ಬೆಂಗಳೂರು: ರಾಜ್ಯದಲ್ಲಿನ ಐಎಎಸ್ ಮತ್ತು ಐಪಿಎಸ್ ಮಹಿಳಾ ಅಧಿಕಾರಿಗಳ ನಡುವೆ ಗದ್ದಲ ನಿಲ್ಲುವಂತೆ ಕಾಣುತ್ತಿಲ್ಲ. ಸೋಷಿಯಲ್ ಮೀಡಿಯಾದಲ್ಲಿ ಶುರುವಾದ ವಾರ್ ಇದೀಗ ಸಿಎಂ ಕಚೇರಿ ಬಳಿಗೆ ಬಂದು ನಿಂತಿದೆ.
ಇಂದು ರೋಹಿಣಿ ಸಿಂಧೂರಿ ಕೂಡ ಸಿಎಂ ಭೇಟಿ ಮಾಡಿದ್ದು, ರೂಪಾ ಅವರ ಬಗ್ಗೆ ಮಾತನಾಡಿದ್ದಾರೆ. ಇದಾದ ಬಳಿಕ ಇಂದು ಡಿ ರೂಪಾ ಕೂಡ ವಿಧಾನಸೌಧಕ್ಕೆ ಭೇಟಿ ನೀಡಿದ್ದಾರೆ. ಸಿಎ ಬಳಿ ದೂರು ನೀಡಿದ್ದಾರೆ. ಬಳಿಕ ಮಾತನಾಡಿದ ಡಿ ರೂಪಾ, ನಾನು ಹೇಳಿದ ಬಗ್ಗೆ ರೋಹಿಣಿ ಯಾವುದೇ ಸ್ಪಷ್ಟನೆ ನೀಡಿಲ್ಲ ಎಂದಿದ್ದಾರೆ.
ನಾನು ಈ ಬಗ್ಗೆ ಮೀಡಿಯಾದಲ್ಲಿ ಮಾತನಾಡಬಾರದು ಎಂದುಕೊಂಡಿದ್ದೆ. ಆದ್ರೆ ಶ್ರೀಮತಿ ರೋಹಿಣಿ ಸಿಂಧೂರಿ ಅವರು ಮಾಧ್ಯಮದ ಮುಂದೆ ಮಾತನಾಡಿದ್ದಾರೆ. ನನ್ನ ಬಳಿ ಮೇಜರ್ ಒಂದು ಪಾಯಿಂಟ್ ಇದೆ. ಇಲ್ಲಿ ಯಾವುದೇ ಪರ್ಸನಲ್ ವಿಚಾರ ಇಲ್ಲ. ಈಗಾಗಲೇ ತನಿಖೆ ಇದೆ ಅವರ ಮೇಲೆ. ಈಗಾಗಲೇ ಅದು ಪ್ರೂವ್ ಆಗಿದೆ. ಯಾರು ಅವರನ್ನು ರಕ್ಷಿಸುತ್ತಾ ಇದ್ದಾರೆ ಅವರ ಮೇಲೆ ಕ್ರಮ ಕೈಗೊಳ್ಳಿ ಎಂದಿ ಸರ್ಕಾರಕ್ಕೆ ಮನವಿ ಮಾಡಿದ್ದೇನೆ.
ಮನೆ ಕಟ್ಟುತ್ತಾ ಇರುವುದಕ್ಕೆ ಅವರು ಪ್ರೂಫ್ ಕೊಡಬೇಕು. ಅದು ನನ್ನ ಮನೆ ಅಲ್ಲ ಅತ್ತೆ ಮನೆ ಅಂತಾರೆ. ಆದ್ರೆ ಅವರು ಅಲ್ಲಿಯೇ ಇರುವುದು. ಈಗಿರುವ ಇಲಾಖೆಯಲ್ಲೂ ಟೆಂಡರ್ ಇಲ್ಲದೆ ಹತ್ತು ಒಂದು ಕಂಪನಿಗೆ ಕೊಟ್ಟಿದ್ಸಾರೆ. ಅದನ್ನು ತನಿಖೆ ಮಾಡಿ ಅಂತ ಹೇಳುತ್ತಾ ಇದ್ದೇನೆ ಎಂದಿದ್ದಾರೆ.