ಕೋಲಾರ: ಹಿಜಬ್ ಮತ್ತು ಕೇಸರಿ ಶಾಲು ವಿವಾದ ಈಗ ಎಲ್ಲೆಡೆ ಜೋರಾಗಿ ಎದ್ದಿದೆ. ಇದರ ಬೆನ್ನಲ್ಲೇ ಶಾಲಾ ಕಾಲೇಜಿಗೆ ಮೂರು ದಿನ ರಜೆ ಘೋಷಣೆ ಮಾಡಲಾಗಿದೆ. ಈ ಬೆನ್ನಲ್ಲೇ ಸಚಿವ ಮುನಿರತ್ನ ಮಾತನಾಡಿದ್ದು, ಹಿಜಬ್ ಮತ್ತು ಕೇಸರಿ ಶಾಲು ವಿವಾದದ ಬಗ್ಗೆ ಮಾತನಾಡಿದ್ದು, ಇದು ಮಕ್ಕಳಲ್ಲಿ ವಿಷ ಬೀಜ ಬಿತ್ತನೆ ಮಾಡಲಾಗುತ್ತಿದೆ. ಇದು ದೇಶಕ್ಕೆ ಮಾರಕ ಎಂದಿದ್ದಾರೆ.
ರಾಜಕಾರಣ ಅನ್ನೋದು ಜನರ ಸೇವೆ ಮಾಡಲು ಇರಬೇಕು. ಆದ್ರೆ ಹಿಜಬ್ ವಿಚಾರದಲ್ಲಿ ಹಲವರು ರಾಜಕಾರಣ ಮಾಡ್ತಿದ್ದಾರೆ. ಇಂಥಹ ವಿಚಾರದಲ್ಲಿ ಯಾರೂ ರಾಜಕಾರಣ ಮಾಡಬಾರದು. ಈ ಬೆಳವಣಿಗೆ ದೇಶಕ್ಕೆ ಮಾರಕವಾಗಿದೆ.
ಮಕ್ಕಳಲ್ಲಿ ಬೇಧ-ಬಾವ ಮಾಡಬಾರದು. ಈ ಬಗ್ಗೆ ಬುದ್ದಿ ಜೀವಿಗಳು ಯೋಚನೆ ಮಾಡಬೇಕಾಗುತ್ತದೆ. ಮಕ್ಕಳ ಮನಸ್ಸಲ್ಲಿ ವಿಷ ಬೀಜ ಬಿತ್ತ ಬಾರದು. ಶಾಲಾ-ಕಾಲೇಜಿನಲ್ಲಿ ಮೊದಲು ಶಿಕ್ಷಣಕ್ಕೆ ಗಮನ ಕೊಡಬೇಕು. ಅದು ಬಿಟ್ಟು ಈ ರೀತಿ ಕೆಲಸಕ್ಕೆಲ್ಲಾ ಬೆಂಬಲ ಕೊಟ್ಟರೆ ವಿದ್ಯಾಭ್ಯಾಸ ಹಾಳಾಗುತ್ತೆ. ಎಲ್ಲರು ಸಮವಸ್ತ್ರ ಪಾಲನೆ ಮಾಡಬೇಕು. ಇದನ್ನು ಹೀಗೆ ಮುಂದುವರೆಸುವುದು ಒಳ್ಳೆಯ ಬೆಳವಣಿಗೆಯಲ್ಲ ಎಂದಿದ್ದಾರೆ.