ಬೆಂಗಳೂರು: ನಿನ್ನೆ ಸಂಜೆ ಆಕಾಶ ನೋಡಿದವರಿಗೆಲ್ಲಾ ಅಚ್ಚರಿ ಕಾಣಿಸಿಕೊಂಡಿದೆ. ಆಕಾಶದಲ್ಲಿ ನಕ್ಷತ್ರಗಳ ಸಾಲು ಒಂದೇ ಕಡೆಗೆ ಸಾಗುತ್ತಿರುವ ದೃಶ್ಯ ಕಂಡು ನೋಡಿದವರು ಅಚ್ಚರಿಗೆ ಒಳಗಾಗಿದ್ದರು. ಆದ್ರೆ ಅದು ನಕ್ಷತ್ರವಲ್ಲ ಎಂಬುದು ಈಗ ತಿಳಿದು ಬಂದಿದೆ.
ಉಡುಪಿ, ಕಾರವಾರ, ಶಿವಮೊಗ್ಗ, ಬಾಗಲಕೋಟೆ ಸೇರಿದಂತೆ ಹಲವು ಕಡೆ ಈ ರೀತಿ ಸಾಲು ಸಾಲು ನಕ್ಷತ್ರಗಳಂತೆ ಕಾಣುವ ದೃಶ್ಯ ಕಂಡು ಜನ ಆಶ್ಚರ್ಯ ಚಕಿತರಾಗಿದ್ದಾರೆ. ಮೂಲಗಳ ಪ್ರಕಾರ ಇಂದು ಸಂಜೆ ಕೂಡ ಇಂಥ ದೃಶ್ಯ ಕಾಣುವ ಸಾಧ್ಯತೆ ಇದೆ ಎನ್ನಲಾಗಿದೆ.
ಇದಕ್ಕೆಲ್ಲಾ ಕಾರಣ ಪುಟ್ಟ ಗ್ರಹಗಳ ಉಡಾವಣೆ. ಹೌದು ನಿನ್ನೆ ಒಂದೇ ದಿನ 52 ಪುಟ್ಟ ಉಪಗ್ರಹಗಳ ಉಡಾವಣೆಯಾಗಿದೆ. ಅಮೆರಿಕಾದ ಕ್ಯಾಲಿಫೋರ್ನಿಯಾದಿಂದ ಈ ಪುಟ್ಟ ಉಪಗ್ರಹಗಳನ್ನ ಉಡಾವಣೆ ಮಾಡಲಾಗಿದೆ. ಅಮೆರಿಕಾದ ಖಾಸಗಿ ಬಾಹ್ಯಾಕಾಶ ಸಂಸ್ಥೆ ಸ್ಪೆಸ್X ನಿಂದ ಈ ಉಡಾವಣೆ ಮಾಡಲಾಗಿತ್ತು. ಹೀಗಾಗಿ ಆ ಪುಟಾಣಿ ಗ್ರಹಗಳೆಲ್ಲಾ ನಕ್ಷತ್ರಗಳ ರೀತಿ ಹೋಚರವಾಗಿದೆ.