Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

SDA ನೌಕರ ಆತ್ಮಹತ್ಯೆ : PA ಹೆಸರು ಕೇಳಿ ಬಂದಿದ್ದಕ್ಕೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಏನಂದ್ರು..?

Facebook
Twitter
Telegram
WhatsApp

ಬೆಳಗಾವಿ: ರುದ್ರಣ್ಣ ಆತ್ಮಹತ್ಯೆ ಕೇಸಲ್ಲಿ ಸಚಿವೆ ಲಕ್ಷ್ಮೀ ಹೆಬ್ವಾಳ್ಕರ್ ಪಿಎ ಹೆಸರು ಕೇಳಿ ಬಂದಿದ್ದು, ಎಫ್ಐಆರ್ ಕೂಡ ದಾಖಲಾಗಿದೆ. ಈ ಘಟನೆ ಸಂಬಂಧ ಲಕ್ಷ್ಮೀ ಹೆಬ್ಬಾಳ್ಕರ್ ಪ್ರತಿಕ್ರಿಯೆ ನೀಡಿದ್ದಾರೆ. ಇಂಥ ಘಟನೆಗಳು ನಡೆಯಬಾರದು. ನಿನ್ನೆ ಮಾಧ್ಯಮದಲ್ಲಿ ನೋಡಿದಾಗಲೇ ಈ ವಿಚಾರ ಗೊತ್ತಾಗಿದ್ದು. ಸ್ವಲ್ಪ ಬ್ಯುಸಿ ಇದ್ದ ಕಾರಣ. ತನಿಖೆ ನಡೀತಾ ಇದೆ.

ಅದರ ಬಗ್ಗೆ ನನಗೆ ಏನು ಗೊತ್ತಿಲ್ಲ. ಮಾಧ್ಯಮದ ಸಹೋದರರಿಗೆ ರುದ್ರಣ್ಣ ಎಂಬುವವರು ಫೋನ್ ಮಾಡಿ, ಇದರ ಬಗ್ಗೆ ಮೇಡಂರಿಗೆ ಗಮನಕ್ಕಿಲ್ಲ ಎಂದು ಅವರೇ ಮಾತಾಡಿರುವುದನ್ನು ಮೀಡಿಯಾದವರು ಪ್ರಸಾರ ಮಾಡಿರೋದನ್ನ ನೋಡಿದ್ದೀನಿ. ನಾನ್ಯಾವತ್ತು ಅವರನ್ನು ಭೇಟಿಯಾಗಿಲ್ಲ. ಯಾವುದೇ ಒಂದು ಕೆಲಸಕ್ಕೂ ಕೂಡ ಅವರನ್ನ ಸಂಪರ್ಕ ಮಾಡಿಲ್ಲ. ವೈಯಕ್ತಿಕವಾಗಿಯೂ ಅವರನ್ನು ಭೇಟಿಯಾಗಿಲ್ಲ. ಈಗ ಏನಾಗಿದೆ ಅನ್ನೋದು ಪ್ರಾಥಮಿಕವಾಗಿ ತನಿಖೆ ನಡೀತಾ ಇದೆ.

ಮಂತ್ರಿಗಳು ಅಂದ್ಮೇಲೆ 10-15 ಪಿಎಗಳು ಇರ್ತಾರೆ. ಪ್ರತಿಯೊಬ್ಬರು ಕೂಡ ನಾವು ಹೇಳಿರುವಂತ ಕ್ಷೇತ್ರದ ಕೆಲಸಗಳನ್ನು ಆಗಬೇಕು ಎಂಬ ವಿಚಾರಕ್ಕೆ ಪಿಎ ಗಳನ್ನ ನೇಮಿಸಿರುತ್ತೇವೆ. ಸದ್ಯಕ್ಕೆ ಏನನ್ನು ಹೇಳುವುದಕ್ಕೆ ಬಯಸುವುದಿಲ್ಲ. ಇದು ತನಿಖೆಯ ಹಂತದಲ್ಲಿದೆ. ನಾನೊಬ್ಬ ಮಂತ್ರಿಯಾಗಿ, ಅದರಲ್ಲೂ ಒಂದು ಜವಾವ್ದಾರಿಯುತ ಸ್ಥಾನದಲ್ಲಿರುವ ಮಹಿಳೆಯಾಗಿ ಆ ಕುಟುಂಬಕ್ಕೆ ಧೈರ್ಯ ತುಂಬುವ ಕೆಲಸ ಮಾಡುತ್ತೇನೆ, ಸಾಂತ್ವಾನ ಹೇಳುತ್ತೇನೆ. ಮತ್ತೆ ನಿಷ್ಪಕ್ಷಪಾತವಾಗಿ ಈ ತನಿಖೆ ನಡೆಯಲಿ ಎಂದೇ ಬಯಸುತ್ತೇನೆ. ನಿರಂತರವಾಗಿ ನಾನು ಪೊಲೀಸ್ ಹಾಗೂ ಜಿಲ್ಲಾಧಿಕಾರಿಗಳ ಸಂಪರ್ಕದಲ್ಲಿದ್ದೇನೆ. ಊಹಾ ಪೋಹಗಳು ಶುರುವಾದರೆ ಹೆಚ್ಚಾಗುತ್ತಲೆ ಇರುತ್ತದೆ. ಹೀಗಾಗಿ ಕೂಲಂಕುಷವಾಗಿ ತನಿಖೆ ನಡೆಸಿ, ಬೇಗ ಸತ್ಉಅಸತಚಯತೆ ಹೊರಗೆ ಬರಬೇಕು. ಹಾಗೂ ಆ ಕುಟುಂಬಕ್ಕೆ ನ್ಯಾಯ ಸಿಗಬೇಕು ಎಂಬುದೇ ನಮ್ಮ ಆಸೆ ಕೂಡ ಎಂದಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ದರ್ಶ‌ನ್ ಹೆಲ್ತ್ ಕಂಡೀಷನ್ ಈಗ ಹೇಗಿದೆ..?

ಬೆಂಗಳೂರು: ಆರೋಗ್ಯ ಸಮಸ್ಯೆಯ ಕಾರಣದಿಂದಾನೇ ನಟ ದರ್ಶನ್ ಜಾಮೀನು ಪಡೆದು ಹೊರಗೆ ಬಂದಿದ್ದಾರೆ. ಅದು ಕೇವಲ ಆರು ವಾರಗಳ ಕಾಲ ಮಾತ್ರ. ಹೀಗಾಗಿ ದರ್ಶನ್ ತಮ್ಮ ಹೆಲ್ತ್ ಕಂಡೀಷನ್ ಬಗ್ಗೆ ಆಗಾಗ ಹೈಕೋರ್ಟ್ ಗೆ

ಸಾಲು ಸಾಲು ವಿವಾದಗಳ ನಡುವೆಯೂ ಅಧ್ಯಕ್ಷೀಯ ಪಟ್ಟ ಗೆದ್ದ ಟ್ರಂಪ್ : ಕಮಲ ಹ್ಯಾರೀಸ್ ಹೀನಾಯ ಸೋಲು..!

ಅಮೆರಿಕಾ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶ ಘಟ್ಟ ಅಂತಿಮ ತಲುಪಿದೆ. ಡೊನಾಲ್ಡ್ ಟ್ರಂಪ್ ಗೆಲುವು ನಿಶ್ಚಿತವಾಗಿದೆ. ಘೋಷಣೆಯೊಂದೆ ಬಾಕಿ ಇದೆ. ಈಗಾಗಲೇ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿಜಯೋತ್ಸವದ ಭಾಷಣ ಮಾಡಿದ್ದಾರೆ. ಈ ವೇಳೆ ತಮ್ಮ

ಭದ್ರಾ ಮೇಲ್ದಂಡೆಗೆ ಯೋಜನೆ : ಕೇಂದ್ರದ ಅನುದಾನ ಖೋತಾ : ಜೆ.ಯಾದವರೆಡ್ಡಿ

ಸುದ್ದಿಒನ್, ಚಿತ್ರದುರ್ಗ, ನವಂಬರ್. 06 : ಮಧ್ಯ ಕರ್ನಾಟಕದ ಬಯಲು ಸೀಮೆ ಪ್ರದೇಶಗಳಿಗೆ ನೀರುಣಿಸುವ ಮಹತ್ವದ ಭದ್ರಾ ಮೇಲ್ದಂಡೆಗೆ ಯೋಜನೆಗೆ ಕೇಂದ್ರದ ಘೋಷಿತ 5300 ಕೋಟಿ ರು ಅನುದಾನದಲ್ಲಿ 1754 ಕೋಟಿ ರು ಖೋತ

error: Content is protected !!