Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಆಪರೇಷನ್ ಅಜಯ್ : ಇಸ್ರೇಲಿನಿಂದ ತವರಿಗೆ ಬಂದಿಳಿದ 212 ಭಾರತೀಯರು

Facebook
Twitter
Telegram
WhatsApp

 

ಸುದ್ದಿಒನ್, ನವದೆಹಲಿ, ಅಕ್ಟೋಬರ್.13 : ಇಸ್ರೇಲ್ ನಿಂದ ತವರಿಗೆ ಮರಳಿದ ಪ್ರಯಾಣಿಕರನ್ನು ವಿಮಾನ ನಿಲ್ದಾಣದಲ್ಲಿ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಅವರು ಸ್ವಾಗತಿಸಿದರು.

ಇಸ್ರೇಲ್‌ನಲ್ಲಿ ನಡೆಯುತ್ತಿರುವ ಯುದ್ಧದ ಹಿನ್ನೆಲೆಯಲ್ಲಿ 212 ಭಾರತೀಯರನ್ನು ಹೊತ್ತ ಮೊದಲ ಚಾರ್ಟರ್ಡ್ ವಿಮಾನ ಗುರುವಾರ ಬೆನ್ ಗುರಿಯಾನ್ ವಿಮಾನ ನಿಲ್ದಾಣದಿಂದ ಹೊರಟಿತ್ತು. “ಇಸ್ರೇಲ್‌ನಲ್ಲಿ ವಾಸಿಸುತ್ತಿರುವ ನಮ್ಮ ಭಾರತೀಯ ನಾಗರಿಕರು ಶೀಘ್ರದಲ್ಲೇ ರಾಯಭಾರ ಕಚೇರಿಯಲ್ಲಿ ನೋಂದಾಯಿಸಿಕೊಳ್ಳುವಂತೆ ವಿನಂತಿಸಲಾಗಿದೆ” ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.

ಇಸ್ರೇಲ್ ಮತ್ತು ಹಮಾಸ್ ನಡುವೆ ಭೀಕರ ಯುದ್ಧ ಮುಂದುವರೆದಿದೆ . ಈ ಯುದ್ಧದಲ್ಲಿ ಎರಡೂ ದೇಶಗಳ ನಾಗರಿಕರೂ ಸಾವನ್ನಪ್ಪಿದರು. ಈ ಹಿನ್ನೆಲೆಯಲ್ಲಿ ಭಾರತವು ಇಸ್ರೇಲ್‌ನಿಂದ ತನ್ನ ನಾಗರಿಕರ ಸುರಕ್ಷಿತವಾಗಿ ಕರೆತರಲು ಆಪರೇಷನ್ ಅಜಯ್ ಅನ್ನು ಪ್ರಾರಂಭಿಸಿತು.
ಇಸ್ರೇಲ್‌ನಿಂದ 212 ಭಾರತೀಯರ ಮೊದಲ ವಿಮಾನ ಇಂದು ಬೆಳಿಗ್ಗೆ  ನವದೆಹಲಿ ವಿಮಾನ ನಿಲ್ದಾಣಕ್ಕೆ ಆಗಮಿಸಿತು.

ಇಸ್ರೇಲ್‌ನಲ್ಲಿ ಸುಮಾರು 18,000 ಭಾರತೀಯರು : ಮಾಹಿತಿ ಪ್ರಕಾರ ಇಸ್ರೇಲ್ ನಲ್ಲಿ ಸುಮಾರು 18000 ಭಾರತೀಯರಿದ್ದಾರೆ. ಅವರಲ್ಲಿ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಸಹ ಸೇರಿದ್ದಾರೆ. ಈವರೆಗೆ ಯಾವುದೇ ಭಾರತೀಯರು ಗಾಯಗೊಂಡಿರುವ ಬಗ್ಗೆ ವರದಿಯಾಗಿಲ್ಲ. ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಓರ್ವ ಗಾಯಗೊಂಡ ವ್ಯಕ್ತಿಯೊಂದಿಗೆ ಸಂಪರ್ಕದಲ್ಲಿದ್ದೇವೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ. 

Facebook
Twitter
Telegram
WhatsApp
suddionenews

suddionenews

Leave a Comment

Top Stories

ಅಂಕಿತಾ ಸಾಧನೆ ಕೊಂಡಾಡಿದ ಸಿಎಂ ಸಿದ್ದರಾಮಯ್ಯ: ಮೆಳ್ಳಿಗೇರಿ ಶಾಲೆಗೆ 50 ಲಕ್ಷ ಅನುದಾನ

ಬಾಗಲಕೋಟೆ: ಇತ್ತಿಚೆಗಷ್ಟೇ ಎಸ್ಎಸ್ಎಲ್ಸಿ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದೆ. ಆ ಫಲಿತಾಂಶದಲ್ಲಿ ಇಡೀ ರಾಜ್ಯಕ್ಕೆ ಏಕೈಕ ವಿದ್ಯಾರ್ಥಿನಿ ಫಸ್ಟ್ ರ್ಯಾಂಕ್ ಬಂದಿರುವುದು. ಬಾಗಲಕೋಟೆಯ ಅಂಕಿತ. ಬಡತನದಲ್ಲಿಯೇ ಬೆಳೆದರು ಇಡೀ ರಾಜ್ಯಕ್ಕೆ ಫಸ್ಟ್ ರ್ಯಾಂಕ್ ಬಂದಿದ್ದಾರೆ. ಅಂಕಿತಾಗೆ

ICMR : ಊಟದ ಮೊದಲು ಅಥವಾ ನಂತರ ಕಾಫೀ ಅಥವಾ ಟೀ ಕುಡಿಯಬಾರದು, ಯಾಕೆ ಗೊತ್ತಾ ?

ಸುದ್ದಿಒನ್ : ಅನೇಕರಿಗೆ ಟೀ ಮತ್ತು ಕಾಫಿ ಕುಡಿಯುವ ಅಭ್ಯಾಸವಿದೆ. ಕೆಲವರು ದಿನಕ್ಕೆ 3 ಅಥವಾ 4 ಬಾರಿ ಕುಡಿಯುತ್ತಾರೆ. ಆದರೆ ಕೆಲವರು ಊಟಕ್ಕೆ ಮುಂಚೆ ಮತ್ತು ನಂತರ ಚಹಾ ಮತ್ತು ಕಾಫಿ ಕುಡಿಯುತ್ತಾರೆ.

ಈ ರಾಶಿಯವರಿಗೆ ನಂಬಿದ ವ್ಯಕ್ತಿಯಿಂದಲೇ ಮೋಸ, ಇವರು ಭರಣಿ ನಕ್ಷತ್ರದಲ್ಲಿ ಹುಟ್ಟಿದವರು ಧರಣಿ ಆಳಬೇಕು ಆದರೆ ಉಲ್ಟಾ ಇದೆಯಲ್ಲ!

ಈ ರಾಶಿಯವರಿಗೆ ನಂಬಿದ ವ್ಯಕ್ತಿಯಿಂದಲೇ ಮೋಸ, ಇವರು ಭರಣಿ ನಕ್ಷತ್ರದಲ್ಲಿ ಹುಟ್ಟಿದವರು ಧರಣಿ ಆಳಬೇಕು ಆದರೆ ಉಲ್ಟಾ ಇದೆಯಲ್ಲ!   , ಬುಧವಾರ-ರಾಶಿ ಭವಿಷ್ಯ ಮೇ-15,2024 ಸೂರ್ಯೋದಯ: 05:47, ಸೂರ್ಯಾಸ್ತ : 06:37 ಶಾಲಿವಾಹನ

error: Content is protected !!