15ನೇ ಆವೃತ್ತಿಯ ಐಪಿಎಲ್ ಮ್ಯಾಚ್ ಇಂದು ಎರಡನೇ ದಿನ. ಆರ್ಸಿಬಿ ಮತ್ತು ಪಂಜಾಬ್ ಮುಖಾಮುಖಿಯಾಗಿವೆ. ಆರ್ಸಿಬಿ ತಂಡದಲ್ಲಿ ಫಾಫ್ ಡು ಪ್ಲೆಸಿಸ್ (ನಾಯಕ), ಅನುಜ್ ರಾವತ್, ವಿರಾಟ್ ಕೊಹ್ಲಿ, ಶೆರ್ಫೇನ್ ರುದರ್‌ಫೋರ್ಡ್, ದಿನೇಶ್ ಕಾರ್ತಿಕ್ (WK), ಡೇವಿಡ್ ವಿಲ್ಲಿ, ಶಹಬಾಜ್ ಅಹ್ಮದ್, ವನಿಂದು ಹಸರಂಗ, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್ ಇದ್ದಾರೆ. ಈಗಾಗಲೇ ಟಾಸ್ ಗೆದ್ದ ಪಂಜಾಬ್ ಬೌಲಿಂಗ್ ಮಾಡಲು ನಿರ್ಧರಿಸಿದೆ.
ಐಪಿಎಲ್ ಶುರುವಾದಾಗಿನಿಂದಲೂ ಒಂಜಾಬ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು 28 ಬಾರಿ ಎದುರು ಬದುರಾಗಿದ್ದಾರೆ. ಅದರಲ್ಲಿ ಆರ್ಸಿಬಿ 13 ಬಾರಿ ಗೆದ್ದಿದ್ದರೆ, ಪಂಜಾಬ್ 15 ಬಾರಿ ಗೆದ್ದಿದೆ. ನವಿ ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ಐಪಿಎಲ್ 2022 ರ ಮೂರನೇ ಪಂದ್ಯ ನಡೆಯುತ್ತಿದೆ.
ಮಯಾಂಕ್ ಅಗರ್ವಾಲ್ ಪಂಜಾಬ್ ತಂಡದ ನಾಯಕರಾಗಿದ್ದು, 9 ವರ್ಷಗಳ ನಂತರ ಬೆಂಗಳೂರು ತಂಡದ ನಾಯಕತ್ವದಲ್ಲಿ ಬದಲಾವಣೆಯಾಗಿದ್ದು, ಇದೀಗ ಫಾಫ್ ಡು ಪ್ಲೆಸಿಸ್ ತಂಡವನ್ನು ಮುನ್ನಡೆಸಲಿದ್ದಾರೆ. ಈ ಮೂಲಕ ಎರಡು ತಂಡದಲ್ಲೂ ಈ ಬಾರಿ ಹೊಸಬರ ನಾಯಕತ್ವದ ಮೂಲಕ ಆಟ ಸಾಗಲಿದೆ. ಈ ಎರಡು ಟೀಂ ನ ಆಟ ಮಾತ್ರ ರೋಚಕವಾಗಿ ನಡೆಯಲಿದೆ.