ವಿಶ್ವಕಪ್ ಮುಗಿದ ಬೆನ್ನಲ್ಲೇ ಟೀಂ ಇಂಡಿಯಾ ಮುಖ್ಯ ಕೋಚ್ ಆಗಿ ಗೌತಮ್ ಗಂಭೀರ್ ಆಯ್ಕೆಯಾಗಿದ್ದಾರೆ. ಗೌತಮ್ ಗಂಭೀರ್ ನಾಯಕತ್ವದಲ್ಲಿ ಶ್ರೀಲಂಕಾ ಪಂದ್ಯ ನಡೆಯಲಿದೆ. ಶ್ರೀಲಂಕಾದ ಸರಣಿ ಪಂದ್ಯಗಳಿಗೆ ಕೆ.ಎಲ್ ರಾಹುಲ್ ಕ್ಯಾಪ್ಟನ್ ಆಗಲಿದ್ದಾರೆ ಎನ್ನಲಾಗಿದೆ. ಗೌತಮ್ ಶ್ರೀಲಂಕಾ ಪಂದ್ಯದಿಂದ ಹೊಸ ಇನ್ನಿಂಗ್ಸ್ ಆರಂಭಿಸಿದ್ದು, ಅವರ ನೇತೃತ್ವದಲ್ಲಿ ಟೀಂ ಇಂಡಿಯಾ ಗೆಲ್ಲಬೇಕಿದೆ. ಮೊದಲ ಗೆಲುವು ಬಹಳ ಮುಖ್ಯವಾಗುತ್ತದೆ.
ಇನ್ನು ಈ ಸರಣಿ ಪಂದ್ಯಗಳಿಂದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ಜಸ್ಪ್ರಿತ್ ಬೂಮ್ರ ವಿಶ್ರಾಂತಿ ಬಯಸಿದ್ದಾರೆ. ಹೀಗಾಗಿ ಟೀಂ ಇಂಡಿಯಾದ ನಾಯಕನನ್ನಾಗಿ ಕೆ.ಎಲ್. ರಾಹುಲ್ ಅವರನ್ನೇ ಆಯ್ಕೆ ಮಾಡಲಿದ್ದಾರೆ ಎಂಬ ವಿಚಾರ ಸಾಕಷ್ಟು ಚರ್ಚೆಯಾಗುತ್ತಿದೆ. ಗೌತಮ್ ಗಂಭೀರ್ ನಿರ್ಧಾರ ತೆಗೆದುಕೊಂಡು ಟೀಂ ಇಂಡಿಯಾದ ನಾಯಕನನ್ನಾಗಿ ಮಾಡಿದರೆ ಶ್ರೀಲಂಕಾ ವಿರುದ್ಧದ ಸರಣಿ ಪಂದ್ಯಗಳಲ್ಲಿ ಟೀಂ ಇಂಡಿಯಾವನ್ನು ಕೆ.ಎಲ್.ರಾಹುಲ್ ಮುಂದುವರೆಸಲಿದ್ದಾರೆ.
ಆದರೆ ಟೀಂ ಇಂಡಿಯಾದ ನಾಯಕನಾದರೂ ಮುನ್ನಡೆಸುವುದು ಅಷ್ಟು ಸುಲಭವಲ್ಲ. ಹಲವು ಸವಾಲುಗಳನ್ನುಬೆದುರಿಸಬೇಕಾದ ಪರಿಸ್ಥಿತಿ ಬರಲಿದೆ. ಕೆ.ಎಲ್.ರಾಹುಲ್ ಇತ್ತಿಚೆಗೆ ನಡೆದ ಟಿ20 ವಿಶ್ವಕಪ್ ಪಂದ್ಯಕ್ಕೆ ಆಯ್ಕೆಯಾಗಿರಲಿಲ್ಲ. ಸ್ಟ್ರೈಕ್ ರೇಟ್, ಸ್ಲೋ ಇನ್ನಿಂಗ್ಸ್ ಇದಕ್ಕೆಲ್ಲ ಕಾರಣ. ಈಗಾಗಲೇ ಟಿ20 ಕ್ರಿಕೆಟ್ ನಲ್ಲಿ ಎಲ್ಲಾ ಸ್ಲಾಟ್ ಗೂ ಹೆಚ್ಚು ಆಪ್ಶನ್ ಗಳು ಇದಾವೆ. ಹೀಗಾಗಿ ರಾಹುಲ್ ಅವರನ್ನು ಟಿ20 ಕ್ರಿಕೆಟ್ ನಿಂದ ದೂರ ಇಡುವ ಪ್ಲ್ಯಾನ್ ಮಾಡಿದ್ದಾರೆ ಗೌತಮ್ ಗಂಭೀರ್ ಎಂದು ಹೇಳಲಾಗ್ತಾ ಇದೆ. ಈಗಾಗಲೇ ಟಿ20 ವಿಶ್ವಕಪ್ ಬಳಿಕ ರೋಹಿತ್ ಶರ್ಮಾ ನಿವೃತ್ತಿ ಘೋಷಣೆ ಮಾಡಿದ್ದಾರೆ. ಹೀಗಾಗಿ ಟಿ20 ಸರಣಿ ಮೂಲಕ ಟೀಂ ಇಂಡಿಯಾದ ನಾಯಕ ಯಾರಾಗಬಹುದು ಎಂಬ ಚರ್ಚೆ ಶುರುವಾಗಿದೆ.