ಬೆಂಗಳೂರು: ರಾಜ್ಯದಲ್ಲಿ ಈಗಾಗ್ಲೇ ಸಾಕಷ್ಟು ಕಡೆ ಕ್ರೈಸ್ತ ಧರ್ಮಕ್ಕೆ ಜನರನ್ನ ಮತಾಂತರ ಮಾಡಲಾಗಿದೆ. ಅದರಲ್ಲೂ ಆಸೆಗಳನ್ನ ಒಡ್ಡಿ ಮತಾಂತರ ಮಾಡ್ತಾ ಇದ್ದಾರೆ ಅನ್ನೋ ಆರೋಪ ಕೂಡ ಕೇಳಿ ಬರ್ತಿದೆ. ಈ ಬೆನ್ನಲ್ಲೇ ರಾಜ್ಯ ಸರ್ಕಾರ ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿ ತರೋದಕ್ಕೆ ಯೋಚಿಸಿದೆ ಎನ್ನಲಾಗಿದೆ.
ಈ ವಿಷಯ ತಿಳಿದ ಬಳಿಕ ಇದೀಗ ದಿಢೀರನೇ ಕ್ರೈಸ್ತ ಧರ್ಮದ ನಿಯೋಗ ಸಿಎಂ ಬಸವರಾಜ್ ಬೊಮ್ಮಾಯಿ ಅವರನ್ನ ಭೇಟಿ ಮಾಡಿದ್ದಾರೆ. ಸಿಎಂ ಸರ್ಕಾರಿ ನಿವಾಸದಲ್ಲಿ ಕ್ರೈಸ್ತ ಧರ್ಮದ ಮುಖಂಡರು ಭೇಟಿ ಮಾಡಿದ್ದಾರೆ. ಈ ವೇಳೆ ಮತಾಂತರ ಕಾಯ್ದೆ ನಿಷೇಧ ಬೇಡ ಎಂದು ಮನವಿ ಮಾಡಿದ್ದಾರೆ ಎನ್ನಲಾಗಿದೆ.
ಮತಾಂತರ ಕಾಯ್ದೆಯನ್ನ ಪರಾಮರ್ಶಿಸುವಂತೆ ಮನವಿ ಮಾಡಿದ್ದು, ಕ್ರೈಸ್ತ ಧರ್ಮದವರ ಸಮಸ್ಯೆಯನ್ನು ಆಲಿಸುವಂತೆ ಮನವಿ ಮಾಡಿದ್ದಾರೆ. ಈ ವೇಳೆ ಸಿಎಂ ಬೊಮ್ಮಾಯಿ ಅವರು ಅವರಿಗೆ ಭರವಸೆಯನ್ನ ನೀಡಿದ್ದಾರೆ ಎನ್ನಲಾಗಿದೆ. ನಿಮಗೆ ಅನ್ಯಾಯವಾಗುವಂತ ಯಾವುದೇ ನಿಯಮಗಳನ್ನು ಜಾರುಗೆ ತರಲ್ಲ ಎಂದಿದ್ದಾರೆ. ಇನ್ನು ಬಲವಂತವಾಗಿ ಮತಾಂತರ ಮಾಡುವುದು ನಡೆಯುತ್ತಿದೆ ಎಂದಾಗ ಅದಕ್ಕೆ ಕಾನೂನು ಕ್ರಮ ತೆಗೆದುಕೊಳ್ಳಿ ಎಂದು ನಿಯೋಗವೇ ಹೇಳಿದೆ ಎನ್ನಲಾಗಿದೆ.