ಶಿವಮೊಗ್ಗ: ವೈದ್ಯೋ ನಾರಾಯಣೇ ಹರಿ ಅನ್ನೋ ಮಾತು ಸುಳ್ಳಲ್ಲ. ಸಂಕಷ್ಟದ ಕಾಲಕ್ಕೆ ವೈದ್ಯರೆ ದೇವರಾಗುತ್ತಾರೆ ಎಂಬುದನ್ನು ಇದೀಗ ಶಿವಮೊಗ್ಗ ಆಸ್ಪತ್ರೆಯ ವೈದ್ಯರು ನಿರೂಪಿಸಿದ್ದಾರೆ. ಇನ್ನು ಕೈ ಉಳಿಯುವುದು ಸಾಧ್ಯವೇ ಇಲ್ಲ ಎಂಬ ಪರಿಸ್ಥಿತಿಯಲ್ಲೂ ಕೈ ಜೋಡಿಸಿ, ಯಶಸ್ವಿ ಶಸ್ತ್ರ ಚಿಕಿತ್ಸೆ ಮಾಡಿದ್ದಾರೆ. ಸತತ ಏಳು ಗಂಟೆಗಳ ಕಾಲ ನಡೆದ ಆಪರೇಷನ್ ಸಕ್ಸಸ್ ಆಗಿದೆ.
ಶಿಕಾರಿಪುರ ತಾಲೂಕಿನ ಸಾಮಿಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿ, ಮುಂಗೈ ಕತ್ತರಿಸಿಕಿಂಡು ಬಿಟ್ಟಿದ್ದ. ಸಂಪೂರ್ಣವಾಗಿಯೇ ಮುಂಗೈ ಕಟ್ ಆಗಿತ್ತು. ಆ ಮುಂಗೈನ್ನು ಕಾರ್ಮಿಕ ಐಸ್ ಬಾಕ್ಸ್ ನಲ್ಲಿಟ್ಟುಕಿಂಡು ಆಸ್ಪತ್ರೆಗೆ ಬಂದಿದ್ದ. ಶಿವಮೊಗ್ಗದ ಸರ್ಜಿ ಸೂಪರ್ ಸ್ಪೆಷಾಲಿಟಿಗೆ ಓಡಿ ಬಂದಿದ್ದ. ಅಲ್ಲಿನ ವೈದ್ಯರು ತಕ್ಷಣ ಕಾರ್ಯಪ್ರವೃತ್ತರಾಗಿದ್ದು, ತುಂಡಾಗಿದ್ದ ಕೈಯನ್ನು ಜೋಡಿಸುವ ಕೆಲಸ ಮಾಡಿದ್ದಾರೆ. ಮುಂಗೈ ಮಾಂಸ ಖಂಡ, ಮೂಳೆ ಹಾಗೂ ನರಗಳನ್ನು ಯಶಸ್ವಿಯಾಗಿ ಜೋಡಿಸಿದ್ದಾರೆ.
ವ್ಯಾಸ್ಕ್ಯುಲರ್ ಸರ್ಜನ್ ಡಾ.ಚೇತನ್ ಹಾಗೂ ಮೂಳೆ ರೋಗ ತಜ್ಞ ಡಾ.ಮಂಜುನಾಥ್ ನೇತೃತ್ವದ ತಜ್ಞರ ತಂಡ ಈ ಆಪರೇಷನ್ ಮಾಡುವಲ್ಲಿ ಯಶಸ್ವಿಯಾಗಿದೆ. ಇನ್ನು ಸರ್ಜಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯರು ಸತತ ಏಳು ಗಂಟೆ್ಳ ಕಾಲ ಶಸ್ತ್ರ ಚಿಕಿತ್ಸೆ ಮಾಡಿದ್ದಾರೆ. ಈ ಮೂಲಕ ಸಂಪೂರ್ಣವಾಗಿ ಕತ್ತರಿಸಿಕೊಂಡು ಹೋಗಿದ್ದ ಕೈಯನ್ನು ಈಗ ಜೋಡಿಸಿದ್ದಾರೆ. ಸದ್ಯ ಇನ್ನು ಆ ವ್ಯಜ್ತಿ ಆಸ್ಒತ್ರೆಯಲ್ಲಿಯೇ ಇದ್ದಾನೆ. ಆದರೆ ಆತನಿಗೆ ವೈದ್ಯರು ಹೊಸ ಬದುಕನ್ನು ಕೊಟ್ಟಿದ್ದಾರೆ. ಮುಂಗೈ ಕತ್ತರಿಸಿಕೊಂಡ ಬಳಿಕ ಕಾರ್ಮಿಕ ಕೂಡ ಆತಂಕಗೊಳ್ಳದೆ ಐಸ್ ಬಾಕ್ಸ್ ಒಳಗೆ ಉಟ್ಟುಕೊಂಡು, ಆಸ್ಪತ್ರೆಗೆ ಬಂದಿದ್ದು, ಆತನ ಕೈ ಮರಳಿ ಪಡೆಯಲು ಅನುಕೂಲವಾಗಿದೆ.