Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಸರ್ ಎಂ.ವಿಶ್ವೇಶ್ವರಯ್ಯನವರ ಕೊಡುಗೆ ಇಂದಿಗೂ ಸ್ಮರಣೀಯ : ಡಾ.ನಟರಾಜ್

Facebook
Twitter
Telegram
WhatsApp

 

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್. 15 : ಭಾರತ ರತ್ನ ಸರ್ ಎಂ.ವಿಶ್ವೇಶ್ವರಯ್ಯನವರು ವಿಶ್ವವೇ ಜ್ಞಾನಪಿಸಿಕೊಳ್ಳುವಂತ ಕೊಡುಗೆಯನ್ನು ನೀಡಿರುವುದರಿಂದ ಇಂದಿಗೂ ಎಲ್ಲರ ಮನದಲ್ಲಿ ಸ್ಮರಣೀಯವಾಗಿ ಉಳಿದಿದ್ದಾರೆಂದು ಅಪರಾಧ ಶಾಸ್ತ್ರದ ವಿಶ್ರಾಂತ ಪ್ರಾಧ್ಯಾಪಕ ಡಾ.ನಟರಾಜ್ ಸ್ಮರಿಸಿಕೊಂಡರು.

ಭಾರತ ರತ್ನ ಸರ್ ಎಂ.ವಿಶ್ವೇಶ್ವರಯ್ಯನವರ 164 ಜನ್ಮ ದಿನದ ಅಂಗವಾಗಿ ಚಿತ್ರದುರ್ಗ ಜಿಲ್ಲಾ ಪ್ರಾಕ್ಟಿಸಿಂಗ್ ಆರ್ಕಿಟೆಕ್ಟ್ಸ್ ಸಿವಿಲ್ ಇಂಜಿಯರ್ಸ್ ಅಸೋಸಿಯೇಷನ್ ವತಿಯಿಂದ ತರಳಬಾಳು ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಆರನೇ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಸರ್ ಎಂ.ವಿಶ್ವೇಶ್ವರಯ್ಯನವರ ಹುಟ್ಟುಹಬ್ಬವನ್ನು ಇಂಜಿನಿಯರ್ಸ್ ಡೇಯನ್ನಾಗಿ ಆಚರಿಸಲಾಗುತ್ತಿದೆ. ಅದೇ ರೀತಿ ಶಿಕ್ಷಕರಾಗಿದ್ದು, ದೇಶದ ಅತ್ಯುನ್ನತ ರಾಷ್ಟ್ರಪತಿ ಹುದ್ದೆಯನ್ನಲಂಕರಿಸಿದ ಡಾ.ಸರ್ವಪಲ್ಲಿ ರಾಧಾಕೃಷ್ಣನ್‍ರವರ ಜಯಂತಿಯನ್ನು ಶಿಕ್ಷಕರ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿರುವುದರಲ್ಲಿ ವಿಶೇಷತೆಯಿದೆ ಎಂದು ಹೇಳಿದರು.

ಸರ್ ಎಂ.ವಿಶ್ವೇಶ್ವರಯ್ಯನವರ ಪೂರ್ವಜರು ಆಂಧ್ರದಿಂದ ಕರ್ನಾಟಕಕ್ಕೆ ಬಂದು ಪೂಜೆ, ಪುನಸ್ಕಾರ ಮಾಡಿಕೊಂಡು ಜೀವಿಸುತ್ತಿದ್ದರು. ಅಂತಹ ಕಷ್ಟದ ಪರಿಸ್ಥಿತಿಯಲ್ಲಿ ವಿಶ್ವೇಶ್ವರಯ್ಯನವರು ಇಂಜಿನಿಯರ್ ಆಗಿ ದೇಶ ಮರೆಯಲಾರದಂತ ಕೊಡುಗೆ ಕೊಟ್ಟಿದ್ದಾರೆಂದು ಬಣ್ಣಿಸಿದರು.

ಇತ್ತೀಚಿನ ದಿನಗಳಲ್ಲಿ ಇಂಜಿನಿಯರ್, ಗುತ್ತಿಗೆದಾರರನ್ನು ಅವಮಾನಿಸಲಾಗುತ್ತಿದೆ. ಎಲ್ಲವನ್ನು ಮೆಟ್ಟಿ ನಿಲ್ಲಬೇಕಾದರೆ ಸರ್.ಎಂ.ವಿ.ರವರ ಆದರ್ಶಗಳನ್ನು ಜೀವನದಲ್ಲಿ ಮೈಗೂಡಿಸಿಕೊಳ್ಳಬೇಕು. ದಕ್ಷಿಣ ಭಾರತದಲ್ಲಿ ನೀರಾವರಿ ಯೋಜನೆಗಳನ್ನು ಕೈಗೊಳ್ಳಬೇಕಾದರೆ ಸರ್.ಎಂ.ವಿಶ್ವೇಶ್ವರಯ್ಯನವರ ಸಲಹೆ ಪಡೆದುಕೊಳ್ಳಲಾಗುತ್ತಿತ್ತು. ಒಂದು ಕಟ್ಟಡ, ಅಣೆಕಟ್ಟೆ ಕಟ್ಟಿದರೆ ಅದು ಎಷ್ಟು ಕಾಲ ಬಾಳಿಕೆ ಬರಬಹುದೆಂಬ ದೂರದೃಷ್ಟಿಯಿತ್ತು. ತಮಿಳುನಾಡು-ಕರ್ನಾಟಕದ ನಡುವೆ ಇಂದಿಗೂ ಕಗ್ಗಂಟಾಗಿ ಉಳಿದಿರುವ ಕಾವೇರಿ ನದಿ ನೀರಿನ ಹಂಚಿಕೆ ಕುರಿತು ಬ್ರಿಟೀಷರ ತಾರತಮ್ಯವನ್ನು ದಾಖಲೆ ಸಮೇತ ಸರ್.ಎಂ.ವಿಶ್ವೇಶ್ವರಯ್ಯನವರು ವಿರೋಧಿಸಿದ್ದರು. ಅಂತಹ ತಾಕತ್ತು ಅವರಲ್ಲಿತ್ತೆಂದು ಗುಣಗಾನ ಮಾಡಿದರು.

ಒಂದು ಅಣೆಕಟ್ಟೆ ಕಟ್ಟಿದರೆ ಮಳೆಗಾಲದಲ್ಲಿ ಎಷ್ಟು ನೀರು ನಿಲ್ಲಬಹುದು. ಮಳೆಯಿಲ್ಲದಿದ್ದಾಗ ಏನೇನು ಸಮಸ್ಯೆಗಳಾಗುತ್ತದೆ. ಕೃಷಿಕರಿಗೆ ಇದರಿಂದ ಏನು ಪ್ರಯೋಜನ ಎನ್ನುವ ಚಿಂತನೆ ಸರ್.ಎಂ.ವಿ.ಯವರಲ್ಲಿತ್ತು. ಕಟ್ಟಡ ಕಟ್ಟಿದರೆ ಇಂಜಿನಿಯರ್‍ಗಳ ಕೆಲಸ ಅಷ್ಟಕ್ಕೆ ಮುಗಿಯುವುದಿಲ್ಲ. ಕಾಲ ಕಾಲಕ್ಕೆ ತಪಾಸಣೆ ಮಾಡಬೇಕು. ಮುಂದೆ ಎದುರಾಗಬಹುದಾಗ ಅನಾಹುತಗಳನ್ನು ತಡೆಗಟ್ಟುವ ಸಾಮಥ್ರ್ಯ ವಿಶ್ವೇಶ್ವರಯ್ಯನವರಲ್ಲಿದ್ದ ಕಾರಣಕ್ಕೆ ಭಾರತ ರತ್ನ ಎನಿಸಿಕೊಂಡಿದ್ದಾರೆಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಿಡಿಪೇಸ್ ಅಧ್ಯಕ್ಷ ಎಸ್.ಎಸ್.ಪ್ರಸಾದ್ ಮಾತನಾಡಿ ಯಾವುದೇ ಒಂದು ಯೋಜನೆ ಯಶಸ್ವಿಯಾಗಬೇಕಾದರೆ ಕ್ವಾಲಿಫೈಡ್ ಇಂಜಿನಿಯರ್‌ ಗಳಿರಬೇಕು. ಹಾಗಾಗಿ ಹೊಸಬರಿಗೆ ಪ್ರೇರಣೆಯಾಗಬೇಕೆಂಬುದು ನಮ್ಮ ಉದ್ದೇಶ. ಆರು ವರ್ಷಗಳಿಂದ ಇಂಜಿನಿಯರ್ಸ್ ಡೇ ಆಚರಿಸಿಕೊಂಡು ಬರುತ್ತಿದ್ದೇವೆ. ಜೊತೆಗೆ ತಾಂತ್ರಿಕವಾಗಿ ಅವಶ್ಯವಿರುವ ಕಾರ್ಯಕ್ರಮ, ಕಟ್ಟಡ ಸಾಮಾಗ್ರಿಗಳ ಪ್ರದರ್ಶನ ಕೂಡ ಪ್ರತಿ ವರ್ಷವೂ ಇರುತ್ತದೆ. ಹೊಸ ಯೋಜನೆಗಳ ಮಾಹಿತಿ, ನೂನ್ಯತೆ ಬಗ್ಗೆ ಚರ್ಚಿಸಿ ಕಮಿಟಿ ರಚಿಸಿ ನಾನ್ ಟೆಕ್ನಿಕಲ್ ಹ್ಯಾಂಡ್‍ಗಳು ಜಾಸ್ತಿಯಾಗುತ್ತಿರುವುದನ್ನು ತಡೆಯುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೇವೆಂದು ತಿಳಿಸಿದರು.

ಸಿಡಿಪೇಸ್ ಕಾರ್ಯದರ್ಶಿ ಮಾದವ್ ಎಂ.ಪೊಕಾಳೆ, ಜೆ.ಎಸ್.ಡಬ್ಲ್ಯು, ಜನರಲ್ ಮ್ಯಾನೇಜರ್ ರಾಮಚಂದ್ರಪ್ಪ, ಅಬ್ದುಲ್ ಗಫಾರ್, ದಿವಾಕರ್ ಎಂ.ವಿ. ಇವರುಗಳು ವೇದಿಕೆಯಲ್ಲಿದ್ದರು.

ಶ್ರೀಕಾಂತ್ ಪ್ರಾರ್ಥಿಸಿದರು. ಹರೀಶ್ ಸ್ವಾಗತಿಸಿದರು. ಶಶಿಧರ್ ಗುಪ್ತ ನಿರೂಪಿಸಿದರು. ಸಿವಿಲ್ ಇಂಜಿನಿಯರ್ ಗಳಾದ ಎಂ.ಕೆ.ರವೀಂದ್ರ, ಪಿ.ಎಲ್.ಸುರೇಶ್‍ರಾಜು, ಆರ್ಕಿಟೆಕ್ಟ್ ಸುಜಾತ ಸೇರಿದಂತೆ ಅನೇಕ ಇಂಜಿನಿಯರ್‌ಗಳು ಸಮಾರಂಭದಲ್ಲಿ ಉಪಸ್ಥಿತರಿದ್ದರು.

 

Facebook
Twitter
Telegram
WhatsApp
suddionenews

suddionenews

Leave a Comment

Top Stories

43 ವಯಸ್ಸು ಅಂತ ಚಿಂತೆ ಬೇಡ.. PDO ಹುದ್ದೆಗೆ ನೀವೂ ಅರ್ಜಿ ಹಾಕಬಹುದು..!

ಬೆಂಗಳೂರು: ಎಷ್ಟೋ ಯುವಕ-ಯುವತಿಯರು ಸರ್ಕಾರಿ ಕೆಲಸಕ್ಕಾಗಿ ತಮ್ಮಿಡಿ ಜೀವನವನ್ನ ಮುಡಿಪಾಗಿಟ್ಟು ಓದುತ್ತಾ ಇರುತ್ತಾರೆ. ಆದರೆ ಎಲ್ಲರಿಗೂ ಸರ್ಕಾರಿ ಕೆಲಸಕ್ಕೆ ಹೋಗುವ ಅದೃಷ್ಟವೂ ಇರುವುದಿಲ್ಲ, ಕೆಲಸವೂ ಸಿಗುವುದಿಲ್ಲ. ವಯಸ್ಸು ಮೀರುತ್ತೆ. ಆದ್ರೀಗ ಅರ್ಜಿ ಆಹ್ವಾನಿಸಿರುವ ಪಿಡಿಓ

Tirumala Laddu : ತಿರುಪತಿ ಲಡ್ಡುವಿನಲ್ಲಿ ಪ್ರಾಣಿಗಳ ಕೊಬ್ಬು : ಬಿಡುಗಡೆಯಾದ ಲ್ಯಾಬ್ ವರದಿಯಲ್ಲೇನಿದೆ ?

ಸುದ್ದಿಒನ್, ತಿರುಮಲ, ಸೆಪ್ಟೆಂಬರ್. 19 : ಆಂಧ್ರಪ್ರದೇಶದಲ್ಲಿ ತಿರುಮಲ ತಿರುಪತಿ ಲಡ್ಡು ವಿಚಾರ ಬಾರೀ ಸದ್ದು ಮಾಡುತ್ತಿದೆ. ವೈಸಿಪಿ ಆಡಳಿತದಲ್ಲಿ ಲಡ್ಡೂಗಳಿಗೆ ಪ್ರಾಣಿಗಳ ಕೊಬ್ಬನ್ನು ಬಳಸಲಾಗುತ್ತಿತ್ತು ಎಂಬ ಸಿಎಂ ಚಂದ್ರಬಾಬು ಹೇಳಿಕೆ ಸಂಚಲನ ಮೂಡಿಸಿತ್ತು.

ಸೆಪ್ಟೆಂಬರ್ 21 ರಂದು ದಾವಣಗೆರೆಯಲ್ಲಿ ಉದ್ಯೋಗ ಮೇಳ

ದಾವಣಗೆರೆ,ಸೆಪ್ಟೆಂಬರ್.19 : ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಇವರ ವತಿಯಿಂದ ಸೆ.21 ರಂದು ಬೆಳಗ್ಗೆ 10 ಗಂಟೆಗೆ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಕೊಠಡಿ ಸಂಖ್ಯೆ-51,  ಜಿಲ್ಲಾಧಿಕಾರಿಗಳ ಕಚೇರಿ, ದಾವಣಗೆರೆ ಇಲ್ಲಿ ಉದ್ಯೋಗಮೇಳ ಆಯೋಜಿಸಲಾಗಿದೆ.

error: Content is protected !!