ಚೆನ್ನೈ: ಪ್ರಧಾನಿ ಮೋದಿ ಅವರು ಚೆನ್ನೈಗೆ ಆಗಮಿಸಿದ್ದರು. ಅದು ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡುವುದಕ್ಕಾಗಿ. ಈ ಕಾರ್ಯಕ್ರಮದಲ್ಲಿ ತಮಿಳುನಾಡು ಸಿಎಂ ಎಂ ಕೆ ಸ್ಟಾಲಿನ್ ಮಾತನಾಡುತ್ತಾ, ತಮಿಳು ಭಾಷೆಯನ್ನು ಅಧಿಕೃತ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ.
ಡಿಎಂಕೆ ಪಕಗಷ ಅಧಿಕಾರಕ್ಕೆ ಬಂದ ನಂತರ, ಪ್ರಧಾನಿ ಮೋದಿಯವರು ಭಾಗವಹಿಸುತ್ತಿರುವ ಮೊದಲ ಸರ್ಕಾರಿ ಕಾರ್ಯಕ್ರಮ ಇದಾಗಿದೆ. ಈ ವೇಳೆ ತಮಿಳು ಭಾಷೆಯ ಬಗ್ಗೆ ಮನವಿ ಮಾಡಿಕೊಳ್ಳುತ್ತೇನೆ. ಹಿಂದಿಯಂತೆ ತಮಿಳನ್ನು ಅಧಿಕೃತ ಭಾಷೆಯಾಗಿ ಮಾಡಿ. ಮತ್ತು ಮದ್ರಾಸ್ ಹೈಕೋರ್ಟ್ ನಲ್ಲಿ ಅಧಿಕೃತ ಭಾಷೆಯಾಗಿ ಮಾಡಿ ಎಂದಿದ್ದಾರೆ.
ರಾಜ್ಯವೂ ಈಗಾಗಲೇ ಹಲವಾರು ಕ್ಷೇತ್ರದಲ್ಲಿ ಅಭಿವೃದ್ಧಿಯಾಗಿದೆ. ಇನ್ನು ಅಭಿವೃದ್ಧಿಯಾಗಲು ಕೇಂದ್ರ ಸರ್ಕಾರ ತಮಿಳುನಾಡು ಯೋಜನೆಗಳಿಗೆ ಧನಸಹಾಯ ಹೆಚ್ಚಿಸಬೇಕಿದೆ. ತಮಿಳುನಾಎಉ ಬೆಳವಣಿಗೆಯು ಕೇವಲ ಆರ್ಥಿಕ ಮಾನದಂಡಗಳ ಮೇಲಷ್ಟೇ ಅಲ್ಲದೆ ಅಂತರ್ಗತ ಬೆಳವಣಿಗೆಯ ದ್ರಾವಿಡ ಮಾದರಿಯನ್ನು ಆಧರಿಸಿದೆ ಎಂದಿದ್ದಾರೆ.