ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್, ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಜುಲೈ. 23 : ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೊಜನೆಯ ಟ್ರಸ್ಟಿ ಶ್ರೀಮತಿ ಹೇಮಾವತಿ ಹೆಗ್ಡೆರವರ ಕನಸಿನಂತೆ ನಮ್ಮೂರು ನಮ್ಮ ಕೆರೆ ಕಾರ್ಯಕ್ರಮದಡಿ ಜಿಲ್ಲೆಯಲ್ಲಿ ಒಟ್ಟು 29 ಕೆರೆಗಳ ಹೂಳು ತೆಗೆಸಿ ಪುನಶ್ಚೇತನಗೊಳಿಸಲಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಮಹಾಯಾನ ಪುಸ್ತಕವನ್ನು ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಜಿಲ್ಲಾ ರಕ್ಷಣಾಧಿಕಾರಿಗಳಿಗೆ ವಿತರಿಸಲಾಯಿತು.
ಕೆರೆಗಳ ಹೂಳು ತೆಗೆಸುವುದರಿಂದ ಮಳೆಗಾಲದಲ್ಲಿ ನೀರಿನ ಸಂಗ್ರಹ ಜಾಸ್ತಿಯಾಗುವುದಲ್ಲದೆ. ಕೃಷಿಗೆ ನೆರವಾಗಿ ಬೋರ್ವೆಲ್ಗಳಲ್ಲಿ ನೀರಿನ ಮಟ್ಟ ಹೆಚ್ಚಲಿದೆ. ಕೆರೆಯ ಫಲವತ್ತಾದ ಹೂಳನ್ನು ರೈತರು ತಮ್ಮ ಜಮೀನುಗಳಿಗೂ ಬಳಸಿಕೊಳ್ಳುತ್ತಿದ್ದಾರೆ. ರಾಜ್ಯಾದ್ಯಂತ ಒಟ್ಟು 776 ಕೆರೆಗಳನ್ನು ಪುನಶ್ಚೇತನಗೊಳಿಸಲಾಗಿದೆ. ಸುಮಾರು 208 ಲಕ್ಷ ಕ್ಯೂ.ಮೀಟರ್ನಷ್ಟು ಹೂಳು ತೆಗೆಯಲಾಗಿದೆ. ಒಂದು ಲಕ್ಷ ಎಪ್ಪತ್ತು ಸಾವಿರದ 23 ರೈತರು ಹೊಲಗಳಿಗೆ ಕೆರೆ ಮಣ್ಣನ್ನು ಸಾಗಿಸಿದ್ದು, 3 ಲಕ್ಷ 69 ಸಾವಿರದ 325 ಕುಟುಂಗಳಿಗೆ ಅನುಕೂಲವಾಗಿದೆ ಎಂದು ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿದರು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಜಿಲ್ಲಾ ನಿರ್ದೇಶಕ ಶಿವಾನಂದ ಆಚಾರ್ಯ, ದಿನೇಶ್ ಪೂಜಾರಿ, ಪ್ರಾದೇಶಿಕ ಅಭಿಯಂತರ ಹರೀಶ್ನಾಯ್ಕ, ಕ್ಷೇತ್ರ ಯೋಜನಾಧಿಕಾರಿ ಬಿ.ಅಶೋಕ್ ಈ ಸಂದರ್ಭದಲ್ಲಿದ್ದರು.