ಬೆಂಗಳೂರು: ರಾಜ್ಯದಲ್ಲಿ 83% ಜನರಿಗೆ ಕೋವಿಡ್ ಮೊದಲನೇ ಲಸಿಕೆ ಕೊಡಲಾಗಿದೆ. 2.05 ಕೋಟಿ ಜನರಿಗೆ ಎರಡನೇ ಡೋಸ್ ಲಸಿಕೆ ನೀಡಲಾಗಿದೆ. 100 ಕೋಟಿ ಕೋವಿಡ್ ಲಸಿಕೆ ಮಹತ್ವದ ಸಾಧನೆ ಎಂದು ಸಚಿವ ಅಶ್ವಥ್ ನಾರಾಯಣ್ ಹೇಳಿದರು. ಈ ವೇಳೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಈ ಸಾಧನೆ ಸಾಧ್ಯವಾಗಿದೆ ಎಂದರು.
ಜನಜೀವನ ಎಂದಿನಂತೆ ನಡೆಯಲು ಆರೋಗ್ಯ
ಮತ್ತು ಸಚಿವಸಂಪುಟ ಶ್ರಮಿಸಿದೆ. ಆರ್ಥಿಕ ವಹಿವಾಟು ಕೋವಿಡ್ಪೂಂರ್ವ ಅವಧಿಗಿಂತ ಹೆಚ್ಚು ಉತ್ತಮವಾಗುವ ಹಂತ ತಲುಪಿದೆ. ಲಸಿಕೆಯಿಂದ ಆಶಾದಾಯಕ ಮತ್ತು ಭರವಸೆದಾಯಕ ಜೀವನ ಸಾಧ್ಯವಾಗಿದೆ ಎಂದು ವಿಶ್ಲೇಷಿಸಿದರು. ಲಸಿಕೆ ಮೂರನೇ ಡೋಸ್ ಕೊಡುವ ಪ್ರಸ್ತಾಪ ಸದ್ಯಕ್ಕಿಲ್ಲ ಎಂದರು.
ಕೋವಿಡ್ ನಿಯಂತ್ರಣ ಮತ್ತು ಜನರ ಜೀವನ ರಕ್ಷಣೆ ವಿಚಾರದಲ್ಲಿ ಲಸಿಕೆ ಮಹತ್ವದ ಪಾತ್ರ ವಹಿಸಿದೆ. ವೈದ್ಯರು, ವೈದ್ಯಕೀಯ ಸಿಬ್ಬಂದಿಯ ಶ್ರಮ ಹಾಗೂ ದೇಶದ ನಾಗರಿಕರ ಸಹಕಾರದಿಂದ 100 ಕೋಟಿ ಲಸಿಕೆ ಡೋಸ್ ಕೊಡಲು ಸಾಧ್ಯವಾಗಿದೆ. ಕೆಲವು ಮುಂದುವರಿದ ದೇಶಗಳಲ್ಲಿ ಶೇ 20ರಷ್ಟು ಲಸಿಕೆ ನೀಡುವ ಸಾಧನೆಯೂ ಆಗಿಲ್ಲ ಎಂದು ವಿಶ್ಲೇಷಿಸಿದರು.
ಜನರು ನರೇಂದ್ರ ಮೋದಿಯವರ ನಾಯಕತ್ವ ಮತ್ತು ಜನಪರ ಕಾರ್ಯಕ್ರಮಗಳ ಬಗ್ಗೆ ನಂಬಿಕೆ, ವಿಶ್ವಾಸ ಮತ್ತು ಭರವಸೆ ಹೊಂದಿರುವುದರ ಸಂಕೇತ ಇದಾಗಿದೆ. ಆತ್ಮ ನಿರ್ಭರ್ ಭಾರತ್ ಪರಿಕಲ್ಪನೆಯಡಿ ನಮ್ಮದೇ ಲಸಿಕೆಯನ್ನು ನಮ್ಮ ಜನರಿಗೆ ನೀಡಲಾಗಿದೆ.