Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಖ್ಯಾತ ನೇತ್ರ ತಜ್ಞ ಕೊಂಡ್ಲಹಳ್ಳಿಯ ಡಾ. ನಾಗರಾಜು ಇನ್ನಿಲ್ಲ

Facebook
Twitter
Telegram
WhatsApp

ಸುದ್ದಿಒನ್, ಚಿತ್ರದುರ್ಗ, (ಜೂ.15) :  ಜಿಲ್ಲೆಯ ಖ್ಯಾತ ನೇತ್ರ ತಜ್ಞ ಕೊಂಡ್ಲಹಳ್ಳಿಯ ಡಾ. ನಾಗರಾಜ‌ (77) ಅವರು ಇಂದು ಮಧ್ಯಾಹ್ನ  2 :10ಕ್ಕೆ ನಿಧನರಾದರು.

ಪತ್ನಿ, ಇಬ್ಬರು ಪುತ್ರರು ಸೇರಿದಂತೆ ಅಪಾರ ಬಂದುಬಳಗದವರನ್ನು ಅಗಲಿದ್ದಾರೆ. ಅವರ ಸ್ವಗ್ರಾಮವಾದ ಮೊಳಕಾಲ್ಮೂರು ತಾಲೂಕಿನ ಕೊಂಡ್ಲಹಳ್ಳಿಯ ಅವರ ತೋಟದಲ್ಲಿ ನಾಳೆ (ಜೂ.16) ಮಧ್ಯಾನ್ಹ 1 ಗಂಟೆಗೆ  ಅಂತ್ಯಕ್ರಿಯೆ ನೆರವೇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಡಾ: ಕೆ. ನಾಗರಾಜು ರವರ ಪರಿಚಯ

ಶ್ರೀಮತಿ ರುದ್ರಮ್ಮ ತಾಳ್ಕೇರಪ್ಪ ಮೇಲುಮಾಳಿಗೆ ಇವರ 8 ನೇ ಮಗನಾಗಿ ಕೃಷಿಕ ಕುಟುಂಬದಲ್ಲಿ ಜನಿಸಿದ ಡಾ: ಕೆ. ನಾಗರಾಜರವರು ಪ್ರಾಥಮಿಕ, ಪ್ರೌಢ ಹಾಗೂ ಪದವಿ ಪೂರ್ವ ಶಿಕ್ಷಣವನ್ನು ಸ್ವಂತ ಹುಟ್ಟೂರಾದ ಕೊಂಡ್ಲಹಳ್ಳಿ, ಮೊಳಕಾಲ್ಮೂರು ತಾಲೂಕು, ಚಿತ್ರದುರ್ಗ ಜಿಲ್ಲೆಯಲ್ಲಿ ಮುಗಿಸಿದರು. ತದನಂತರ ಎಂ.ಬಿ.ಬಿ.ಎಸ್. ಶಿಕ್ಷಣವನ್ನು 1974 ರಲ್ಲಿ ಜೆ ಜೆ ಎಂ ಮೆಡಿಕಲ್ ಕಾಲೇಜ್, ದಾವಣಗೆರೆಯಲ್ಲಿ ಪೂರೈಸಿದರು.

ಎಂ.ಬಿ.ಬಿ.ಎಸ್‌.  ಶಿಕ್ಷಣವನ್ನು ಪಡೆದ ನಂತರ 1975-79 ರವರೆಗೆ ಹುಬ್ಬಳ್ಳಿಯ ಪ್ರತಿಷ್ಠಿತ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ (ಕಿಮ್ಸ್) ಯಲ್ಲಿ “Assistant Surgeon” ಆಗಿ ಕೆಲಸ ನಿರ್ವಹಿಸಿದರು.

ತದ ನಂತರ ಕೊಂಡ್ಲಹಳ್ಳಿಯ ಹತ್ತಿರ ಇರುವ ಹಿರೇಹಳ್ಳಿಯ ಪ್ರಖ್ಯಾತ ನೇತ್ರ ತಜ್ಞರಾದ ಡಾ ಬಿ .ಎಂ. ತಿಪ್ಪೇಸ್ವಾಮಿಯವರ ಪ್ರೇರಣೆಯಿಂದ ನೇತ್ರ ತಜ್ಞರಾಗಬೇಕೆಂದು ತೀರ್ಮಾನಿಸುತ್ತಾರೆ. ಅವರ ಅಪೇಕ್ಷೆಯಂತೆ 1979 ರಲ್ಲಿ ಮಿಂಟೋ ಕಣ್ಣಿನ ಆಸ್ಪತ್ರೆ, ಬೆಂಗಳೂರಿನ “DOMS” ಪದವಿಯನ್ನು ಪಡೆಯುತ್ತಾರೆ.

DOMS” ಪದವಿಯನ್ನು ಪಡೆದ ನಂತರ ದಾವಣಗೆರೆಯ ಚಿಗಬೇರಿ ಜನರಲ್ ಆಸ್ಪತ್ರೆಯಲ್ಲಿ MOBILE OPTHALMIC UNIT “Medical Officer” ಆಗಿ ಕರ್ತವ್ಯ ನಿರ್ವಹಿಸಿದ್ದಾರೆ. ಪ್ರಪ್ರಥಮವಾಗಿ ಉಚಿತ ನೇತ್ರ ಶಸ್ತ್ರ ಚಿಕಿತ್ಸಾ ಶಿಬಿರಗಳನ್ನು ದಾವಣಗೆರೆಯಿಂದ ಪ್ರಾರಂಭಿಸುತ್ತಾರೆ.

ಇವರು “Medical Officer ಆಗಿ ದಾವಣಗೆರೆ, ಭರಮಸಾಗರ, ಜಗಳೂರು, ಕೊಂಡಜ್ಜಿ ಚಿತ್ರದುರ್ಗ, ಕೊಂಡ್ಲಹಳ್ಳಿ, ಕೋನಸಾಗರ, ಚೆಳ್ಳಕೆರೆ, ನಾಯಕನಹಟ್ಟಿ, ಹಿರಿಯೂರು, ಹೊಳಲ್ಕೆರೆ, ಹೊಸದುರ್ಗ ಹೀಗೆ ಅನೇಕ ಕಡೆಗಳಲ್ಲಿ‌ ಉಚಿತ ನೇತ್ರ ಶಸ್ತ್ರ ಚಿಕಿತ್ಸಾ ಶಿಬಿರಗಳನ್ನು ಬಹಳ ಯಶಸ್ವಿಯಾಗಿ ನೆರವೇರಿಸಿರುತ್ತಾರೆ.

ತದನಂತರ 1984-86 ರವರೆಗೆ ಮಿಂಟೋ ಕಣ್ಣಾಸ್ಪತ್ರೆ, ಬೆಂಗಳೂರಿನಲ್ಲಿ ಎಂ.ಎಸ್. ಪದವಿಯನ್ನು ಪಡೆಯುತ್ತಾರೆ. ತದನಂತರ ಕೂಡ “Medical Officer ಆಗಿ DMOU” ನಲ್ಲಿ ಕೆಲಸ ನಿರ್ವಹಿಸುತ್ತಾರೆ. ಇವರು M.S. ಶಿಕ್ಷಣವನ್ನು ಪಡೆಯುವಾಗ ವಿದ್ಯಾರ್ಥಿಯಾಗಿ ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕು, ದೋಣಿಮಲೈಯಲ್ಲಿ 2 ಶಸ್ತ್ರ ಚಿಕಿತ್ಸಾ ಕ್ಯಾಂಪ್‌ಗಳನ್ನು ನೆರವೇರಿಸಿರುತ್ತಾರೆ.

ತದನಂತರ 1990- 94 ರವರೆಗೆ ಸಹಾಯಕ ಪ್ರಾಧ್ಯಾಪಕರಾಗಿ ಸಿದ್ದಾರ್ಥ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸಿರುತ್ತಾರೆ.

ತದನಂತರ 1994-97 ರವರೆಗೆ ಸಹಾಯಕ ಪ್ರಾಧ್ಯಾಪಕರಾಗಿ ಬಳ್ಳಾರಿಯ ಪ್ರತಿಷ್ಠಿತ ವಿಜಯನಗರ ವೈದ್ಯಕೀಯ ವಿಜ್ಞಾನ, ಸಂಸ್ಥೆಯಲ್ಲಿ (VIMS) ಕಾರ್ಯ ನಿರ್ವಹಿಸಿದ್ದು, 1997 ರಿಂದ 2003 ರವರೆಗೆ ಪ್ರಾಧ್ಯಾಪಕರಾಗಿ ಕೆಲಸ ನಿರ್ವಹಿಸಿ, 2003-2005 ರವರೆಗೆ ಪ್ರಾಧ್ಯಾಪಕರು ಹಾಗೂ ವಿಭಾಗದ ಮುಖ್ಯಸ್ಥರು, ನೇತ್ರ ಶಾಸ್ತ್ರ ವಿಭಾಗ, ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ, ಬಳ್ಳಾರಿಯನ್ನು ಉತ್ತುಂಗಕ್ಕೆ ಬೆಳೆಸುತ್ತಾರೆ.

ವೈದ್ಯಕೀಯ ಕಾಲೇಜಿನ ನೇತ್ರಶಾಸ್ತ್ರ ವಿಭಾಗಕ್ಕೆ YAG LASER, GREEN LASER, B-SCAN, PERIMETRY, SLIT LAMP ಹೀಗೆ ಅನೇಕ ಬೆಲೆಬಾಳುವ ರೋಗವನ್ನು ಪತ್ತೆ ಮಾಡುವ ಸಾಮಗ್ರಿಗಳನ್ನು ತರಲು ಇವರು ಬಹಳ ಶ್ರಮಿಸಿದರು.

ಇವರ ಅವಧಿಯಲ್ಲಿ ತಿಂಗಳಿಗೆ 5 ಉಚಿತ ನೇತ್ರ ಶಸ್ತ್ರ ಚಿಕಿತ್ಸಾ ಶಿಬಿರಗಳನ್ನು ನಡೆಸಿರುತ್ತಾರೆ. ಬಳ್ಳಾರಿ ಜಿಲ್ಲೆಯ ಸಂಗನಕಲ್ಲು, ಶ್ರೀಧರಗಡ್ಡೆ, ಶಿಡಗಿನಮೊಳ, ಕೊರಗುಂದಿ, ಕುರುಗೋಡು, ಕರೂರು, ತೆಕ್ಕಲಕೋಟೆ, ಸಿರಿಗೇರಿ, ತಿರುಗುಪ್ಪ, ಧಾರಾವಿ, ರಾವಿಹಾಳು, ತೋರಣಗಲ್ಲು, ಸಂಡೂರು, ತಾಲಾನಗರ, ಮೆಟ್ರಿ, ಚೋರನೂರು, ಕೂಡ್ಲಿಗಿ, ಕೊಟ್ಟೂರು, ಸಿ ಜೆ ಹಳ್ಳಿ, ಜುಮ್ಮೇಲನಹಳ್ಳಿ, ಹೂವಿನ ಹಡಗಲಿ, ಇಟಗಿ, ಹಂಪಸಾಗರ, ಕೋಗಳ, ಹೊಳಗುಂದಿ ಹೀಗೆ ಅನೇಕ ಕಡೆಗಳಲ್ಲಿ ಉಚಿತ ನೇತ್ರ ಶಸ್ತ್ರ ಚಿಕಿತ್ಸಾ ಶಿಬಿರ ನಡೆಸಿದ ಕೀರ್ತಿ ಇವರಿಗೆ ಸಲ್ಲುತ್ತದೆ.

ಇವರು DOMS ಪದವಿಯನ್ನು ಪಡೆದಂದಿನಿಂದಲೂ ಪ್ರತಿ ತಿಂಗಳು 2ನೇ ಶನಿವಾರ ಮೊಳಕಾಲ್ಕೂರು, 2ನೇ ಭಾನುವಾರ ಕೊಂಡ್ಲಹಳ್ಳಿಯಲ್ಲಿ ಉಚಿತ ನೇತ್ರ ಶಿಬಿರಗಳನ್ನು ನಡೆಸಿ ಶಸ್ತ್ರ ಚಿಕಿತ್ಸಾ ಶಿಬಿರಗಳನ್ನು ನಡೆಸುತ್ತಾ ಬಂದಿದ್ದಾರೆ.

ತುಮಕೂರಿನಲ್ಲಿರುವಾಗ ಸಿದ್ಧಾರ್ಥ ವೈದ್ಯಕೀಯ ವಿಜ್ಞಾನ ಸಂಸ್ಥೆ, ದಾವಣಗೆರೆಯಲ್ಲಿ ಇರುವಾಗ ಚಿಗಟೇರಿ ಜನರಲ್ ಆಸ್ಪತ್ರೆ ಮತ್ತು ಬಳ್ಳಾರಿಯಲ್ಲಿ ಇರುವಾಗ ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ, ನಿವೃತ್ತಿಯ ನಂತರ ಕೆಲವು ದಿನಗಳವರೆಗೆ ರೋಟರಿ ಕಣ್ಣಿನ ಆಸ್ಪತ್ರೆ, ಬಳ್ಳಾರಿಯಲ್ಲಿ ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆ ಶಿಬಿರಗಳನ್ನು ನೆರವೇರಿಸಿರುತ್ತಾರೆ. ಇಲ್ಲಿಯವರೆಗೆ ಸುಮಾರು 1 ಲಕ್ಷಕ್ಕೂ ಅಧಿಕ ಜನರಿಗೆ ನೇತ್ರ ಶಸ್ತ್ರ ಚಿಕಿತ್ಸೆಗಳನ್ನು ನೆರವೇರಿಸಿರುತ್ತಾರೆ.

ನಿವೃತ್ತಿಯ ನಂತರ ಗ್ರಾಮೀಣ ಸೇವೆ ಮಾಡಬೇಕೆಂದು ಬಯಸಿದ ಅವರು ತಮ್ಮ ಹುಟ್ಟೂರಾದ ಕೊಂಡ್ಲಹಳ್ಳಿಯಲ್ಲಿ ಅವರ ತಂದೆ ತಾಯಿಯವರ ಹೆಸರಿನಲ್ಲಿ ಬಹಳ ದೊಡ್ಡದಾದ “ಮೇಲುಮಾಳಗಿ ರುದ್ರಮ್ಮ ತಾಳ್ಕೇರಪ್ಪ ಗ್ರಾಮಾಂತರ ಕಣ್ಣಿನ ಆಸ್ಪತ್ರೆ” ಯನ್ನು ಸ್ಥಾಪನೆ ಮಾಡಿ ಅವರ ಜೀವನದ ಆಸೆಯಾದ ಗ್ರಾಮೀಣ ಸೇವೆ ಮಾಡುವ ಕನಸನ್ನು ನನಸಾಗಿಸಿದ್ದಾರೆ. ಜಿಲ್ಲಾ ಕೇಂದ್ರಗಳಲ್ಲಿ ಸಿಗುವಂತಹ ಎಲ್ಲಾ ಸೌಲಭ್ಯಗಳನ್ನು ಈ ಕಣ್ಣಿನ ಆಸ್ಪತ್ರೆಯಲ್ಲಿ ದೊರೆಯುವಂತೆ ಮಾಡಿ ಬಡ ಜನರಿಗೆ ಸಂಜೀವಿನಿಯಾಗಿದ್ದಾರೆ.

ಕಣ್ಣಿನ ಪೊರೆ ಚಿಕಿತ್ಸೆ  Phacoemulisification Surgery, DCR, DCT, Ectropion, Entropion, Squint ಹೀಗೆ ಅನೇಕ ಶಸ್ತ್ರಚಿಕಿತ್ಸೆ ಕೊಂಡ್ಲಹಳ್ಳಿಯಲ್ಲಿ ಮಾಡಲು ಅವಕಾಶ ಮಾಡಿಕೊಟ್ಟಿದ್ದಾರೆ.

ಈ ಕಣ್ಣಿನ ಆಸ್ಪತ್ರೆ ಇರುವುದರಿಂದ ಇಲ್ಲಿಯ ಸುತ್ತಮುತ್ತಲು ಬಡವರಿಗೆ ಬಳ್ಳಾರಿ, ದಾವಣಗೆರೆ, ‘ಅನಂತಪುರ, ಚಿತ್ರದುರ್ಗ ಹೀಗೆ ಅನೇಕ ಕಡೆ ಹೋಗಲು ಅನುಕೂಲ ಇಲ್ಲದವರಿಗೆ ಬಹಳ ಅನುಕೂಲವಾಗಿದೆ.
ಕೊಂಡ್ಲಹಳ್ಳಿ ಎಂಬ ಪುಟ್ಟ ಗ್ರಾಮಕ್ಕೆ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಕೂರು, ಚಳ್ಳಕೆರೆ, ಹಿರಿಯೂರು, ಹೊಸದುರ್ಗ, ಚಿತ್ರದುರ್ಗ, ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ, ಕೊಟ್ಟೂರು, ಚಿಕ್ಕಜೋಗಿಹಳ್ಳಿ, ಹಗರಿಬೊಮ್ಮನಹಳ್ಳಿ, ಹೊಸಪೇಟೆ, ಸಂಡೂರು, ಅನಂತಪುರ ಜಿಲ್ಲೆಯ ರಾಯದುರ್ಗ, ಕಲ್ಯಾಣದುರ್ಗ, ಗುಂತಕಲ್, ಆನಂತಪುರ, ಧರ್ಮಾವರಂ, ದಾವಣಗೆರೆ ಜಿಲ್ಲೆಯ ಜಗಳೂರು, ಭರಮಸಾಗರ, ಮಾಯಕೊಂಡ, ಚನ್ನಗಿರಿ, ಹರಪನಹಳ್ಳಿ ಹೀಗೆ ಅನೇಕ ಕಡೆಗಳಿಂದ ರೋಗಿಗಳು ಬಂದು ಚಿಕಿತ್ಸೆ ಪಡೆಯುತ್ತಿದ್ದರು.

ಈ ಎಲ್ಲಾ ಕಡೆಗಳಂದ ರೋಗಿಗಳು ವೈದ್ಯರನ್ನು ಹುಡುಕಿಕೊಂಡು ಬರಲು ಕಾರಣ ಡಾ.ಕೆ. ನಾಗರಾಜರವರು ಮೂವತ್ತು (35) ವರ್ಷಗಳಿಂದ ಪ್ರತಿ ತಿಂಗಳು 2ನೇ ಶನಿವಾರ ಮತ್ತು 2ನೇ ಭಾನುವಾರ ಕ್ರಮವಾಗಿ ಮೊಳಕಾಲ್ಕೂರು ಹಾಗೂ ಕೊಂಡ್ಲಹಳ್ಳಿಯಲ್ಲಿ ತಮ್ಮೆಲ್ಲಾ ಕೆಲಸಗಳನ್ನು ಬದಿಗೊತ್ತಿ ಉಚಿತ ನೇತ್ರ ತಪಾಸಣೆ ಶಿಬಿರಕ್ಕೆ ಹಾಜರಾಗುತ್ತಿರುವವರೇ ಇವರು ಕೊಂಡ್ಲಹಳ್ಳಿಯಲ್ಲಿ ಆಸ್ಪತ್ರೆ ನಿರ್ಮಾಣ ಮಾಡಲು ಪ್ರೇರಣೆ ಎಂದರೆ ತಪ್ಪಾಗಲಾರದು.

ತದನಂತರ ರುದ್ರಮ್ಮ ತಾಳಕೇರಪ್ಪ ರೂರಲ್ ಎಜುಕೇಷನ್ ಟ್ರಸ್ಟನ್ನು ಸ್ಥಾಪಿಸಿ ಇದರ ಮುಖಾಂತರ ಪರಶುರಾಂಪುರ, ನಾಯನಹಟ್ಟಿ, ಚಳ್ಳಕೆರೆ, ಹಿರಿಯೂರು, ಬಳ್ಳಾರಿ ಜಿಲ್ಲೆಯ ಶಿರುಗುಪ್ಪ, ಹೂವಿನ ಹಡಗಲಿ, ಸಂಡೂರು, ಕೂಡ್ಲಿಗಿ, ಚಿಕ್ಕಜೋಗಿಹಳ್ಳಿ, ಕೊಟ್ಟೂರು, ತೆಕ್ಕಲಕೋಟೆ, ಕುರುಗೋಡು, ರಾಧಾವಿ, ತಾರಾನಗರ, ಶಿಡಗಿನಮೊಳ ಹೀಗೆ ಅನೇಕ ಕಡೆಗಳಲ್ಲಿ ಶಸ್ತ್ರ ಚಿಕಿತ್ಸೆಗೆ ಬೇಕಾದ Microscope ನ್ನು ಕೂಡ ಶಿಬಿರದ ಸ್ಥಳಗಳಿಗೆ ತೆಗೆದುಕೊಂಡು ಶಿಬಿರಗಳನ್ನು ಯಶಸ್ವಿಯಾಗಿ ನೆರವೇರಿಸಿರುತ್ತಾರೆ.

ಇವರ ಹಾಗೆ ಇವರ ಮಗನಾದ ಡಾ: ಎನ್ ವಿಜಯರವರು ಎಲ್ಲಾ ಶಸ್ತ್ರ ಚಿಕಿತ್ಸಾ ಶಿಬಿರಗಳಲ್ಲಿ ಭಾಗವಹಿಸಿ ಅವರಿಗೆ ಬೆನ್ನೆಲುಬಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಇವರಿಗಾಗಿ ಬಳ್ಳಾರಿಯಲ್ಲಿ ವಿಜಯನಾಗರಾಜ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆಯನ್ನು ನಿರ್ಮಿಸಿ ಇಲ್ಲಿ ಕೂಡಾ ಸೋಮವಾರದಿಂದ ಗುರುವಾರದವರೆಗೆ ಕೆಲಸವನ್ನು ನಿರ್ವಹಿಸುತ್ತಾರೆ. ಹಾಗೂ ಕೊಂಡ್ಲಹಳ್ಳಿಯಲ್ಲಿ ಕಾರ್ಯ ನಿರ್ವಹಿಸುತ್ತಾರೆ.

ಇವರ ಸೇವೆಯನ್ನು ಗುರುತಿಸಿ ಚಿತ್ರದುರ್ಗ ಜಿಲ್ಲಾಡಳಿತ 2018 ನೇ ಸಾಲಿನಲ್ಲಿ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಹಾಗೂ ಇದುವರೆಗೆ ಅನೇಕ ಸಂಘ ಸಂಸ್ಥೆಗಳವರು ಅನೇಕಾನೇಕ ಗೌರವಗಳನ್ನು ನೀಡಿ ಸನ್ಮಾನಿಸಿರುತ್ತಾರೆ.

ವಿವರಗಳು ಈ ಕೆಳಗಿನಂತಿವೆ.

• ಲಯನ್ಸ್ ಕ್ಲಬ್, ದಾವಣಗೆರೆ ಇವರು ಖ್ಯಾತ ನೇತ್ರ ತಜ್ಞ ಡಾ: ಎಂ.ಸಿ. ಮೋದಿ ಹಾಗೂ ಡಾ.ಕೆ. ನಾಗರಾಜ್ ರವರನ್ನು ಒಂದೇ ವೇದಿಕೆಯಲ್ಲಿ ಸನ್ಮಾನಿಸಿರುತ್ತಾರೆ.

• ಲಯನ್ಸ್ ಕ್ಲಬ್, ಸಿಲ್ಕ್ ಸಿಟಿ, ಮೊಳಕಾಲ್ಕೂರು, ಲಯನ್ಸ್‌ ಕ್ಲಬ್, ಆಯಿಲ್ ಸಿಟಿ, ಚೆಳ್ಳಕೆರೆ, ಲಯನ್ಸ್ ಕ್ಲಬ್, ಜಗಳೂರು, ಬಳ್ಳಾರಿ, ಹೂವಿನ ಹಡಗಲಿ, ಗಂಗಾವತಿ, ರಾಯದುರ್ಗ, ಹಿರಿಯೂರು ಕರ್ನಾಟಕ ರಾಜ್ಯ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘ, ಬೆಂಗಳೂರು, ಬಳ್ಳಾರಿ ಜಿಲ್ಲಾ ಘಟಕ
ದೇವರಾಜ ಅರಸು ವೇದಿಕೆ, ವೀರಶೈವ ತರುಣ ಸಂಘ, ಬಳ್ಳಾರಿ,
ಕನ್ನಡ ಚೈತನ್ಯ ವೇದಿಕೆ, ಬಳ್ಳಾರಿ, ಕುರುಗೋಡು

ಕರ್ನಾಟಕ ರಕ್ಷಣಾ ವೇದಿಕೆ, ಬಳ್ಳಾರಿ

ಮುರುಘಾಮಠ, ಚಿತ್ರದುರ್ಗ

ಇನ್ನರ್ ವೀಲ್ಡರ್ ಕ್ಲಬ್, ಚಿತ್ರದುರ್ಗ

ರೋಟರಿ ಕ್ಲಬ್, ಬಳ್ಳಾರಿ, ಸಂಡೂರು, ಕೊಟ್ಟೂರು

ರಾಷ್ಟ್ರೀಯ ಬಸವದಳ, ಚಿತ್ರನಾಯ್ಕನಹಳ್ಳ

ಎ ಎನ್ ಎಸ್ ಎಸ್ ಸೇವಾ ಶಿಬಿರ, ಚಳ್ಳಕೆರೆ, ಹಿರಿಯೂರು

ಡೋಣೂರು ಚಾನುಕೋಟಿ ಮಠ, ಕೊಟ್ಟೂರು

ಕಾರ್ಮೆಲ್ ಸೇವಾ ಸದನ, ಹೂವಿನ ಹಡಗಲ

ರಿಕ್ರಿಯೇಷನ್ ಕ್ಲಬ್, ಶಿರುಗುಪ್ಪ

ಜಿ ಟಿ ಸೇವಾ ಟ್ರಸ್ಟ್, ತಾರಾನಗರ

ಸುಂದರ ಯುವಕ ಸಂಘ, ಕೋನಸಾಗರ

ಸ್ವಕುಳ ಶಾಲೆ ಸಮಾಜ ಪದ್ಯಶಾಲ ಸಂಘ, ಮೊಳಕಾಲ್ಮೂರು

ಬಸವದಳ, ಬಳ್ಳಾರಿ ಇವರು 2011 ಮತ್ತು 2012 ರಲ್ಲಿ ಎರಡು ಬಾರಿ ಸನ್ಮಾನಿಸಿದ್ದಾರೆ. ಶ್ರೀ ಶಿರಡಿ ಸಾಯಿ ಸೇವಾ ಸತ್ಸಂಗ ಟ್ರಸ್ಟ್, ಬಳ್ಳಾರಿ, ಮಣಿಪಾಲ್ 2016 ರಲ್ಲಿ ಗೌರವವನ್ನು ನೀಡಿರುತ್ತಾರೆ.

 

Facebook
Twitter
Telegram
WhatsApp
suddionenews

suddionenews

Leave a Comment

Top Stories

ಡಿಸೆಂಬರ್ 01 ರಿಂದ ಬೆಂಬಲ ಬೆಲೆಯಲ್ಲಿ ರಾಗಿ ಖರೀದಿ : ಜಿಲ್ಲಾಧಿಕಾರಿ ಟಿ.ವೆಂಕಟೇಶ್

  ಚಿತ್ರದುರ್ಗ. ನ.22: ಪ್ರಸಕ್ತ ಮುಂಗಾರು ಹಂಗಾಮಿನ ರಾಗಿ ಬೆಳೆಯನ್ನು ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಖರೀದಿಸಲು ಡಿಸೆಂಬರ್ 01 ರಿಂದ ನೋಂದಣಿ ಕಾರ್ಯ ಪ್ರಾರಂಭಿಸಲಾಗುವುದು. ಡಿ.31 ರವರೆಗೆ ನೋಂದಣಿ ನಡೆಯಲಿದೆ. ಪ್ರತಿ ಕ್ವಿಂಟಾಲ್

ಸತತ ಏರಿಕೆಯತ್ತ ಸಾಗುತ್ತಿದೆ ಚಿನ್ನದ ಬೆಲೆ : ಇಂದಿನ ದರ ಹೀಗಿದೆ..!

ಚಿನ್ನದ ಬೆಲೆ ಇಳಿಕೆಯಾಯ್ತು ಎಂದು ಖುಷಿ ಪಡುತ್ತಿರುವಾಗಲೇ ಇದೇನಿದು ಒಂದೇ ಸಮನೇ ಏರುತ್ತಲೇ ಇದೆ. ಅದರಲ್ಲೂ 70-80 ರೂಪಾಯಿ ಏರುತ್ತಿದೆ. ಇಂದು ಕೂಡ ಚಿನ್ನದ ದರ ಏರಿಕೆಯಾಗಿದ್ದು, 70 ರೂಪಾಯಿ ಗ್ರಾಂಗೆ ಜಾಸ್ತಿಯಾಗಿದೆ. ಈ

ಚಿತ್ರದುರ್ಗ | ಯೋಗೀಶ್ ಸಹ್ಯಾದ್ರಿ ಬಿಜೆಪಿ ಸೇರ್ಪಡೆ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಸುದ್ದಿಒನ್, ಚಿತ್ರದುರ್ಗ ನ. 22 : ಉಪನ್ಯಾಸಕರು ಹಾಗೂ ಸಹ್ಯಾದ್ರಿ ಇಂಗ್ಲಿಷ್ ಅಕಾಡೆಮಿ, ಅಧ್ಯಕ್ಷರಾದ ಯೋಗೀಶ್ ಸಹ್ಯಾದ್ರಿಯವರು ಬಿಜೆಪಿ

error: Content is protected !!