ಬೆಂಗಳೂರು: ಇಂದು ಕೂಡ ಮಾಜಿ ಸಿಎಂ ಕುಮಾರಸ್ವಾಮಿ ಅವರು ಕಾಂಗ್ರೆಸ್ ಸರ್ಕಾರದ ವಿರುದ್ಧ ಕೆಂಡಾಮಂಡಲರಾಗಿದ್ದಾರೆ. ವರ್ಗಾವಣೆ ದಂಧೆ ಬಗ್ಗೆ ಆಕ್ರೋಶ ಹೊರ ಹಾಕಿದ್ದಾರೆ. ಎಚ್ ಡಿ ಕುಮಾರಸ್ವಾಮಿ ಅವಧಿಯಲ್ಲಿ ವರ್ಗಾವಣೆ ಬಗ್ಗೆ ಆರೋಪದ ಬಗ್ಗೆಯೂ ಪ್ರತಿಕ್ರಿಯೆ ನೀಡಿದ್ದಾರೆ.
ನಾನು ಸಿಎಂ ಆಗಿದ್ದಾಗ ನನ್ನ ಮಕ್ಕಳಿಂದ ಅಧಿಕಾರಕ್ಕೆ ಬಳಕೆ ಆಗಿದ್ದರೆ, ನನ್ನ ಮಕ್ಕಳು ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದರ ಬಗ್ಗೆ ದಾಖಲೆ ನೀಡಿ, ಸಾಬೀತು ಮಾಡಲಿ. ಸಾಬೀತಾದರೆ ರಾಜಕೀಯ ನಿವೃತ್ತಿ ಘೋಷಿಸುತ್ತೇನೆ ಎಂದು ವಿಧಾನಸಭೆಯಲ್ಲಿ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಸವಾಲು ಹಾಕಿದ್ದಾರೆ.
ಮೈಸೂರಿನಲ್ಲಿ ವರ್ಗಾವಣೆ ದಂಧೆ ನಡೆಯುತ್ತಿದೆ. ಮನೆಯಲ್ಲಿ ಸಿಎಂ ಪುತ್ರ ಮಲಗಿರುವ ಸಂದರ್ಭದಲ್ಲೇ ಇಷ್ಟೆಲ್ಲ ಆಗಿದೆ. ಇನ್ನು ಸಿಎಂ ಮಗ ಹೊರಗೆ ಬಂದರೆ ಏನಾಗಬಹುದು..? ನಾನು ಯಾವುದೇ ದ್ವೇಷದ ರಾಜಕಾರಣವನ್ನು ಮಾಡುತ್ತಿಲ್ಲ. ವಿರೋಧ ಪಕ್ಷದ ನಾಯಕನಾಗಿ ಕೆಲಸ ಮಾಡುತ್ತಿದ್ದೇನೆ. ಸಿದ್ದರಾಮಯ್ಯ ದಾಖಲೆ ಇಟ್ಟು ಮಾತನಾಡಿದ್ದನ್ನು ನಾನು ನೋಡಿಲ್ಲ. ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕನಾಗಿ ಕೆಲಸ ಮಾಡಿದ್ದಾರೆ. ವರ್ಗಾವಣೆ ದಂಧೆ ನಿಲ್ಲಿಸೋ ಶಕ್ತಿ ಸರ್ಕಾರಕ್ಕೆ ಇದ್ಯಾ..? ದಾಖಲಾತಿ ಕೊಡ್ತೀನಿ ಆರೋಪಿಗಳು ಅರೆಸ್ಟ್ ಆಗಬೇಕು. ವಸೂಲಿ ಅನ್ನೋದು ಸಿಎಂ ನೆರಳಿನಲ್ಲಿಯೇ ನಡೆಯುತ್ತಿದೆ ಎಂದು ಹೇಳಿದ್ದಾರೆ.