ಸುದ್ದಿಒನ್, ಚಿತ್ರದುರ್ಗ, ಜೂ.02 : ಬಾಹ್ಯಾಕಾಶದಲ್ಲಿ ಆಗಾಗ್ಗೆ ವಿಸ್ಮಯಗಳು ನಡೆಯುತ್ತಲೇ ಇರುತ್ತವೆ. ಈಗ ನಮ್ಮ ಸೌರವ್ಯೂಹದ 3-4 ಗ್ರಹಗಳು ಒಂದೇ ಸಾಲಿನಲ್ಲಿ ಇರುವುದನ್ನು ಬರಿಗಣ್ಣಿನಲ್ಲಿಯೇ ನೋಡಬಹುದಾಗಿದೆ.
ಜೂನ್ 3 ರಿಂದ 5 ರವರೆಗೆ ಗ್ರಹಗಳ ಪರೇಡ್ ನ್ನು ನೋಡಿ ಆನಂದಿಸಬಹುದಾಗಿದೆ. ಬೆಳಗಿನ ಜಾವ 5 ಗಂಟೆಯಿಂದ 5.30 ರ ಒಳಗೆ ದಿಗಂತದಲ್ಲಿ ಬುಧಗ್ರಹ, ಗುರುಗ್ರಹ, ನಂತರ ಮಂಗಳ ಹಾಗೂ ಅದರ ಮೇಲೆ ಶನಿಗ್ರಹಗಳು ಇರುವುದನ್ನು ಕಣ್ತುಂಬಿಕೊಳ್ಳಲು ಇದೊಂದು ಸದಾವಕಾಶ. ಇವುಗಳನ್ನು ವೀಕ್ಷಿಸಲು ಯಾವುದೇ ದೂರದರ್ಶಕ, ಬೈನಾಕ್ಯುಲರ್ ಗಳ ಅವಶ್ಯಕತೆ ಇಲ್ಲ ಎಂದು ಹವ್ಯಾಸಿ ಖಗೋಳ ವೀಕ್ಷಕ ಎಚ್.ಎಸ್.ಟಿ.ಸ್ವಾಮಿ ತಿಳಿಸಿದ್ದಾರೆ.