ಸುದ್ದಿಒನ್, ಚಿತ್ರದುರ್ಗ, ಆಗಸ್ಟ್.18 : ತುಂಗಾ ಮೇಲ್ದಂಡೆ ನೀರಾವರಿ ಯೋಜನೆ ವ್ಯಾಪ್ತಿಗೆ ಒಳಪಡುವ ಸಾಸಿವೆಹಳ್ಳಿ ಏತ ನೀರಾವರಿ ಯೋಜನೆಯ ಮೂಲಕ 121 ಕೆರೆಗಳಿಗೆ ನೀರು ತುಂಬಿಸುವ ಮೊದಲ ಹಂತದ ಕಾರ್ಯಕ್ಕೆ ಪ್ರಾಯೋಗಿಕವಾಗಿ ಕರ್ನಾಟಕ ನೀರಾವರಿ ನಿಗಮ ನಿಯಮಿತ (KNNL) ಮುಖ್ಯ ಇಂಜಿನಿಯರ್ ಶಿವಾನಂದ ಬಣಕಾರ್ ಚಾಲನೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಇಂಜಿನಿಯರ್ ಗಳಾದ ಕೃಷ್ಣ ಪ್ರಸಾದ್, ವೆಂಕಟೇಶ್, ವಿನೋದ್ ರೆಡ್ಡಿ ಹಾಗೂ
ರೈತ ಮುಖಂಡರು ಅಡಿಕೆ ವರ್ತಕರಾದ ಬಿ.ಟಿ. ಪುಟ್ಟಣ್ಣ, ಸಾಸಲುಹಳ್ಳ ರುದ್ರಣ್ಣ, ಸಿರಿಗೆರೆ ನಾಗರಾಜ್, ಟಿ.ಎಸ್. ಮಹೇಶ್ವರಪ್ಪ, ರೈತ ಮುಖಂಡರುಗಳು ಇದ್ದರು.