Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಚಿತ್ರದುರ್ಗದಿಂದ ಅಯೋಧ್ಯೆಗೆ ಹೊರಟ ರಾಮ ಭಕ್ತರು : ರೈಲ್ವೆ ನಿಲ್ದಾಣದಲ್ಲಿ ಶುಭಕೋರಿ ಬೀಳ್ಕೊಟ್ಟ ಗಣ್ಯರು

Facebook
Twitter
Telegram
WhatsApp

 

ವರದಿ ಮತ್ತು ಫೋಟೋ ಕೃಪೆ
                           ಸುರೇಶ್ ಪಟ್ಟಣ್,                         
ಮೊ : 98862 95817

ಸುದ್ದಿಒನ್, ಚಿತ್ರದುರ್ಗ ಫೆ. 11 : ದೇಶದಲ್ಲಿ ಸಂವಿಧಾನ ಎಷ್ಟು ಮುಖ್ಯವೂ ಅಷ್ಟೇ ಪ್ರಮಾಣದಲ್ಲಿ ರಾಮಾಯಣ ಮತ್ತು ಮಹಾಭಾರತ ನಮ್ಮ ಬಹು ಸಂಖ್ಯಾತ ಹಿಂದುಗಳಿಗೆ ಅವಶ್ಯ ಜೀವನ ಪದ್ದತಿಯಾಗಿದೆ ಎಂದು ಕೇಂದ್ರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಸಚಿವರಾದ ಎ.ನಾರಾಯಣಸ್ವಾಮಿ ತಿಳಿಸಿದರು.

ನಗರದಿಂದ ಆಯೋಧ್ಯೆಗೆ ಹೋಗುವ ರಾಮ ಭಕ್ತಾಧಿಗಳಿಗೆ ರೈಲ್ವೆ ನಿಲ್ದಾಣದಲ್ಲಿ ಹಮ್ಮಿಕೊಂಡಿದ್ದ ಬಿಳ್ಕೊಡುಗೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ನರೇಂದ್ರ ಮೋದಿಯವರ ಆಪೇಕ್ಷೆಯಂತೆ ಆಯೋಧ್ಯೆಯ ರಾಮ ಮಂದಿರದಲ್ಲಿ ರಾಮನ ದರ್ಶನ ಭಾಗ್ಯವನ್ನು ಕರುಣಿಸಿದ್ದಾರೆ. ಕರ್ನಾಟಕದಿಂದಿ 35 ಸಾವಿರ ಮಂದಿಯನ್ನು ರಾಮನ ದರ್ಶನಕ್ಕೆ ಕಳುಹಿಸಲಾಗುತ್ತಿದೆ.

ದೇಶದ ಅನೇಕ ಕ್ಯಾಬಿನೆಟ್ ಸಚಿವರುಗಳಿಗೆ ರಾಮನ ದರ್ಶನ ಸಿಕ್ಕಿಲ್ಲ ಆದರೆ ಅತನ ಭಕ್ತರಾದ ನಿಮಗೆ ರಾಮನ ದರ್ಶನ ಮಾಡುವ ಭಾಗ್ಯ ಬಂದಿದೆ. ಚಿತ್ರದುರ್ಗದಿಂದ ಹೊಗುತ್ತಿರುವ 415 ರಾಮ ಭಕ್ತಾಧಿಗಳಿಗೆ ರಾಮನ ದರ್ಶನವಾಗುತ್ತದೆ. ರಾಮಮಂದಿರ ನಿರ್ಮಾಣಕ್ಕಾಗಿ ಅನೇಕರು ಹೋರಾಟವನ್ನು ಮಾಡಿದ್ದಾರೆ. ದೇಶದಲ್ಲಿ ಹಲವಾರು ಜನತೆ ತಮ್ಮ ಪ್ರಾಣವನ್ನು ನೀಡಿದ್ದಾರೆ. ರಾಮಮಂದಿರ ಕಾಶಿ ಮತ್ತು ಮಧುರ ಈ ದೇಶದ ಬಹಸಂಖ್ಯಾತರ ಅಸ್ಮಿತೆ, ಕೋಟ್ಯಾಂತರ ಜನತೆ ಕನಸು ರಾಮ ರಾಜ್ಯವನ್ನು ನಿರ್ಮಾಣ ಮಾಡಬೇಕು, ರಾಮ ರಾಜ್ಯದ ಕನಸು ನನಸಾಗಬೇಕಾದರೆ ರಾಮಮಂದಿರ ನಿರ್ಮಾಣವಾಗಬೇಕು ಎಂಬುದು ಮೋದಿಯವರ ಕನಸಾಗಿತ್ತು ಎಂದರು.

ವಿಶ್ವವೇ ಭಾರತದ ಸಾದನೆಯನ್ನು ಕೊಂಡಾಡಿದೆ. ದೇಶದಲ್ಲಿ ಸಂವಿಧಾನ ಎಷ್ಟು ಮುಖ್ಯವೂ ಅಷ್ಟೇ ಪ್ರಮಾಣದಲ್ಲಿ ರಾಮಾಯಣ ಮತ್ತು ಮಹಾಭಾರತ ನಮ್ಮ ಬಹು ಸಂಖ್ಯಾತ ಹಿಂದುಗಳಿಗೆ ಅವಶ್ಯ ಜೀವನ ಪದ್ದತಿಯಾಗಿದೆ. ಹಿಂದು ನೆಲೆಗಟ್ಟಿನ ಭಾರತಕ್ಕೆ ಬಹು ಸಂಖ್ಯಾತರಿಗೆ ಇತರೆ ಧರ್ಮದವರು ಸಹಕಾರವನ್ನು ನೀಡಬೇಕಿದೆ. 500 ವರ್ಷಗಳ ಹೋರಾಟಕ್ಕೆ ದಾಸ್ಯದಿಂದ ಮುಕ್ತವಾಗಿದ್ದೇವೆ. ಈ ಕಾರ್ಯವನ್ನು ಮಾಡಿದ ಕೇಂದ್ರ ಸರ್ಕಾರಕ್ಕೆ ಅಭಿನಂದನೆ, ದೇಶದಲ್ಲಿ ರಾಮನ ದರ್ಶನಕ್ಕೆ ರೈಲ್ವೆ ಇಲಾಖೆಯವರು, ರಾಷ್ಟ್ರದ ಮೂಲೆ ಮೂಲೆಗಳಿಂದ ಆಯೋಧ್ಯೆಗೆ ಹೋಗಲು ರಾಮನ ದರ್ಶನಕ್ಕೆ ಆವಕಾಶವನ್ನು ಮಾಡಿದ್ದಾರೆ ತುಂಬು ಹೃದಯದ ಅಭಿನಂದನೆಗಳು ಎಂದು ನಾರಾಯಣಸ್ವಾಮಿ ತಿಳಿಸಿದರು.

ವೀಧಾನ ಪರಿಷತ್ ಸದಸ್ಯರಾದ ಕೆ.ಎಸ್. ನವೀನ್ ಮಾತನಾಡಿ, ರಾಮನ ದರ್ಶನ ಪಡೆಯುವುದಕ್ಕೆ ಎಲ್ಲರಿಗೂ ಸಹಾ ಸಂತಸವಾಗಿದೆ. ಜಿಲ್ಲೆಯಿಂದ ಹೋಗುತ್ತಿರುವ ಭಕ್ತಾಧಿಗಳಿಗೆ ಒಳ್ಳೇಯ ದರ್ಶನವಾಗಲಿ, ರಾಮನ ದರ್ಶನದಿಂದ ಬಂದ ಮೇಲೆ ಕನಿಷ್ಠ ೫೦೦ ಮನೆಗಾದರೂ ಶ್ರೀರಾಮನ ಪ್ರಸಾದವನ್ನು ತಲುಪಿಸುವ ಕಾರ್ಯವನ್ನು ಮಾಡಿ ಶ್ರೀರಾಮ ಆದರ್ಶ ಮತ್ತು ತತ್ವಗಳನ್ನು ಸಾಧ್ಯವಾದಷ್ಟು ನಿಮ್ಮ ಜೀವನದಲ್ಲಿ ಅಳವಡಿಕೆಯನ್ನು ಮಾಡಿಕೊಳ್ಳುವಂತೆ ಕರೆ ನೀಡಿದರು.

ಮಾಜಿ ಶಾಸಕರಾದ ಜಿ.ಎಚ್.ತಿಪ್ಪಾರೆಡ್ಡಿ ಮಾತನಾಡಿ, ಆಯೋಧ್ಯಯಲ್ಲಿ ಶ್ರೀರಾಮ ಮಂದಿರ ನಿರ್ಮಾಣವಾಗಬೇಕೆಂದು ಹಲವಾರು ವರ್ಷಗಳಿಂದ ಹೋರಾಟ ನಡೆಯುತ್ತಿತ್ತು ಅದು ಈಗ ಪ್ರಧಾನ ಮಂತ್ರಿ ನರೇಂದ್ರ ಮೋಧಿಯವರ ನೇತೃತ್ವದಲ್ಲಿ ನನಸಾಗಿದೆ. ಪೂರ್ಣ ಪ್ರಮಾಣದಲ್ಲಿ ರಾಮ ಮಂದಿರ ನಿರ್ಮಾಣವಾಗುತ್ತಿದೆ. ಜನವರಿ 22 ರ ಕಾರ್ಯಕ್ರಮವನ್ನು ನಮ್ಮ ದೇಶ ಮಾತ್ರವಲ್ಲದೆ ಪ್ರಪಂಚದ ಎಲ್ಲಾ ಭಾರತೀಯರು ಸಹಾ ವೀಕ್ಷಣೆಯನ್ನು ಮಾಡಿದ್ದಾರೆ. ಜನವರಿ 22 ರಿಂದ ಈವರೆವಿಗೂ ಸುಮಾರು 1 ಕೋಟಿ ಜನತೆ ರಾಮಮಂದಿರವನ್ನು ವೀಕ್ಷಣೆ ಮಾಡಿದ್ದಾರೆ ಪ್ರತಿ ದಿನ 2 ರಿಂದ 4 ಲಕ್ಷ ಜನತೆ ರಾಮನನ್ನು ನೋಡುತ್ತಿದ್ದಾರೆ. ದೇಶದ ನಾನಾ ಭಾಗಗಳಿಂದ ಆಯೋಧ್ಯಗೆ ಹೋಗಲು ಕೇಂದ್ರ ಸರ್ಕಾರ ಮತ್ತು ರೈಲ್ವೆ ಇಲಾಖೆ ಅನುಕೂಲವನ್ನು ಮಾಡಿ ಕೊಟ್ಟಿದೆ.

ಮುಂದಿನ 2024 ರ ಲೋಕಸಭಾ ಚುನಾವಣೆಯಲ್ಲಿ ಮತ್ತೇ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಸ್ಥಿತ್ವಕ್ಕೆ ಬರಲಿದೆ. ೪೦೦ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವುದರ ಮೂಲಕ ಅಧಿಕಾರವನ್ನು ಪಡೆಯಲಿದೆ ಎಂದರು.

ಆಯೋಧ್ಯೆಯ ಶ್ರೀರಾಮ ದರ್ಶನ ಅಭಿಯಾನದ ಸಂಚಾಲಕರಾದ ಜಗದೀಶ್ ಹಿರೇಮನಿ ಮಾತನಾಡಿ, ರಾಮ ಮಂದಿರ ನಿರ್ಮಾಣದ ಕನಸು ಈಗ ನನಸಾಗಿದೆ. ಇದರ ಭೇಟಿಗಾಗಿ ಕೇಂದ್ರ ಸರ್ಕಾರ ದೇಶದಲ್ಲಿನ ಜನತೆಗೆ ವಿಶೇಷವಾದ ರೈಲುನ್ನು ಬಿಡುವುದರ ಮೂಲಕ ಎಲ್ಲರಿಗೂ ಸಹಾ ರಾಮನ ದರ್ಶನಕ್ಕೆ ಅವಕಾಶವನ್ನು ಕಲ್ಪಿಸಿದೆ.

ರಾಜ್ಯದಿಂದ ಈಗಾಗಲೇ ತುಮಕೂರಿನಿಂದ ಪ್ರಥಮವಾಗಿ ಆಯೋಧ್ಯಗೆ ಭಕ್ತಾಧಿಗಳನ್ನು ಕಳುಹಿಸಲಾಗಿದೆ. ಈಗ ಕೋಟೆನಾಡು ಚಿತ್ರದುರ್ಗದಿಂದ ಎರಡನೇ ರೈಲು ಹೋಗುತ್ತಿದೆ. ಭಾರತ ದೇಶ ಹಿಂದುತ್ವದ ಅಲೆ ಮೇಲೆ ನಿರ್ಮಾಣವಾಗುತ್ತಿದೆ. ಭಾವೈಕತ್ಯೆಯ ಮೇಲೆ ರೂಪುಗೊಳ್ಳುತ್ತಿದೆ. ರಾಮ ರಾಜ್ಯ ನಿರ್ಮಾಣಕ್ಕೆ ಪಣ ತೂಡಬೇಕಿದೆ ಎಂದರು.

ಕಾರ್ಯಕ್ರಮದಲ್ಲಿ ಮಾಜಿ ಶಾಸಕರಾದ ತಿಪ್ಪೇಸ್ವಾಮಿ, ಬಿಜೆಪಿ ಜಿಲ್ಲಾಧ್ಯಕ್ಷರಾದ ಎ.ಮುರಳಿ, ರೈಲ್ವೆ ಇಲಾಖೆಯ ಡಿಆರ್‌ಎಂ. ಶಿಲ್ಪ ಆಗರವಾಲ್, ರವಿಚಂದನ್, ವಿಜಯೇಂದ್ರ, ಮೋಹನ್, ಶಿವಣ್ಣಚಾರ್, ನಾಗರಾಜ್ ಬೇದ್ರೇ, ದಗ್ಗೆ ಶಿವಪ್ರಕಾಶ್ ಸಂಪತ್ ಸೇರಿದಂತೆ ಇತರರು ಭಾಗವಹಿಸಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಸಿಇಎನ್ ಪೊಲೀಸರ ದಾಳಿ : ಅಂತರ್ ರಾಜ್ಯ ಗಾಂಜಾ ಪೆಡ್ಲರ್ ಬಂಧನ

ಸುದ್ದಿಒನ್, ಚಿತ್ರದುರ್ಗ, ನವೆಂಬರ್. 22 : ಆಂದ್ರಪ್ರದೇಶದ ವಿಶಾಖಪಟ್ಟಣಂ ನಿಂದ ಗಾಂಜಾವನ್ನು ತಂದು ಚಿತ್ರದುರ್ಗ ನಗರಕ್ಕೆ ಬಂದು ಗಾಂಜಾ ಮಾರಾಟ ಮಾಡುತ್ತಿದ್ದ ಡ್ರಗ್ಸ್‌ ಪೆಡ್ಲರ್‌ನನ್ನು ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಿಹಾರದ ಹರಿ ಓಂಕುಮಾರ್(24

ಪೆಟ್ರೋಲ್ ಬಂಕಿನಲ್ಲಿ ವಂಚನೆ ಆರೋಪ : ಗ್ರಾಹಕರು ಹಾಗೂ ಸಿಬ್ಬಂದಿಗಳ ನಡುವೆ ಮಾತಿನ ಚಕಮಕಿ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಬೆಳಗೆರೆ ಮೊ : 97398 75729 ಸುದ್ದಿಒನ್, ಚಳ್ಳಕೆರೆ, ನವೆಂಬರ್. 22 : ಬೈಕ್ ಗಳಿಗೆ ಪೆಟ್ರೋಲ್ ಹಾಕುವ ವೇಳೆ ಗ್ರಾಹಕರಿಗೆ ಇಲ್ಲಿನ ಸಿಬ್ಬಂದಿ ವಂಚನೆ

ಅಕ್ರಮ ಕಸಾಯಿ ಖಾನೆ ಬಂದ್ ಮಾಡಿ : ದಾದಾ ಪೀರ್ ಆಗ್ರಹ : ವಿಡಿಯೋ ವೈರಲ್..!

ಸುದ್ದಿಒನ್, ಹಿರಿಯೂರು : ಅಕ್ರಮವಾಗಿ ಕಸಾಯಿ ಖಾನೆ ನಡೆಸುತ್ತಿರುವವರ ವಿರುದ್ಧ ದಾದಾ ಪೀರ್ ಎಂಬುವವರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದಾದಾ ಪೀರ್ 6ನೇ ವಾರ್ಡ್ ನಲ್ಲಿ ವಾಸಿಸುವವ ವ್ಯಕ್ತಿಯಾಗಿದ್ದಾರೆ. ಕಸಾಯಿ ಖಾನೆಯಿಂದ ಮಕ್ಕಳು ಅನಾರೋಗ್ಯಕ್ಕೆ

error: Content is protected !!