ಮಂಡ್ಯ: ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜಕೀಯ ಪಕ್ಷಗಳು ಮತ್ತಷ್ಟು ಆಕ್ಟೀವ್ ಆಗುತ್ತವೆ. ಜನರ ಜೊತೆ ಬೆರೆಯಲು ಶುರು ಮಾಡುತ್ತವೆ. ಜನರ ಒಡನಾಟ ಬೆಳೆಸಿಕೊಂಡು ಭಾಷಣ ಮಾಡುವಾಗ ಏನೇನೋ ಮಾತನಾಡಿರುತ್ತಾರೆ. ವಿರೋಧ ಪಕ್ಷಗಳಿಗೆ ತಿರುಗೇಟು ನೀಡುವಾಗಲೂ ಒಂದಷ್ಟು ಮಿಸ್ಟೇಕ್ ಗಳು ಆಗಿರುತ್ತವೆ.
ಇದೀಗ ಅಂತದ್ದೇ ಯಡವಟ್ಟನ್ನು ಸುಮಲತಾ ಆಪ್ತ ಮಾಡಿಕೊಂಡಿದ್ದಾರೆ. ಭಾಷಣ ಮಾಡುವಾಗ ಕೋಮು ಸೌಹಾರ್ದ ಹಾಳಾಗುವಂತ ವಿಚಾರವನ್ನೇ ಹೇಳಿದ್ದಾರೆ. ಹೀಗಾಗಿ ಶ್ರೀರಂಗಪಟ್ಟಣದ ಬಿಜೆಪಿ ಅಭ್ಯರ್ಥಿ ಸಚ್ಚಿದಾನಂದ ವಿರುದ್ಧ ದೂರು ದಾಖಲಾಗಿದೆ. ಏಪ್ರಿಲ್ 29ರಂದು ಸಚ್ಚಿದಾನಂದ ಅವೆಉ ಪ್ರಚೋದನಕಾರಿಭಾಷಣ ಮಾಡಿದ್ದರು. ಈ ಹಿನ್ನೆಲೆ ಅವರ ವಿರುದ್ಧ FIR ದಾಖಲಿಸಲಾಗಿದೆ.
ಇನ್ನು ಸುಮಲತಾ ಅವರು ಸ್ವತಂತ್ರ ಅಭ್ಯರ್ಥಿಯಾವಿ ಗೆಲುವು ಸಾಧಿಸಿ, ಸಂಸದೆಯಾಗಿದ್ದರು. ಅವರಿಗೆ ಕಾಂಗ್ರೆಸ್ ಕಾರ್ಯಕರ್ತರು ಕೂಡ ಪರೋಕ್ಷವಾಗಿ ಬೆಂಬಲ ನೀಡಿದ್ದರು. ಆದರೆ ಬಿಜೆಪಿಗೆ ಸೇರಿ, ಬೆಂಬಲಿಗರಿಗೆ ನೋವು ನೀಡಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ನಡೆಸುತ್ತಿದ್ದಾರೆ.