ಮೈಸೂರು: ಜಿಲ್ಲೆಗೆ ರೈಲು ಸೇವೆ ನೀಡುವುದರಲ್ಲಿ ಮಹಾರಾಜರ ಪಾತ್ರ ತುಂಬಾ ದೊಡ್ಡದಿದೆ. ಹೀಗಾಗಿ ಟಿಪ್ಪು ಹೆಸರು ತೆಗೆದು ರೈಲ್ವೆ ನಿಲ್ದಾಣ ಎಂದು ನಾಮಕರಣ ಮಾಡಿ ಎಂದು ಸಂಸದ ಪ್ರತಾಪ್ ಸಿಂಹ ಒತ್ತಾಯಿಸಿದ್ದಾರೆ.
ಈಗಾಗಲೇ ಟಿಪ್ಪು ಎಕ್ಸ್ಪ್ರೆಸ್ ರೈಲಿನ ಹೆಸರು ಬದಲಿಸಲು ಒತ್ತಾಯ ಕೇಳಿ ಬಂದಿದೆ. ಹೆಸರು ಬದಲಿಸೋದು ಉತ್ತಮ ಎಂದು ಸಂಸದ ಪ್ರತಾಪ್ ಸಿಂಹ ರೈಲ್ವೆ ಸಚಿವೆ ಅಶ್ವಿನಿ ವೈಷ್ಣವ್ ಗೆ ಮನವಿ ಮಾಡಿದ್ದಾರೆ.
ದೆಹಲಿಯಲ್ಲಿ ಭೇಟಿಯಾಗಿ ಸಚಿವೆಗೆ ಲಿಖಿತ ರೂಪದಲ್ಲಿ ಮನವಿ ಮಾಡಲಾಗಿದೆ. ರೈಲು ಸೇವೆ ಕಲ್ಪಿಸುವಲ್ಲಿ ಮಹಾರಾಜರ ಪಾತ್ರ ದೊಡ್ಡದು. ಹೀಗಾಗಿ ಒಡೆಯರ್ ಎಕ್ಸ್ಪ್ರೆಸ್ ಎಂದು ಹೆಸರಿಡಲು ಸೂಚಿಸಲಾಗಿದೆ.