ಶ್ರೀಲಂಕಾದಲ್ಲಿ ಇದೀಗ ಇದ್ದಕ್ಕಿದ್ದ ಹಾಗೇ ಇಂಧನ ಬೆಲೆಯಲ್ಲಿ ದಿಢೀರ್ ಏರಿಕೆಯಾಗಿದೆ. ಹೀಗಾಗಿ ಭಾರತದಲ್ಲೂ ಏರಿಕೆಯಾಗಬಹುದಾ ಎಂಬ ಆತಂಕ ವಾಹನ ಸವಾರರಲ್ಲಿ ಶುರುವಾಗಿದೆ. ಯಾಕಂದ್ರೆ ಈಗಾಗಲೇ 105 ರೂಪಾಯಿ ಇಂಧನ ಬೆಲೆಯಿಂದ ವಾಹನ ಸವಾರರು ತತ್ತರಿಸಿ ಹೋಗಿದ್ದಾರೆ.
ಈ ಬೆಲೆ ಏರಿಕೆ ಇಂದು ಕಡಿಮೆಯಾಗಬಹುದು, ನಾಳೆ ಕಡಿಮೆಯಾಗಬಹುದು ಎಂದೇ ಭಾವಿಸಿ, ಶಪಿಸುತ್ತಲೇ ವಾಹನಗಳಿಗೆ ಇಂಧನ ಹಾಕಿಸಿಕೊಳ್ಳುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇಂಧನದ ಬೆಲೆ ಮತ್ತಷ್ಟು ಏರಿಕೆಯಾಗಬಹುದು ಎಂಬ ಮಾತು ಕೇಳಿಯೇ ಶಾಕ್ ಆಗಿದ್ದಾರೆ. ಇದೀಗ ಶ್ರೀಲಂಕಾದಲ್ಲಿ ಬೆಲೆ ಏರಿಕೆಯಾಗಿದ್ದು, ನಮ್ಮ ದೇಶದಲ್ಲೂ ಏರಿಕೆಯಾಗುವ ಸೂಚನೆ ನೀಡಿದೆ.
ಶ್ರೀಲಂಕಾದಲ್ಲಿ ಒಂದೇ ದಿನಕ್ಕೆ ಇಂದು ಲೀಟರ್ ಪೆಟ್ರೋಲ್ ಗೆ 20 ರೂಪಾಯಿ ಮತ್ತು ಒಂದು ಲೀಟರ್ ಡಿಸೇಲ್ 15 ರೂಪಾಯಿ ಏರಿಕೆ ಮಾಡಿದೆ. ಈ ಮೂಲಕ ಪೆಟ್ರೋಲ್ ಬೆಲೆ 205 ಹಾಗೂ ಡಿಸೇಲ್ ಬೆಲೆಯಲ್ಲಿ 135 ರೂಪಾಯಿಯಾಗಿದೆ. ಇದರಿಂದ ಶ್ರೀಲಂಕದಲ್ಲೂ ವಾಹನ ಸವಾರರು ತಲೆ ಬಿಸಿಯಲ್ಲೇ ಪೆಟ್ರೋಲ್-ಡಿಸೇಲ ಹಾಕಿಸುತ್ತಿದ್ದಾರೆ.