ಮಂಗಳೂರು: ತಪ್ಪನ್ನೇ ಮಾಡದ ವ್ಯಕ್ತಿಯ ಮೇಲೆ ಫಕ್ಸೋ ಕಾಯ್ದೆ ಹಾಕಿ, ಸುಮಾರು ಒಂದು ವರ್ಷಗಳ ಕಾಲ ನ್ಯಾಯಾಂಗ ಬಂಧನದಲ್ಲಿಟ್ಟಿದ್ದ ಇಬ್ಬರು ಮಹಿಳಾ ಪೊಲೀಸರಿಗೆ ಇದೀಗ ವಿಶೇಷ ನ್ಯಾಯಾಲಯದಿಂದ ದಂಡ ವಿಧಿಸಲಾಗಿದೆ. ದಂಡದ ಮೊತ್ತವನ್ನು ಪರಿಹಾರವಾಗಿ ನೀಡುವಂತೆ ನ್ಯಾಯಾಧೀಶ ಕೆ ಯು ರಾಧಾಕೃಷ್ಣ ಅವರು ತೀರ್ಪು ನೀಡಿದ್ದಾರೆ.
ನಗರದ ಮಹಿಳಾ ಸಬ್ ಇನ್ಸ್ಪೆಕ್ಟರ್ ಪಿ ಪಿ ರೋಸಮ್ಮ ಮತ್ತು ಇನ್ಸಪೆಕ್ಟರ್ ರೇವತಿ ಅವರಿಗೆ ಕೋರ್ಟ್ ದಂಡ ವಿಧಿಸಿದೆ. ಐದು ಲಕ್ಷ ಹಣವನ್ನು ಪರಿಹಾರವಾಗಿ ನವೀನ್ ಸಿಕ್ವೇರಾ ಅವರಿಗೆ ನೀಡಬೇಕು ಎಂದು ಆದೇಶ ಹೊರಡಿಸಿದೆ. ಐದು ಲಕ್ಷ ಹಣವನ್ನು ನವೀನ್ ಅವರಿಗೆ ಪರಿಹಾರವಾಗಿ ನೀಡಬೇಕೆಂದು ಆದೇಶ ಹೊರಡಿಸಿದೆ.
ಪೋಕ್ಸೋ ಪ್ರಕರಣದಲ್ಲಿ ಸಂತ್ರಸ್ತೆಯ ಹೇಳಿಕೆಯ ಆಧಾರದ ಮೇಲೆ ನವೀನ್ ಅವರನ್ನು ಆರೋಪಿಯೆಂದು ಗುರುತಿಸಲಾಗಿತ್ತು. ರೋಸಮ್ಮ ಅವರು ನವೀನ್ ರನ್ನು ಬಂಧಿಸಿ ರೇವತಿ ಅವರಿಗೆ ಹಸ್ತಾಂತರಿಸಲಾಗಿತ್ತು. ಬಳಿಕ ನವೀನ್ ವಿರುದ್ಧ ಚಾರ್ಜ್ ಶೀಟ್ ಕೂಡ ದಾಖಲಾಗಿತ್ತು. ವಿಚಾರಣೆಯ ವೇಳೆ ನವೀನ್ ಪರ ವಾದ ಮಾಡಿದ್ದ ವಕೀಲರ ಹೇಳಿಕೆಯನ್ನು ಪರಿಶೀಲಿಸಿದ ನ್ಯಾಯಾಲಯ ನವೀನ್ ಅವರನ್ನು ನಿರಾಪರಾಧಿ ಎಂದು ಘೋಷಿಸಿದೆ.