ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817
ಚಿತ್ರದುರ್ಗ,(ಜೂ.18) : ಬೆಂಗಳೂರಿನಲ್ಲಿ ಆಗಸ್ಟ್ 27ರಂದು ನಮ್ಮ ಪಟ್ಟಾಧಿಕಾರದ 25 ನೇ ವರ್ಷದ ಕಾರ್ಯಕ್ರಮ ಹಾಗೂ ಚಿತ್ರದುರ್ಗದಲ್ಲಿ ಜುಲೈ.18 ರಂದು ಸರಳವಾಗಿ ಪ್ರತಿಭಾ ಪುರಸ್ಕಾರ ಮತ್ತು ವಧು-ವರರ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ಭೋವಿ ಗುರು ಪೀಠದ ಶ್ರೀ ಇಮ್ಮಡಿ ಸಿದ್ದರಾಮಶ್ವರ ಸ್ವಾಮೀಜಿ ತಿಳಿಸಿದರು.
ನಿರಂಜನ ಜಗದ್ಗುರು ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿಯವರ ಸಮಾಜ ಸೇವಾ ದೀಕ್ಷೇಯ 25 ನೇ ದೀಕ್ಷಾ ರಜತ ಮಹೋತ್ಸವ ಪ್ರಯುಕ್ತ ನಗರದ ಹೂರ ವಲಯದ ಭೋವಿ ಗುರುಪೀಠದಲ್ಲಿ ಜು.18 ರ ಭಾನುವಾರ ಹಮ್ಮಿಕೊಂಡಿದ್ದ ರಾಷ್ಟ್ರ ಮಟ್ಟದ ಭೋವಿ ಜನೋತ್ಸವ ಕಾರ್ಯಕ್ರಮದ ಪೂರ್ವಭಾವಿ ಸಭೆಯ ಸಾನಿದ್ಯವಹಿಸಿ ಶ್ರೀಗಳು ಮಾತನಾಡಿದರು.
ನಾವು ಪಟ್ಟಾಧಿಕಾರಿಯಾಗಿ ಜು.18ರಂದು 24 ವರ್ಷ ಪೂರ್ಣವಾಗಿ 25ನೇ ವರ್ಷಕ್ಕೆ ಕಾಲಿಡುತ್ತೇವೆ. ಅದೇ ಈ ಸಮಾರಂಭ ನಡೆಯಬೇಕಿತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ರವರು ಸಹಾ ದಿನಾಂಕವನ್ನು ನೀಡಿದ್ದರು. ಆದರೆ ಜು.3 ರಿಂದ ವಿಧಾನಸಭಾ ಅಧಿವೇಶನ ನಡೆಯಲಿದ್ದು ಅದು ಜು. 22 ರವರೆಗೆ ನಡೆಯುವ ಸಂಭವವಿದೆ ಈ ಹಿನ್ನಲೆಯಲ್ಲಿ ಸಿ.ಎಂ.ರವರು ಅಧಿವೇಶನದಲ್ಲಿ ಇರಬೇಕಿದೆ. ಇದರಿಂದ ಅಂದಿನ ದಿನಾಂಕ ಸಿಗುವುದು ಕಷ್ಟವಾಗಿದೆ. ಈ ಹಿನ್ನಲೆಯಲ್ಲಿ ಆ. 27 ರ ಕೊನೆಯ ಭಾನುವಾರದಂದು ಬೆಂಗಳೂರಿನಲ್ಲಿ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗುವುದು ಈ ಸಮಯದಲ್ಲಿ ಎಲ್ಲಾ ಪಕ್ಷದವರು ಸಹಾ ನಮ್ಮ ಕಾರ್ಯಕ್ರಮಕ್ಕೆ ಬರುತ್ತಾರೆ. ಈ ಸಮಯದಲ್ಲಿ ನಮ್ಮ ಬೇಡಿಕೆಯನ್ನು ಸಹಾ ಇಡಲಾಗುವುದು ಎಂದು ಶ್ರೀಗಳು ತಿಳಿಸಿದರು.
ನಮ್ಮ ಸಮಾಜದಲ್ಲಿ ಬದ್ದತೆಯ ಕೊರೆತ ಇದ್ದು, ಈಗ ಪ್ರಭುದ್ದ ಸಮಾಜವಾಗಿದೆ. ಚರ್ಚೆಗೆ ಮುಂದೆ ಬರುತ್ತಿದೆ. ಸಮಾಜಬ ಸಮರ್ಥತೆಯನ್ನು ಪ್ರದರ್ಶಿಸುತ್ತಿದೆ. ಸಮಾಜದ ಸಮಾವೇಶದಲ್ಲಿ ಸಮಾಜವನ್ನು ಸಮರ್ಥತೆ ಕಡೆಗೆ ಕೊಂಡ್ಯೂಯುವ ಅರ್ಥ ಬರುತ್ತಿದೆ. ಮಠಗಳು ನಿರ್ಧಿಷ್ಟವಾದ ವಿಷಯದ ಬಗ್ಗೆ ಸಭೆ ಸಮಾರಂಭಗಳನ್ನು ಮಾಡಿದಾಗ ಜನರಿಗೆ ಸಂದೇಶವನ್ನು ನೀಡಿದಂತೆ ಆಗುತ್ತದೆ. ಮಠದಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಪುರಸ್ಕಾರವನ್ನು ಮಾಡಲಾಗುತ್ತಿದೆ ಇದೇ ರೀತಿ ಉನ್ನತ ವ್ಯಾಸಂಗವನ್ನು ಪಡೆಯುತ್ತಿರುವವರಿಗೂ ಸಹಾ ಪ್ರೋತ್ಸಾಹವನ್ನು ನೀಡಲಾಗುತ್ತಿದೆ. ಸಮಾಜ ಮುಖಿಯಾಗಿ ಭೋವಿ ಗುರುಪೀಠ ಕೆಲಸವನ್ನು ಮಾಡಲಾಗುತ್ತಿದೆ ಎಂದರು.
ಸಮುದಾಯವನ್ನು ಜೊತೆಯಲ್ಲಿಟ್ಟುಕೊಂಡು ಮಾಡುವ ಉತ್ಸವವೇ ಭೋವಿ ಉತ್ಸವವಾಗಿದೆ. ನಮ್ಮ ಪಟ್ಟಾಧಿಕಾರದ ವರ್ಷದ ಅಂಗವಾಗಿ ವರ್ಷ ಪೂರ್ತಿಯಾಗಿ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಇದಕ್ಕೆ ಅದೇ ಚಾಲನೆ ಸಿಗಲಿದೆ. ಇದರೊಂದಿಗೆ ಉದ್ಯೋಗ ಮೇಳ, ನಮ್ಮ ಯುವ ಜನಾಂಗಕ್ಕೆ ನಮ್ಮ ಸಮಾಜದ ಬಗ್ಗೆ ತಿಳಿಸುವ ಕಾರ್ಯಗಾರಗಳು, ಪ್ರತಿ ಜಿಲ್ಲೆಯಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಇತ್ತೀಚಿನ ದಿನದಲ್ಲಿ ಸಂಘಟನೆಯಲ್ಲಿ ಕೊರತೆಯನ್ನು ಕಾಣುತ್ತಿದೆ. ಸರ್ಕಾರದ ಮಟ್ಟದಲ್ಲಿ ಇರುವ ವಿವಿಧ ರೀತಿಯ ಹುದ್ದೆ, ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನಗಳಿಗೆ ನಮ್ಮ ಜನಾಂಗದವರನ್ನು ನೇಮಿಸುವಂತೆ ಸರ್ಕಾರವನ್ನು ಒತ್ತಾಯಿಸಲಾಗುವುದೆಂದು ಶ್ರೀಗಳು ತಿಳಿಸಿದರು.
ಜು.18 ರಂದು ಭೋವಿ ಗುರುಪೀಠದಲ್ಲಿ ಸರಳವಾಗಿ ಪ್ರತಿಭಾ ಪುರಸ್ಕಾರ ಮತ್ತು ಜನಾಂಗದ ವಧು-ವರರ ಸಮಾವೇಶವನ್ನು ನಡೆಸಲಾಗುವುದು. ಈ ಭಾರಿ ಸುಮಾರು ಪ್ರತಿಭಾ ಪುಸ್ಕಾರಕ್ಕೆ 250 ರಿಂದ 300 ಅರ್ಜಿಗಳು ಬರುವ ನಿರೀಕ್ಷೆ ಇದೆ. ಪ್ರತಿಯೊಬ್ಬರಿಗೂ ಸಹಾ ತಲಾ 5000 ರೂಗಳನ್ನು ನೀಡಬೇಕೆಂದು ತೀರ್ಮಾನ ಮಾಡಲಾಗಿದೆ. ಆ. 27ರಂದು ಬೆಂಗಳೂರಿನಲ್ಲಿ ನಡೆಯುವ ಸಮಾರಂಭದಲ್ಲಿ ನೂತನ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಸಚಿವರಿಗೆ ಶಾಸಕರಿಗೆ ಅಭಿನಂದನೆ ಮಾಡಲಾಗುವುದು ಎಂದರು.
ರಾಜ್ಯದಲ್ಲಿ ಐದು ಕಡೆಗಳಲ್ಲಿ ಲೋಕಸಭಾ ಕ್ಷೇತ್ರದಲ್ಲಿ ನಮ್ಮ ಜನಾಂಗದವರು ಸ್ಪರ್ದೆ ಮಾಡಲು ಅವಕಾಶ ಇದೆ. ಇದರಲ್ಲಿ ನಮ್ಮ ಸಮಾವೇಶದಲ್ಲಿ ಎರಡು ಪಕ್ಷದವರಿಗೂ ಸಹಾ ನಮ್ಮ ಜನಾಂಗದವರಿಗೆ ಟೀಕೇಟು ನೀಡುವಂತೆ ಮನವಿ ಮಾಡಲಾಗುವುದು ಇದರಲ್ಲಿ ಎರಡು ಕ್ಷೇತ್ರಗಳಲ್ಲಿ ಗೆಲುವನ್ನು ಸಾಧಿಸಬೇಕಿದೆ. ಇದರಿಂದ ರಾಷ್ಟ್ರ ಮಟ್ಟದಲ್ಲಿ ನಮ್ಮ ಪರವಾಗಿ ಮಾತನಾಡಲು ಇರಬೇಕಿದೆ. ಸಭೆ ಸಮಾರಂಭಗಳಿಗೆ ನಮ್ಮನ್ನು ಕರೆದಿಲ್ಲ ಎನ್ನದೆ ಸಮಾಜದ ಕೆಲಸ ನಮ್ಮ ಕೆಲಸ ಎಂದು ಭಾವಿಸುವುದರ ಮೂಲಕ ಎಲ್ಲಾ ಕಾರ್ಯಕ್ರಮಗಳಲ್ಲಿಯೂ ಸಹಾ ಭಾಗವಹಿಸಬೇಕಿದೆ ಎಂದು ಇಮ್ಮಡಿ ಸಿದ್ದರಾಮಶ್ವರ ಶ್ರೀಗಳು ಕರೆ ನೀಡಿದರು.
ಸಮಾಜದ ಮುಖಂಡರಾದ ರವಿ ಮಾಕಳಿ ಮಾತನಾಡಿ, ಶ್ರೀಗಳು ಸಮಾಜವನ್ನು ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಶ್ರೀಗಳ ಆದೇಶವನ್ನು ಪಾಲಿಸುವ ಭಕ್ತರು ಅವರ ಆಣತಿಯಂತೆ ನಡೆಯುತ್ತಾರೆ. ಆ. 27ರ ಕಾರ್ಯಕ್ರಮದಲ್ಲಿ ನಮ್ಮ ಸಮಾಜದ ಬಗ್ಗಟ್ಟನ್ನು ಪ್ರದರ್ಶನ ಮಾಡಬೇಕಿದೆ. ರಾಜಕಾರಣಿಗಳು ಮತಕ್ಕಾಗಿ ಹೋರಾಟವನ್ನು ಮಾಡಿದರೆ ಶ್ರೀಗಳು ನಮ್ಮ ಸಮಾಜದ ಸಂಘಟನೆಗಾಗಿ ಹೋರಾಟವನ್ನು ಮಾಡುತ್ತಿದ್ದಾರೆ ಎಂದರು.
ಶ್ರೀಮಠ ಕಾರ್ಯನಿರ್ವಹಣ ಅಧಿಕಾರಿ ಗೌನಹಳ್ಳಿ ಗೋವಿಂದಪ್ಪ ಮಾತನಾಡಿ ಶ್ರೀಮಠ ಇಲ್ಲಿಯವರೆಗೂ ಶ್ರೀಗಳ ಹುಟ್ಟು ಹಬ್ಬದಂದು ವಿವಿಧ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬಂದಿದೆ. ಈ ವರ್ಷ ಶ್ರೀಗಳ ಪಟ್ಟಾಧಿಕಾರದ 25 ನೇ ವರ್ಷವಾಗಿರುವುದರಿಂದ ವಿಶೇಷವಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ಚಿಂತನೆಯನ್ನು ನಡೆಸಿದೆ.
ಸಿದ್ದರಾಮರ 25 ವಚನಗಳನ್ನು ಜಾನಪದ ಶೈಲಿಯಲ್ಲಿ ನಿರ್ಮಾಣ ಮಾಡಿ ಹಾಡುವುದು, ಜನ ಜಾಗೃತಿಗಾಗಿ ಸಿದ್ದರಾಮರ ವಚನಗಳನ್ನು ಬಳಕೆ ಮಾಡುವುದು, ಜನಾಂಗದ ಪರಂಪರೆ, ವೃತ್ತಿ, ಸೇರಿದಂತೆ ಅಂಬೇಡ್ಕರ್ ಮತ್ತು ಒಡೆಯರ್ ರವರು ಕೂಡುಗೆಯನ್ನು ಸ್ಮರಣೆ ಮಾಡುವ 25 ಕೃತಿಗಳನ್ನು ಹೂರ ತರುವ ಕಾರ್ಯ ಮತ್ತು ಸಿದ್ದರಾಮಶ್ವರ ಹೆಸರಿನಲ್ಲಿ ಪ್ರಶಸ್ತಿಯನ್ನು ಜಾತ್ಯಾತೀತವಾಗಿ ನೀಡುವ ಬಗ್ಗೆ ಚಿಂತನೆ ನಡೆದಿದೆ ಎಂದರು.
ಕಾರ್ಯಕ್ರಮದಲ್ಲಿ ರಾಜ್ಯ, ಜಿಲ್ಲಾ , ತಾಲ್ಲೂಕು ಮಟ್ಟದ ಜನಾಂಗದ ವಿವಿಧ ಮುಖಂಡರುಗಳು ಭಾಗವಹಿಸಿದ್ದರು.