Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಸಂವಿಧಾನದ ರಕ್ಷಣೆಗೆ ಪಣ ತೊಡೋಣಾ: ಮಾಜಿ ಸಚಿವ ಎಚ್.ಆಂಜನೇಯ ಕರೆ

Facebook
Twitter
Telegram
WhatsApp

 

ಚಿತ್ರದುರ್ಗ, ಜ.26: ಬ್ರಿಟಿಷರ ಕಪಿಮುಷ್ಠಿಯಿಂದ ದೇಶವನ್ನು  ಮುಕ್ತವಾಗಿಸಲು ಹೋರಾಟ ನಡೆಸಿದ ಗಾಂಧೀಜಿ ಸೇರಿ ಲಕ್ಷಾಂತರ ಮಂದಿಯ ತ್ಯಾಗ, ಬಲಿದಾನ ಸ್ಮರಿಸುವ ಜೊತೆ ಅವರ ಆಶಯಗಳ ಅನುಷ್ಠಾನದ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ ಎಂದು ಮಾಜಿ ಸಚಿವ ಎಚ್.ಆಂಜನೇಯ ಹೇಳಿದರು.

ನಗರದ ಐಯುಡಿಪಿ ಲೇಔಟ್ ನಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಸ್ಮಾರಕ ವಿದ್ಯಾಸಂಸ್ಥೆಯ ಆಶ್ರಯದ ಆಸ್ಕರ್ ಫರ್ನಾಂಡೀಸ್  ಪಬ್ಲಿಕ್ ಸ್ಕೂಲ್ ಮತ್ತು ಎಸ್ ಆರ್ ಎಸ್ ವಿದ್ಯಾಸಂಸ್ಥೆ ಸಂಯುಕ್ತಾಶ್ರಯದಲ್ಲಿ  ನಡೆದ ೭೪ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ನೂರಾರು ವರ್ಷಗಳ ಆಳ್ವಿಕೆ ನಡೆಸಿದ ಆಂಗ್ಲರು, ದೇಶದ ಸಂಪತ್ತನ್ನು ಕೊಳ್ಳೆ ಹೊಡೆದಿದ್ದರು. ಸ್ವತಂತ್ರ ಭಾರತದಲ್ಲಿ ಬಡತನ, ಅಸಮಾನತೆ ತಾಂಡವವಾಡುತ್ತಿತ್ತು. ಇಂತಹ ದೇಶದ ಮೊದಲ ಪ್ರಧಾನಿಯಾಗಿ ಆಯ್ಕೆಯಾದ ಜವಹರಲಾಲ್ ನೆಹರು ಎದುರು ಸಾಲು ಸಾಲು ಸವಾಲುಗಳು ಇದ್ದವು. ಬರಿದಾಗಿದ್ದ ದೇಶವನ್ನು ಮರು ಸ್ಥಾಪಿಸುವಲ್ಲಿ, ಹರಿದು ಹಂಚಿ ಹೋಗಿದ್ದ ದೇಶವನ್ನು ಅಖಂಡ ಭಾರತವನ್ನಾಗಿಸುವಲ್ಲಿ ನೆಹರು, ಸರ್ದಾರ್ ವಲ್ಲಭಭಾಯಿ ಪಟೇಲ್, ಅಬ್ದುಲ್ ಕಲಾಂ ಅಜಾದ್, ಅಂಬೇಡ್ಕರ್ ಸೇರಿ ಅನೇಕರ ಹೋರಾಟ, ಶ್ರಮ ಸ್ಮರಿಸಬೇಕು ಎಂದರು.

ವಿಶ್ವಜ್ಞಾನಿ ಡಾ.ಬಿ.ಆರ್.ಅಂಬೇಡ್ಕರ್ ಅವರು ರಚಿಸಿದ ಸಂವಿಧಾನವನ್ನು ವಿಶ್ವವೇ ಮೆಚ್ಚುಕೊಂಡಿದೆ. ಅತ್ಯಂತ ಶ್ರೇಷ್ಠ ಪ್ರಜಾಪ್ರಭುತ್ವ ರಾಷ್ಟ್ರ ನಿರ್ಮಾಣಕ್ಕೆ ಬುನಾದಿ ಆಗಿದೆ. ಅಸ್ಪೃಶ್ಯತೆ ನಿವಾರಣೆ ಜೊತೆಗೆ,
ಇತ್ತೀಚೆಗೆ ಸಂವಿಧಾನವನ್ನೇ ಬುಡಮೇಲು ಮಾಡುವ ಘಟನೆಗಳು, ಸಂವಿಧಾನ ಬದಲಾಯಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.

ಸರ್ವಧರ್ಮಗಳ ಶಾಂತಿಯ ತೋಟವಾಗಿರುವ ಸುಂದರ ಭಾರತವು ಮಹನೀಯರು ನಮಗೆ ಕೊಟ್ಟ ಬಹುದೊಡ್ಡ ಕೊಡುಗೆ ಆಗಿದೆ. ಇಂತಹ ಪ್ರಜಾಪ್ರಭುತ್ವ, ಜಾತ್ಯತೀತ ರಾಷ್ಟ್ರದಲ್ಲಿ ಜಾತಿ, ಧರ್ಮದ ಹೆಸರಲ್ಲಿ ಅಶಾಂತಿ ನಿರ್ಮಾಣಕ್ಕೆ ದುಷ್ಟಶಕ್ತಿಗಳು ಸದಾ ಪ್ರಯತ್ನಿಸುತ್ತೀವೆ. ಇದಕ್ಕೆ ಕಡಿವಾಣ ಹಾಕುವ ಹೊಣೆಗಾರಿಕೆ ಯುವಪೀಳಿಗೆ ಮೇಲಿದೆ ಎಂದರು.

ಯುವಜನರು ನಮ್ಮ ಮಹನೀಯರ ಕನಸು, ಸಂವಿಧಾನದ ಆಶಯ ಅರಿತುಕೊಳ್ಳಬೇಕಿದೆ. ದುಷ್ಟಶಕ್ತಿಗಳ ವಿರುದ್ಧ ಹೋರಾಟಕ್ಕೆ ಸಜ್ಜುಗೊಳ್ಳಬೇಕಿದೆ ಎಂದು ತಿಳಿಸಿದರು.

ಸ್ವಾತಂತ್ರೋತ್ಸವ, ಗಣರಾಜ್ಯೋತ್ಸವ, ಕನ್ನಡ ರಾಜ್ಯೋತ್ಸವ ಆಚರಣೆಗಳು ಸರ್ಕಾರದ ಆಡಳಿತ ಯಂತ್ರಕ್ಕೆ ಸೀಮಿತವಾಗದೆ ದಸರಾ, ದೀಪಾವಳಿ ಹಬ್ಬದ ರೀತಿ ನಾವುಗಳು ಸಂಭ್ರಮಿಸಬೇಕು. ಈ ಮೂಲಕ ದೇಶಭಕ್ತಿ ಬೆಳೆಸಿಕೊಳ್ಳಬೇಕು ಎಂದರು.
ದೇಶಭಕ್ತಿ ಎಂಬುದು ಹೃದಯದ ಆಳಕ್ಕೆ ಇಳಿಯಬೇಕು. ಆಗ ಮಾತ್ರ ಮತ್ತೊಬ್ಬರನ್ನು, ಮತ್ತೊಂದು ಜಾತಿ, ಧರ್ಮವನ್ನು ಗೌರವಿಸುವ ವ್ಯಕ್ತಿತ್ವ ನಮ್ಮಲ್ಲಿ ಬರಲಿದೆ. ಇತ್ತೀಚೆಗೆ ದೇಶಭಕ್ತಿಯ ವ್ಯಾಖ್ಯನವೇ ಬದಲಾಗುತ್ತಿದೆ. ಪರಿಣಾಮ ದ್ವೇಷದ ಮನೋಭಾವನೆಗೆ ಒಳಗಾಗಿ, ಸ್ವತಂತ್ರ ಹೋರಾಟಗಾರರ ಆಶಯಕ್ಕೆ ಧಕ್ಕೆ ತರುವ ಘಟನೆಗಳು ಸಂಭವಿಸುತ್ತೀವೆ ಎಂದು ಬೇಸರಿಸಿದರು.

ಇಂತಹ ಮನಸ್ಥಿತಿಯಿಂದ ಹೊರಬಂದು ನಿಜಭಕ್ತರಾಗಲು ಶಿಕ್ಷಣದ ಜೊತೆ ಜೊತೆಗೆ ಬುದ್ಧ, ಬಸವಣ್ಣ, ಗಾಂಧಿ, ನೆಹರು,  ಅಂಬೆಡ್ಕರ್, ರಾಣಿ ಝಾನ್ಸಿ ಲಕ್ಷ್ಮೀಬಾಯಿ, ಕಿತ್ತೂರು ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ ಸೇರಿ ಅನೇಕ ಮಹನೀಯರ ಬದುಕು ಹಾಗೂ ಅವರ ಕುರಿತ ಕೃತಿಗಳನ್ನು ಓದಬೇಕು. ಇದರಿಂದ ನಮ್ಮಲ್ಲಿ ಉತ್ತಮ ವ್ಯಕ್ತಿತ್ವ ಜೊತೆಗೆ ದೇಶಪ್ರೇಮದ ಮೂಲಕ ಸಾಮರಸ್ಯದ, ಸದೃಢ ಭಾರತ ನಿರ್ಮಾಣ ಸಾಧ್ಯವಾಗಲಿದೆ ಎಂದರು.

ಕಾರ್ಯಕ್ರಮದಲ್ಲಿ ಜಿಪಂ ಮಾಜಿ ಸದಸ್ಯ ಆರ್.ನರಸಿಂಹರಾಜು,ಸಂಸ್ಥೆಯ ಆಡಳಿತಾಧಿಕಾರಿ ಚಿನ್ಮಯಿ ಸಾಲಿಮಠ್, ಮುಖ್ಯಶಿಕ್ಷಕಿ ಪದ್ಮಾವತಿ, ದಲಿತ ಮುಖಂಡ ಪ್ರಸನ್ನ ಜಯಣ್ಣ, ಕಾಂಗ್ರೆಸ್ ಮುಖಂಡ ಲೋಕೇಶ್ ಮತ್ತು ಶಿಕ್ಷಕ ವೃಂದದವರು ಇದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಹೀಟರ್ ಬಳಸದೆಯೇ‌ಚಳಿಗಾಲದಲ್ಲಿ ಮನೆಯನ್ನು ಬೆಚ್ಚಗಿರುವಂತೆ ಮಾಡಬಹುದು..!

ಈ ವರ್ಷ ಮುಂಗಾರು ಹಾಗೂ ಹಿಂಗಾರು ಮಳೆ ಅತ್ಯಧಿಕವಾಗಿ ಸುರಿದ ಪರಿಣಾಮ ಈ ಬಾರಿ ಚಳಿಯೂ ಜಾಸ್ತಿ ಇರಲಿದೆ. ಕಳೆದ ವರ್ಷಕ್ಕಿಂತ ಅತ್ಯಧಿಕವಾಗಿರಲಿದೆ. ಈಗಾಗಲೇ ಚಳಿಗಾಲ ಶುರುವಾಗಿದೆ ಕೂಡ. ಚಳಿಗಾಲದಲ್ಲಿ ಮನೆಯೆಲ್ಲಾ ತಂಪಾಗಿರುತ್ತದೆ. ಕೆಲವೊಬ್ಬರಿಗೆ

ಹರ್ನಿಯಾ ಎಂದರೇನು ? ಸಮಸ್ಯೆಗಳು, ಲಕ್ಷಣಗಳು ಮತ್ತು ಪರಿಹಾರ : ಇಲ್ಲಿದೆ ಸಂಪೂರ್ಣ ಮಾಹಿತಿ…!

ಸುದ್ದಿಒನ್ | ಹರ್ನಿಯಾ ಎನ್ನುವುದು ಹೊಟ್ಟೆಯ ಅಥವಾ ಕಿಬ್ಬೊಟ್ಟೆಯ ಭಾಗದಲ್ಲಿ ಕಂಡುಬರುವ ವೈದ್ಯಕೀಯ ಸ್ಥಿತಿಯಾಗಿದ್ದು, ಹೊಟ್ಟೆಯ ಭಾಗದ ಅಂಗಗಳು ಸ್ನಾಯು ಅಥವಾ ಅಂಗಾಂಗಗಳ ನಡುವೆ ತೂರಿಕೊಂಡು ಚರ್ಮದ ಕೆಳ ಭಾಗದಲ್ಲಿ ಬಲೂನಿನಂತೆ ಊದಿಕೊಂಡು ಅಥವಾ

ಈ ರಾಶಿಯವರು ಶತ್ರುಗಳ ಒಳಸಂಚುಗಳಿಗೆ ಪ್ರತ್ಯುತ್ತರ ನೀಡಿ

ಈ ರಾಶಿಯವರು ಶತ್ರುಗಳ ಒಳಸಂಚುಗಳಿಗೆ ಪ್ರತ್ಯುತ್ತರ ನೀಡಿ, ಈ ರಾಶಿಯವರ ಪರಸ್ತ್ರೀ-ಪುರುಷ ಸಹವಾಸದಿಂದ ಕುಟುಂಬದಲ್ಲಿ ಕಲಹ, ಭಾನುವಾರ- ರಾಶಿ ಭವಿಷ್ಯ ನವೆಂಬರ್-24,2024 ಸೂರ್ಯೋದಯ: 06:30, ಸೂರ್ಯಾಸ್ತ : 05:35 ಶಾಲಿವಾಹನ ಶಕೆ -1946 ಸಂವತ್-2080

error: Content is protected !!