ಬೆಂಗಳೂರು: ರಾಜಗಯ ರಾಜಕೀಯದಲ್ಲಿ ಸ್ಟ್ರಾಂಗ್ ವುಮೆನ್ ಆಗಿ ಬೆಳೆದು. ಸಚುವೆಯಾಗಿ ಗುರುತಿಸಿಕೊಂಡು ಈಗ ಕೇಂದ್ರ ಅಚಿವೆಯಾಗಿರುವ ಶೋಭ ಕರಂದ್ಲಾಜೆ ಒಂದು ರೀತಿಯ ಸಾಧಕಿಯೇ ಸರಿ. ಶೋಭಾ ಕರಂದ್ಲಾಜೆ ಎಂದ ಕೂಡಲೇ ಅವರ ಮದುವೆ ವಿಚಾರವೂ ತಲೆಗೆ ಥಟ್ ಅಂತ ಬರುತ್ತೆ. ಇದೀಗ ಮೊದಲ ಬಾರಿಗೆ ಶೋಭಾ ಕರಂದ್ಲಾಜೆ ಮದುವೆ ಬಗ್ಗೆ ಮಾತನಾಡಿದ್ದಾರೆ.
ಚಾನೆಲ್ ಒಂದರ ಮಹಿಳಾ ಕಾರ್ಯಕ್ರಮದ ಬಗ್ಗೆ ಮಾತನಾಡಿದ ಶೋಭಾ ಕರಂದ್ಲಾಜೆ, “ನಾನು ಮನೆಯ ಮೊದಲ ಹೆಣ್ಣು ಮಗಳು. ಮದುವೆಯಾಗುವ ವಯಸ್ಸು ಬಂದಾಗ ನನಗೂ ಒತ್ತಡವಿತ್ತು. ಮನೆಯವರಿಂದ, ಕುಟುಂಬಸ್ಥರಿಂದ ಹಾಗೂ ಊರಿನವರಿಂದಾನೂ ಒತ್ತಡವಿತ್ತು. ಆದರೆ ನಾನು ಮದುವೆಯಾಗದ ನಿರ್ಧಾರ ಮಾಡಿದೆ. ಇದಕ್ಕೆ ಹಲವು ಕಾರಣವಿದೆ. ಪುರಿಷರು ಮಹಿಳೆಯರನ್ನು ನಡೆಸಿಕೊಳ್ಳುವ ರೀತಿಯೂ ಇರಬಹುದು ಎಂದಿದ್ದಾರೆ.
ಇದೆಲ್ಲಾ ಸುಮಾರು 40-50 ವರ್ಷದ ಹಿಂದಿನ ಮಾತಾಗಿದೆ. ಆಗ ಹೆಣ್ಣು ಮಕ್ಕಳು ಓದಿ ಏನು ಮಾಡುತ್ತಾರೆ ಎಂಬ ಪ್ರಶ್ನೆಗಳು ಎತ್ತುತ್ತಿದ್ದರು. ಹೀಗೆ ಹಲವು ವರ್ತನೆಗಳು ನನಗೆ ಜಿಗುಪ್ಸೆ ಹುಟ್ಟಿಸಿತು. ನಿಜವಾಗಿಯೂ ಇಂತಹ ಪುರುಷರ ಜೊತೆಗೆ ಬದುಕು ಸಾಧ್ಯವೇ ಎನ್ನುವ ಪ್ರಶ್ನೆ ಹುಟ್ಟು ಹಾಕಿತ್ತು. ಅದಕ್ಕೆ ನಾನು ಮದುವೆಯಾಗಬಾರದು ಎಂದು ನಿರ್ಧಾರ ಮಾಡಿದ್ದೆ ಎಂದಿದ್ದಾರೆ.