ಉಕ್ರೇನ್ ಮೇಲೆ ನಡೆಸುತ್ತಿರುವ ರಷ್ಯಾ ಯುದ್ಧದಿಂದಾಗಿ ಈಗಾಗಲೇ ಸಾಕಷ್ಟು ಜನರ ಸಾವಾಗಿದೆ, ಉಕ್ರೇನ್ ರಾಜಧಾನಿ ಸೇರಿದಂತೆ ಹಲವು ಪ್ರದೇಶಗಳನ್ನ ರಷ್ಯಾ ಸೇನೆ ವಶಪಡಿಸಿಕೊಂಡಿದೆ. ಇದೀಗ ನಾವೂ ಮಾತುಕತೆಗೆ ಸಿದ್ಧರಿದ್ದೇವೆ ಎಂದು ರಷ್ಯಾ ಅಧ್ಯಕ್ಷ ಹೇಳಿಕೊಂಡಿದ್ದಾರೆ.
ಉಕ್ರೇನ್ ನ ಖಾರ್ಕಿವ್ ಸಿಟಿಯಲ್ಲಿ ಮತ್ತೆ ಬಾಂಬ್ ಬ್ಲಾಸ್ಟ್ ಶುರುವಾಗಿದೆ. ಬಾಂಬ್ ನಿಂದ ತಪ್ಪಿಸಿಕೊಳ್ಳಲು ಜನರಿಗೆ ಸೈರನ್ ಮೂಲಕ ಎಚ್ಚರಿಕೆ ನೀಡಲಾಗುತ್ತಿದೆ. ಸೈರನ್ ಕೇಳಿಸಿದ ತಕ್ಷಣ ಜನ ಅಂಡರ್ ಗ್ರೌಂಡ್ ಗೆ ಹೋಗಿ ಜೀವ ರಕ್ಷಿಸಿಕೊಳ್ಳುತ್ತಿದ್ದಾರೆ. 40 ನಿಮಿಷದಲ್ಲಿ ಮೂರು ಡಜ್ಹನ್ ಗೂ ಹೆಚ್ಚು ಕ್ಷಿಪಣಿಯನ್ನ ಹಾರಿಸಲಾಗಿದೆ.
ಈ ಮಧ್ಯೆ ರಷ್ಯಾ ಮಾತುಕತೆಗೆ ಸಿದ್ದವೆಂದು ರಷ್ಯಾ ವಿದೇಶಾಂಗ ಸಚಿವಾಲಯ ತಿಳಿಸಿದೆ. ಸಶಸ್ತ್ರೀಕರಣ ಕುರಿತು ಮಾತುಕತೆ ನಡೆಸಲು ಪುಟೀನ್ ಸಿದ್ದವಿದ್ದಾರೆಂದು ವಿದೇಶಾಂಗ ಸಚಿವಾಲಯ ಮಾಹಿತಿ ನೀಡಿದೆ.