಗಡಿಯಂಚಿನ ಸಂಗೇನಹಳ್ಳಿ ಕೆರೆಗೆ ಬಾಗಿನ ಸಮರ್ಪಣೆ ಮಾಡಿ ಮಾತನಾಡಿದ ಅವರು ಭದ್ರಾ ಮೇಲ್ದಂಡೆಯಡಿ ಜಗಳೂರು ತಾಲೂಕಿನ 9 ಕೆರೆಗಳಿಗ ನೀರು ತುಂಬಿಸಲಾಗುತ್ತಿದೆ. ಸೂಕ್ತ ಸಮೀಕ್ಷಾ ಕಾರ್ಯ ಪೂರ್ಣಗೊಳಿಸಿ, ವಿನ್ಯಾಸ ರೂಪಿಸಿ ಟೆಂಡರ್ ಕರೆದು ಕಾಮಗಾರಿ ಕೈಗೆತ್ತಿಕೊಳ್ಳಬೇಕಾಗಿದೆ. ಆದರೆ ಇದುವರೆಗೂ ವಿನ್ಯಾಸ ರೂಪಿಸದ ಕಾರಣ ಕಾಮಗಾರಿ ವಿಳಂಬವಾಗಿದೆ. ಜಲ ಸಂಪನ್ಮೂಲ ಇಲಾಖೆ ಅ„ಕಾರಿಗಳು ತ್ವರಿತ ವೇಗ ನೀಡಬೇಕೆಂದು ಒತ್ತಾಯಿಸಿದರು.
ಭದ್ರಾ ಮೇಲ್ದಂಡೆ ಹೊರತು ಪಡಿಸಿ ಜಗಳೂರು ತಾಲೂಕಿನ 57 ಕೆರೆಗ ತುಂಗ ಭದ್ರಾ ದಿಂದ ನೀರು ತುಂಬಿಸುವ 650 ಕೋಟಿ ರುಪಾಯಿ ವೆಚ್ಚದ ಯೋಜನೆಗೆ ಹಿಂದಿನ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಒಪ್ಪಿಗೆ ನೀಡಿ ಕಾಮಗಾರಿ ಆರಂಭಿಸಿತ್ತು.ಚಟ್ನಹಳ್ಳಿ ಗುಡ್ಡದಲ್ಲಿ ಟ್ಯಾಂಕ್ ನಿರ್ಮಿಸಿ ಅಲ್ಲಿಂದ ಗುರುತ್ವಾಕರ್ಷಣ ಮೂಲಕ ಕೆರೆಗಳ ತುಂಬಿಸುವ ಕಾರ್ಯ ಇದಾಗಿದೆ. ಈ ಕಾಮಗಾರಿ ಪೂರ್ಣಗೊಂಡಲ್ಲಿ ಜಗಳೂರಿನ ಬರದ ಚಿತ್ರಬದಲಾಗಲಿದೆ ಎಂದರು.
ಭದ್ರಾ ಮೇಲ್ದಂಡೆಗಾಗಿ ಜಗಳೂರಿನ ಜನ 250 ದಿನ ಉಪವಾಸ ಸತ್ಯಾಗ್ರಹ ನಡೆಸಿ ಯೋಜನೆ ಮಂಜೂರು ಮಾಡಿಸಿಕೊಂಡಿದ್ದರು. ಚಿತ್ರದುರ್ಗ ನೀರಾವರಿ ಅನುಷ್ಠಾನ ಸಮಿತಿಯವರು ಜಗಳೂರು ತಾಲೂಕಿನ ನೀರಾವರಿಗೆ ಕಾಳಜಿ ವಹಿಸಿ ದನಿಗೂಡಿಸಿರುವುದು ಸಂತಸದ ಸಂಗತಿ. ಜಗಳೂರಿನ ಜನ ತಾಂತ್ರಿಕವಾಗಿ ದಾವಣಗೆರೆ ಜಿಲ್ಲೆ ಜೊತೆ ಇದ್ದರೂ ಮಾನಸಿಕವಾಗಿ ದುರ್ಗದ ಒಡನಾಟದಲ್ಲಿ ಇದ್ದಾರೆ ಎಂದರು.
ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಸಮಿತಿ ಕಾರ್ಯಾಧ್ಯಕ್ಷ ಬಿ.ಎ.ಲಿಂಗಾರೆಡ್ಡಿ ಮಾತನಾಡಿ ಕಳೆದ 25 ವರ್ಷಗಳಿಂದ ಹೋರಾಟ ಮಾಡಿದ -Àಲ ಈಗ ಕಣ್ಣ ಮುಂದೆ ಇದೆ. ಈ ಮೊದಲು ಜಗಳೂರು, ಮೊಳಕಾಲ್ಮೂರು ಹಾಗೂ ಚಳ್ಳಕೆರೆ ಭಾಗಕ್ಕೆ ನೀರಾವರಿ ಕಲ್ಪಿಸಲೆಂದೇ ಭದ್ರಾ ಹೋರಾಟ ಕಟ್ಟಲಾಗಿತ್ತು. ಅಜ್ಜಂಪುರ ಸಮೀಪ ಅಬ್ಬಿನಹೊಳೆ ಬಳಿ 1.9 ಕಿ.ಮೀ ನಷ್ಟು ಭೂ ಸ್ವಾ„ೀನ ಪ್ರಕ್ರಿಯೆಗೆ ರೈತರು ತೊಡಕು ಉಂಟು ಮಾಡಿರುವುದರಿಂದ ಕಾಮಗಾರಿ ಕುಂಠಿತವಾಗಿದೆ. ಈ ಸಂಬಂಧ ಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವರ ಬಳಿ ಮಾತನಾಡಿ ಸಮಸ್ಯೆ ಬಗೆ ಹರಿಸುವಂತೆ ಕೋರಲಾಗಿದೆ ಎಂದರು.
ಹೋರಾಟ ಸಮಿತಿಯ ಜಗಳೂರು ಯಾದವರೆಡ್ಡಿ ಮಾತನಾಡಿ, ಜಗಳೂರು ತಾಲೂಕಿಗೆ ನೀರು ಕೊಡಲು ದಾವಣಗೆರೆ ಜಿಲ್ಲೆಯ ಜನ ತೊಡರುಗಾಲ ಹಾಕುತ್ತಿದ್ದಾರೆ. ಸಂಸದ ಜಿ.ಎಂ.ಸಿದ್ದೇಶ್ವರ ಕೂಡಾ ಜಗಳೂರು ತಾಲೂಕಿನ ವಿರುದ್ದ ಮಾನತಾಡಿದ್ದರು. ನಮ್ಮನ್ನು ಪ್ರತಿನಿ„ಸುವ ಜನರೇ ವಿರೋಧ ವ್ಯಕ್ತಪಡಿಸಿದರೆ ಹೇಗೆ ಎಂದು ಪ್ರಶ್ನಿಸಿದರು.
ಜನತೆ ಹೋರಾಟದ -ಫಲವಾಗಿ ಭದ್ರಾ ಮಂಜೂರಾಗಿದೆ. ರಾಜಕಾರಣಿಗಳು ಬೆಂಬಲ ನೀಡಿಲ್ಲ. ಜಗಳೂರಿನ ಜನರನ್ನು ದಾವಣಗೆರೆ ಮಂದಿ ಅತಿಥಿಗಳನ್ನಾಗಿ ನೋಡುತ್ತಿದ್ದಾರೆಯೇ ವಿನಹ ಜಿಲ್ಲೆಯ ಮಕ್ಕಳೆಂದು ಭಾವಿಸಿಲ್ಲ. ಭದ್ರೆ ಹೇಗೆ ಹರಿದು ಬರುತ್ತಾಳೆಂಬುದು ಜಗಳೂರಿನ ಜನರಿಗೆ ಇದುವರೆಗೂ ಮನವರಿಕೆ ಮಾಡಿಕೊಡಲಾಗಿಲ್ಲ. ಆದರೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಅಭಿವೃದ್ದಿ ಪರವಾದ ರಾಜಕಾರಣ ಇಂದಿನ ತುರ್ತು ಅಗತ್ಯವೆಂದು ಯಾದವರೆಡ್ಡಿ ಹೇಳಿದರು.
ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಅಧ್ಯಕ್ಷ ಟಿ.ನುಲೇನೂರು ಎಂ.ಶಂಕರಪ್ಪ ಮಾತನಾಡಿ, ಮಗು ಅಳದ ಹೊರತು ತಾಯಿ ಮೊಲೆಯುಣಿಸುವುದಿಲ್ಲ. ಇಂತಹ ಕಟು ವಾಸ್ತವದಲ್ಲಿ ನಾವಿದ್ದು ಹೋರಾಟ ಮಾಡದ ಹೊರತು ಯಾವ ಸರ್ಕಾರಗಳೂ ಜನರ ಸಮಸ್ಯೆ ನಿವಾರಿಸುವುದಿಲ್ಲ. ಚಿತ್ರದುರ್ಗ ಜಿಲ್ಲೆಗೆ ನೀರು ಬಿಡಬಾರದೆಂದು ಕಾಡಾದಲ್ಲಿ ನಿರ್ಣಯ ಮಾಡ್ದಿದರು. ಅದರ ವಿರುದ್ದವಾಗಿ ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಎಚ್ಚರಿಕೆ ಸಂದೇಶ ರವಾನೆ ಮಾಡಿದಾಗ ಅವರು ಸುಮ್ಮನಾದರೆಂದರು.
ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ.ಆರ್.ದಯಾನಂದ್, ಸಂಗೇನಹಳ್ಳಿ ಅಶೋಕ್ ಕುಮಾರ್, ಚಿಕ್ಕಪ್ಪನಹಳ್ಳಿ ಷಣ್ಮುಖ, ರೈತ ಸಂಘದ ಜಿಲ್ಲಾಧ್ಯಕ್ಷ ಬಸ್ತಿಹಳ್ಳಿ ಸುರೇಶ್‍ಬಾಬು, ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಹೋರಾಟ ಸಮಿತಿ ಓಬಳೇಶ್, ಗ್ರಾಮ ಪಂಚಾಯಿತಿ ಅಧ್ಯಕ್ಷ ತಿಪ್ಪೇಸ್ವಾಮಿ, ಸದಸ್ಯ ಚನ್ನಕೇಶವ, ಆರ್.ಪ್ರಕಾಶ್‍ರೆಡ್ಡಿ, ಓಬಣ್ಣ, ರಾಜೇಂದ್ರ, ಶಾಂತಕುಮಾರ, ಕೇಶವರೆಡ್ಡಿ, ಗೋಪಾಲರೆಡ್ಡಿ, ಅನಂತರೆಡ್ಡಿ, ರವಿ ಇದ್ದರು.