ನವದೆಹಲಿ: ಈ ಹಿಂದೆಯೇ ಪೆಟ್ರೋಲ್ ಡಿಸೇಲ್ ಬೆಲೆ ಏರಿಕೆಯಾಗಿ ವಾಹನ ಸವಾರರಿಗೆ ತಲೆ ಬಿಸಿ ಮಾಡಿತ್ತು. ಕಡಿಮೆ ಆಗುತ್ತೇನೋ ಎಂಬ ನಿರೀಕ್ಷೆಯಲ್ಲಿ ಕಾಯುತ್ತಿದ್ದ ಜನರಿಗೆ ಪಂಚರಾಜ್ಯ ಚುನಾವಣೆ ಬಳಿಕ ಮತ್ತೆ ಇಂಧನ ಬೆಲೆ ಟೆನ್ಶನ್ ತಂದಿಟ್ಟಿದೆ.
ಕಳೆದ ಒಂದು ವಾರದಿಂದಲೂ ಇಂಧನ ಬೆಲೆಯಲ್ಲಿ ಏರಿಕೆಯಾಗುತ್ತಲೆ ಇದೆ. ಸತತ 8ನೇ ದಿನ ಇಂದು ಕೂಡ ದೆಹಲಿಯಲ್ಲಿ ಪೆಟ್ರೋಲ್ ಬೆಲೆ 84 ಪೈಸೆ ಮತ್ತು ಡಿಸೇಲ್ ಬೆಲೆ 85 ಪೈಸೆ ಹೆಚ್ಚಳವಾಗಿದೆ. ಈ ಮೂಲಕ ಈಗ ದೆಹಲಿಯಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ 101.01 ರೂಪಾಯಿ ಆಗಿದೆ. ಹಾಗೇ ಡಿಸೇಲ್ ಬೆಲೆ ಒಂದು ಲೀಟರ್ ಗೆ 92.27 ಪೈಸೆಯಾಗಿದೆ.
ಹೀಗೆ ದಿನೇ ದಿನೇ ಇಂಧನ ಬೆಲೆ ಗಗನದತ್ತ ಮುಖ ಮಾಡಿದರೆ ದುಡಿಯುವ ದುಡಿಮೆಯಲ್ಲ ಬರೀ ಗಾಡಿಗಳಿಗೆ ಹಾಕಬೇಕಾಗುತ್ತದೆ. ಸರ್ಕಾರ ಹೀಗೆ ಮಧ್ಯಮ ವರ್ಗದವರತ್ತ ಗಮನ ಹರಿಸದೇ ಹೋದರೆ ಜೀವನ ನಡೆಸುವುದಾದರೂ ಹೇಗೆ ಅಂತ ವಾಹನ ಸವಾರರೊಬ್ಬರು ಅಳಲು ತೋಡಿಕೊಂಡಿದ್ದಾರೆ.