ಕಾಲೇಜಿನಲ್ಲಿ ಬಡ್ತಿ ಪಡೆಯುವ ಉದ್ದೇಶದಿಂದ ಮಾಜಿ ಶಾಸಕರ ಪತ್ನಿಯೊಬ್ಬರು ಸುಳ್ಳು ಜಾತಿ ಪ್ರಮಾಣ ಸೃಷ್ಟಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಡಾ. ಸುಜಾತ ಕೆ ಶ್ರೀಧರ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಡಾ. ಸುಜಾತ,ನೆಲಮಂಗಲ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಡಾ. ಕೆ ಶ್ರೀನಿವಾಸ ಮೂರ್ತಿ ಅವರ ಪತ್ನಿ. ಅವರ ರಾಜಕೀಯ ಪ್ರಭಾವ ಬಳಸಿ ಸುಳ್ಳು ಜಾತಿ ಪ್ರಮಾಣ ಪತ್ರ ಸೃಷ್ಟಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಡಾ. ಸುಜಾತ ಅವರು ಸರ್ಕಾರಿ ಆಯುರ್ವೇದ ವೈದ್ಯಕೀಯ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಅದೇ ಕಾಲೇಜಿನಲ್ಲಿ ಡಾ. ಜಿ ಎನ್ ಶಕುಂತಲಾ ಎಂಬುವವರು ಕೂಡ ಕೆಲಸ ಮಾಡುತ್ತಿದ್ದಾರೆ. ಶಕುಂತಲಾ ಅವರಿಗೆ ಬಡ್ತಿ ಸಿಕ್ಕಿದೆ. ಆದರೆ ತಮ್ಮ ಪ್ರಭಾವ ಬಳಸಿ ಶ್ರೀನಿವಾಸ ಮೂರ್ತಿಯವರು, ತಮ್ಮ ಪತ್ನಿಗೆ ಬಡ್ತಿ ಕೊಡಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಈ ಸಂಬಂಧ ದೂರು ದಾಖಲಿಸಿರುವ ಶಕುಂತಲಾ ಅವರು, ಸುಳ್ಳು ಜಾತಿ ಪ್ರಮಾಣ ಪತ್ರ ನಿಒಡಿರುವ ಸುಜಾತ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ ಎಂದು ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ, ಪೊಲೀಸ್ ಅಧೀಕ್ಷಕ ಹೆಚ್ ಡಿ ಆನಂದ್ ಕುಮಾರ್ ಅವರಿಗೆ ದೂರು ನೀಡಿದ್ದಾರೆ. ಮಾಜಿ ಶಾಸಕ ಶ್ರೀನಿವಾಸ ಮೂರ್ತಿ ದ್ರಾವಿಡ ಸಮುದಾಯಕ್ಕೆ ಸೇರಿದ್ದಾರೆ. ಸುಜಾತ ಅವರು ಎಳವ ಜಾತಿಗೆ ಸೇರಿದವರು. ಆದರೆ ತನ್ನ ಪತಿಯ ಪ್ರಭಾವ ಬಳಸಿ ದ್ರಾವಿಡ ಜಾತಿ ಪ್ರಮಾಣ ಪತ್ರವನ್ನು ಪಡೆದಿದ್ದಾರೆ. ಮಕ್ಕಳಿಗೆ ತಂದೆಯ ಜಾತಿ ಅನ್ವಯಿಸುತ್ತದೆ. ಇದಕ್ಕೆ ನ್ಯಾಯ ಕೊಡಿಸಿ ಎಂದು ದೂರು ನೀಡಿದ್ದಾರೆ.