ಹುಬ್ಬಳ್ಳಿ: ಚಂದ್ರಶೇಖರ ಗುರೂಜಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಕೊಲೆ ಆರೋಪಿಗಳ ಬಂಧನಕ್ಕೆ ಎಸಿಪಿ ವಿನೋದ್ ನೇತೃತ್ವದಲ್ಲಿ ತಂಡ ರಚನೆ ಮಾಡಿ, ನಾಲ್ಕೇ ತಾಸಿನಲ್ಲಿ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮಹಾಂತೇಶ್ ಶಿರೂರ ಮತ್ತು ಮಂಜುನಾಥ ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇಬ್ಬರು ಮಾಜಿ ನೌಕರರಿಂದಲೇ ಕೃತ್ಯ ನಡೆದಿದೆ ಎಂಬ ಮಾಹಿತಿ ಸಿಕ್ಕಿದೆ. ಗುರೂಜಿಯೇ ಇಬ್ಬರನ್ನೂ ಹೋಟೆಲ್ ಗೆ ಕರೆಯಿಸಿದ್ದರೆಂಬ ಮಾಹಿತಿ ಇದೆ. ಹಳೆಯ ದ್ವೇಷ ಮತ್ತು ವೈಯಕ್ತಿಕ ವ್ಯವಹಾರ ಕಾರಣಕ್ಕೆ ಕೊಲೆ ಮಾಡಲಾಗಿದೆ ಎನ್ನಲಾಗಿದೆ. ಆಸ್ತಿ ಖರೀದಿಸಿ ಅವರ ಶಿಷ್ಯಂದಿರ ಹೆಸರಲ್ಲಿ ಇಡುತ್ತಿದ್ದರು. ಅದನ್ನು ವಾಪಸ್ ಕೊಡು ಎಂದಾಗ ಈ ರೀತಿ ಮಾಡಿದ್ದಾರೆಂಬ ಮಾಹಿತಿ ಇದೆ. ಎಲ್ಲ ಮಗ್ಗಲುಗಳಲ್ಲಿಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಘಟನೆಗೆ ಬಿಜೆಪಿ ಮುಖಂಡ ಮೋಹನ ಲಿಂಬಿಕಾಯಿ ಖಂಡನೆ ವ್ಯಕ್ತಪಡಿಸಿದ್ದಾರೆ. ಶವಾಗಾರದ ಬಳಿ ಬಂದ ಲಿಂಬಿಕಾಯಿ ಗುರೂಜಿಯ ಅಂತಿಮ ದರ್ಶನ ಪಡೆದಿದ್ದಾರೆ. ಮೋಹನ್ ಲಿಂಬಿಕಾಯಿ ಮಾತನಾಡಿದ್ದು, ಗುರೂಜಿ ಆತ್ಮೀಯರಾಗಿದ್ದರು. ಕುಟುಂಬದವರೊಂದಿಗೆ ಈಗ ಚರ್ಚಿಸಿದ್ದೇವೆ. ಗೂರೂಜಿ ಅವರಿಗೆ ಬಹಳಷ್ಟು ಅನುಯಾಯಿಗಳು ಇದ್ದಾರೆ. ದೇಶದ ಬೇರೆ ಬೇರೆ ಕಡೆಗಳಲ್ಲಿ ಇದ್ದಾರೆ ಎಂದಿದ್ದಾರೆ.
ನಾಳೆ ಗುರೂಜಿ ಅಂತ್ಯಕ್ರಿಯೆ ನಡೆಯಲಿದೆ. ನಾಳೆ ಮಧ್ಯಾಹ್ನ 1 ಗಂಟೆಗೆ ಅಂತ್ಯಕ್ರಿಯೆ. ಹುಬ್ಬಳ್ಳಿಯ ಸುಳ್ಳ ಗ್ರಾಮದ ರಸ್ತೆಯ ಜಮೀನಿನಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಗುರೂಜಿಯವರ ಸ್ವಂತ ಜಮೀನಿನಲ್ಲಿ ಅಂತ್ಯಕ್ರಿಯೆ ನಡೆಯಲಿದೆ.