ಬೆಳಗಾವಿ: ಸದನದಲ್ಲಿ ನಿನ್ನೆ ಮಾಜಿ ಸ್ಪೀಕರ್ ರಮೇಶ್ ಕುಮಾರ್ ನೀಡಿದ ಆಕ್ಷೇಪಾರ್ಹ ಹೇಳಿಕೆಗೆ ಇಂದು ಸದನದಲ್ಲಿ ಕ್ಷಮೆಯಾಚಿಸಿದ್ದಾರೆ. ಅತ್ಯಾಚಾರದ ಪರಿಸ್ಥಿತಿ ಎದುರಾದಾಗ ಸುಮ್ಮನೆ ಅನುಭವಿಸಬೇಕು ಎಂಬ ಹೇಳಿಕೆಗೆ ಮಹಿಳೆಯರಿಂದ ಆಕ್ಷೇಪ ವ್ಯಕ್ತವಾಗಿತ್ತು.
ಬಿಜೆಪಿ ಮಹಿಳೆಯರಿಂದ ರಮೇಶ್ ಕುಮಾರ್ ಹೇಳಿಕೆಗೆ ಆಕ್ಷೇಪ ವ್ಯಕ್ತವಾಗಿದ್ದು, ಕ್ಷಮೆಯಾಚಿಸಲು ಒತ್ತಾಯ ಹಾಕಿದ್ದಾರೆ. ಈ ಹೇಳಿಕೆ ಸಂಬಂಧ ಕಾಂಗ್ರೆಸ್ ನಾಯಕಿಯರಿಂದಲೂ ಆಕ್ಷೇಪ ವ್ಯಕ್ತವಾಗಿತ್ತು. ಇದೀಗ ರಮೇಶ್ ಕುಮಾರ್ ಸದನದಲ್ಲೇ ಕ್ಷಮೆಯಾಚಿಸಿದ್ದಾರೆ.
ನನ್ನಿಂದ ತಪ್ಪಾಗಿದ್ರೆ ಕ್ಷಮೆಯಾಚಿಸುತ್ತೇನೆ ಎಂದಿದ್ದಾರೆ. ನಾನು ಉಲ್ಲೇಖಿಸಿದ್ದು ಇಂಗ್ಲಿಷ್ ನ ಹೇಳಿಕೆ. ಲಘುವಾಗಿ ವರ್ತಿಸುವ ಉದ್ದೇಶ ನನ್ನದಲ್ಲ. ಸಣ್ಣ ವಿಚಾರ ದೊಡ್ಡದು ಮಾಡೋದು ಬೇಡ. ಆರೋಪ ಪ್ರತ್ಯಾರೋಪಕ್ಕೆ ಯಾವಾಗಲೂ ಬೇಡ. ಸದಾ ಗೌರವದಿಂದ ನಡೆದುಕೊಳ್ಳುವ ಸ್ವಭಾವ. ನನ್ನ ಹೇಳಿಕೆಯಿಂದ ಹೆಣ್ಣು ಮಕ್ಕಳಿಗೆ ನೋವಾಗಿದ್ರೆ. ಶುದ್ಧವಾದ ಹೃದಯದಿಂದ ವಿಷಾದವನ್ನ ವ್ಯಕ್ತಪಡಿಸುತ್ತೇನೆ. ಸದನದ ಗೌರವ ಕಾಪಾಡೋದಕ್ಕೆ ಸದಾ ಸಿದ್ದ ಎಂದಿದ್ದಾರೆ.